ಇಂಡಿಯನ್ ಬ್ಯಾಂಕ್ ಸ್ಪೆಷಲಿಸ್ಟ್ ನೇಮಕಾತಿ 2024: ಒಟ್ಟು 102 ಹುದ್ದೆಗಳ ಭರ್ತಿ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ?

ಇಂಡಿಯನ್ ಬ್ಯಾಂಕ್ ಸ್ಪೆಷಲಿಸ್ಟ್ ನೇಮಕಾತಿ 2024: ಒಟ್ಟು 102 ಹುದ್ದೆಗಳ ಭರ್ತಿ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ?

ಸ್ನೇಹಿತರೇ, ದೇಶದ ಪ್ರಮುಖ ಹಣಕಾಸು ಸಂಸ್ಥೆಗಳಲ್ಲಿ ಒಂದಾದ ಇಂಡಿಯನ್ ಬ್ಯಾಂಕ್ ನಲ್ಲಿ ಖಾಲಿ ಇರುವ ವಿವಿಧ ಸ್ಪೆಷಲಿಸ್ಟ್ ಸಿಬ್ಬಂದಿ ಹುದ್ದೆಗಳನ್ನು (ಅಸಿಸ್ಟಂಟ್ ವೈಸ್‌ ಪ್ರೆಸಿಡೆಂಟ್‌, ಡೆಪ್ಯೂಟಿ ವೈಸ್‌ ಪ್ರೆಸಿಡೆಂಟ್‌, ಅಸೋಸಿಯೇಟ್‌ ಮ್ಯಾನೇಜರ್‌) ಭರ್ತಿ ಮಾಡಲು ಅಧಿಕ್ರತ ಅಧಿಸೂಚನೆ ಬಿಡುಗಡೆ ಮಾಡಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನೇಮಕಾತಿಗೆ ಸಂಬಂದಿತ ಅರ್ಹತಾ ಮಾನದಂಡಗಳ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದಾಗಿದೆ.

ಈ ಕೆಳಗೆ ಇಂಡಿಯನ್ ಬ್ಯಾಂಕ್ ನೇಮಕಾತಿ 2024 ಅಧಿಸೂಚನೆಯಲ್ಲಿ ಉಲ್ಲೇಖಿಸಿರುವ ಅಭ್ಯರ್ಥಿಗಳ ವಿದ್ಯಾರ್ಹತೆ, ಹುದ್ದೆಗಳ ವಿವರ, ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಕೆ ಪ್ರಕ್ರಿಯೆ, ಅರ್ಜಿ ಶುಲ್ಕ ಇನ್ನಿತರ ಪ್ರಮುಖ ಅಂಶಗಳ ಮಾಹಿತಿ ನೀಡಲಾಗಿದ್ದು ಲೇಖನವನ್ನು ಪೂರ್ತಿಯಾಗಿ ಓದಿರಿ.

ಹುದ್ದೆಗಳ ವಿವರ:

  • ಅಸಿಸ್ಟಂಟ್ ವೈಸ್‌ ಪ್ರೆಸಿಡೆಂಟ್‌: 43 ಹುದ್ದೆಗಳು
  • ಅಸೋಸಿಯೇಟ್‌ ಮ್ಯಾನೇಜರ್‌: 29 ಹುದ್ದೆಗಳು
  • ಡೆಪ್ಯೂಟಿ ವೈಸ್‌ ಪ್ರೆಸಿಡೆಂಟ್: 30 ಹುದ್ದೆಗಳು

ವಿದ್ಯಾರ್ಹತೆ:

ಸಿಎ / ಸಿಡಬ್ಲ್ಯೂಎ / ಐಸಿಡಬ್ಲ್ಯೂಎ / ಪದವಿ / ಪಿಜಿ ಡಿಪ್ಲೊಮ / ಪದವಿ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹೇಳ ಬಯಸುವುದೇನೆಂದರೆ ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳು ಹುದ್ದೆವಾರು ಹೆಚ್ಚಿನ ಅರ್ಹತೆಗಗಳ ಮಾಹಿತಿಗಾಗಿ ನೋಟಿಫಿಕೇಶನ್‌ ಪರಿಶೀಲಿಸಿ.

ವಯಸ್ಸಿನ ಅರ್ಹತೆಗಳು:

ಆಸಕ್ತ ಅಭ್ಯರ್ಥಿಗಳಿಗೆ ಕನಿಷ್ಠ 23 ವರ್ಷ ಮತ್ತು ಗರಿಷ್ಠ 40 ವರ್ಷಗಳು ದಾಟಿರಬಾರದು

ಪ್ರಮುಖ ದಿನಾಂಕಗಳು:

  • ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 29-06-2024
  • ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 14-07-2024
  • ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ: 14-07-2024

ಅರ್ಜಿ ಸಲ್ಲಿಕೆ ಪ್ರಕ್ರಿಯೆ:

  • ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • “Click Here For New Registration” ಕ್ಲಿಕ್ ಮಾಡಿ.
  • ರಿಜಿಸ್ಟ್ರೇಷನ್‌ ಮಾಡಿ.
  • ಅಲ್ಲಿ ಕೇಳುವ ವಿವರಗಳನ್ನು ನಮೂದಿಸಿ, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ.

ಅಪ್ಲಿಕೇಶನ್‌ ಶುಲ್ಕ

  • ಸಾಮಾನ್ಯ ಕೆಟಗರಿ: ರೂ.1000
  • ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ: ರೂ.175

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಅವರ ವಿದ್ಯಾರ್ಹತೆ, ಅಂಕಗಳು, ಕಾರ್ಯಾನುಭವ, ಲಿಖಿತ ಪರೀಕ್ಷೆ ಮೂಲಕ ಶಾರ್ಟ್‌ಲಿಸ್ಟ್‌ ಮಾಡಿ, ಸಂದರ್ಶನ / ಮೆಡಿಕಲ್ ಟೆಸ್ಟ್‌ / ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುವುದು.

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ

Leave a Comment