ಸ್ನೇಹಿತರೇ ಉದ್ಯೋಕಾಂಕ್ಷಿಗಳಿಗೆ ಬಂದ ಶುಭ ಸುದ್ದಿ ಏನೆಂದರೆ ,ಭಾರತೀಯ ನೌಕಾಪಡೆಯು 2025 ರ (Indian Navy Jobs) ಜನವರಿಯಲ್ಲಿ ಪ್ರಾರಂಭವಾಗುವ 10+2 ಬಿ.ಟೆಕ್ ಕೆಡೆಟ್ ಎಂಟ್ರಿ ಸ್ಕೀಮ್ (ಶಾಶ್ವತ ಆಯೋಗ) (Indian Navy 10+2 B.Tech Cadet Entry Scheme) ಕೋರ್ಸ್‌ಗೆ ಆಸಕ್ತ ಮತ್ತು ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಈ ಕೆಡೆಟ್ ಪ್ರವೇಶ ಯೋಜನೆಯು ದೇಶದ ಪ್ರತಿಷ್ಠಿತ ಭಾರತೀಯ ನೌಕಾ ಅಕಾಡೆಮಿಗೆ ಸೇರಲು ಬಯಸುವವರಿಗೆ ಸುವರ್ಣಾವಕಾಶವಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳನ್ನು ಎಜಿಮಲ, ಕೇರಳ(Ezhimala, Kerala) ಕಾರ್ಯನಿರ್ವಾಹಕ ಮತ್ತು ತಾಂತ್ರಿಕ ಶಾಖೆಗಾಗಿ (Cadet Entry Scheme for Executive and Technical Branch) 10+2 ಬಿ.ಟೆಕ್ ಕೆಡೆಟ್ ಪ್ರವೇಶ ಯೋಜನೆಯಡಿಯಲ್ಲಿ ನಾಲ್ಕು ವರ್ಷಗಳ ಪದವಿ ಕೋರ್ಸ್‌ಗೆ ನೇಮಕ ಮಾಡಲಾಗುವುದು.
ಇಂಡಿಯನ್ ನೆವಿ 10+2 ಬಿ.ಟೆಕ್ ಎಂಟ್ರಿ ನೇಮಕಾತಿ 2024 (Indian Navy 10+2 B.Tech Cadet Entry Scheme) ಸಂಬಂದಿತ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ನೀಡಲಾಗಿದ್ದು ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೂ ಮುಂಚೆ ಅಧಿಸೂಚನೆಯಲ್ಲಿ ಪ್ರಕಟವಾಗಿರುವ ಅರ್ಹತಾ ಮಾನದಂಡಗಳನ್ನು ತಿಳಿಯುವುದು ಬಹುಮುಖ್ಯವಾಗಿರುತ್ತದೆ. ಇದರಿಂದ ಅರ್ಜಿ ಸಲ್ಲಿಸುವಾಗ ಯಾವುದೇ ಗೊಂದಲಗಳಿರುವುದಿಲ್ಲ.
ಒಟ್ಟು ಹುದ್ದೆಗಳು:
ಇಂಡಿಯನ್ ನೆವಿ 10+2 ಬಿ.ಟೆಕ್ ಎಂಟ್ರಿ ನೇಮಕಾತಿಯ ಅಧಿಕ್ರತ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಒಟ್ಟು 40 ಹುದ್ದೆಗಳಿವೆ
ಅರ್ಜಿ ಸಲ್ಲಿಕೆ ದಿನಾಂಕ:
ಇಂಡಿಯನ್ ನೆವಿ 10+2 ಬಿ.ಟೆಕ್ ಎಂಟ್ರಿ ನೇಮಕಾತಿ 2024(Indian Navy 10+2 B.Tech Entry Recruitment 2024) ಅಧಿಕ್ರತ ಅಧಿಸೂಚನೆಯಲ್ಲಿ ಪ್ರಕಟಿಸಿರುವಂತೆ ನೇಮಕಾತಿಯ ಅರ್ಜಿ ಸಲ್ಲಿಕೆಯು ದಿನಾಂಕ ಜುಲೈ 6, 2024 ರಂದು ಪ್ರಾರಂಭವಾಗಲಿದ್ದು, 20ನೇ ಜುಲೈ 2024 ರಂದು ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. ಅಭ್ಯರ್ಥಿಗಳು ತಪ್ಪದೆ ಸೂಚಿಸಿರುವ ದಿನಾಂಕದೊಳಗಾಗಿ ಅರ್ಜಿ ಸಲ್ಲಿಕೆಯನ್ನು ಮಾಡಬೇಕಿದೆ.
ವಯಸ್ಸಿನ ಮಿತಿ:
ಭಾರತೀಯ ನೌಕಾಪಡೆಯು 2025 ರ ಜನವರಿಯಲ್ಲಿ ಪ್ರಾರಂಭವಾಗುವ 10+2 ಬಿ.ಟೆಕ್ ಕೆಡೆಟ್ ಎಂಟ್ರಿ ಸ್ಕೀಮ್ ಅರ್ಜಿದಾರರ ವಯೋಮಿತಿಯು ಅಧಿಸೂಚನೆಯಲ್ಲಿ ಸೂಚಿಸಿರುವಂತೆ 2ನೇ ಜುಲೈ 2005 ಮತ್ತು 1ನೇ ಜನವರಿ 2008 ನಡುವೆ ಜನಿಸಿರಬೇಕು. ವಯೋಮಿತಿ ಸಂಬಂದಿತ ಗೊಂದಲಗಳಿದ್ದರೆ ಹೆಚ್ಚ್ಹಿನ ಮಾಹಿತಿಗಾಗಿ ಕೆಳಗೆ ಆಫೀಷಿಯಲ್ ನೋಟಿಫಿಕೇಶನ್ ಲಿಂಕ್ ನೀಡಲಾಗಿದ್ದು ಅದರ ಮೇಲೆ ಕ್ಲಿಕ್ ಮಾಡಿ ಪರಿಶೀಲಿಸಿ.
ಶೈಕ್ಷಣಿಕ ಅರ್ಹತೆ:
- ಮೆಟ್ರಿಕ್ + ಸೀನಿಯರ್ ಸೆಕೆಂಡರಿ ಪರೀಕ್ಷೆ (10+2 ಪ್ಯಾಟರ್ನ್) ಅಥವಾ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರದಲ್ಲಿ (PCM) ಕನಿಷ್ಠ 70% ಒಟ್ಟು ಅಂಕಗಳನ್ನು ಹೊಂದಿರುವ ಮಾನ್ಯತೆ ಪಡೆದಿರುವ ಯಾವುದೇ ಬೋರ್ಡ್‌ನಿಂದ ಉತ್ತೀರ್ಣಗೊಂಡಿರಬೇಕು. ಅದರ ಜೊತೆಗೆ ಇಂಗ್ಲಿಷ್‌ನಲ್ಲಿ ಕನಿಷ್ಠ 50% ಅಂಕಗಳು ಪಡೆದಿರಬೇಕು.
- ಜೆಇಇ (ಮೇನ್ಸ್) ಅವಶ್ಯಕತೆ: ಅಭ್ಯರ್ಥಿಗಳು ಜೆಇಇ (ಮೇನ್ಸ್) – 2023 (B.E. / B.Tech ಪರೀಕ್ಷೆಗೆ) ಹಾಜರಾಗಿರಬೇಕು.
- ಜೆಇಇ (ಮೇನ್ಸ್) ಅಖಿಲ ಭಾರತ ಸಾಮಾನ್ಯ ಶ್ರೇಣಿ ಪಟ್ಟಿ (CRL) – 2024 ಅನ್ನು ಆಧರಿಸಿ ಶಾರ್ಟ್‌ಲಿಸ್ಟ್ ಮಾಡಲಾಗುವುದು.
ಆಯ್ಕೆ ಪ್ರಕ್ರಿಯೆ:
- JEE (ಮುಖ್ಯ) ಅಖಿಲ ಭಾರತ ಸಾಮಾನ್ಯ ಶ್ರೇಣಿಯ ಪಟ್ಟಿ (CRL) – 2024 ಅನ್ನು ಆಧರಿಸಿದೆ.
- ಎರಡನೇ ಹಂತದಲ್ಲಿ ಎಸ್‌ಎಸ್‌ಬಿ ಸಂದರ್ಶನ(SSB Interview) ನಡೆಸಿ ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ಇಮೇಲ್ ಮತ್ತು ಎಸ್‌ಎಮ್‌ಎಸ್ ಮೂಲಕ ಅವರ ಆಯ್ಕೆಯ ಸ್ಥಿತಿಯನ್ನು ತಿಳಿಸಲಾಗುತ್ತದೆ.
- ಮೂರನೇ ಹಂತದಲ್ಲಿ ಎಸ್‌ಎಸ್‌ಬಿ ಸಂದರ್ಶನದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.
- ಕೊನೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ವೈದ್ಯಕೀಯ ಪರೀಕ್ಷೆಯಲ್ಲಿ ಫಿಟ್ ಅಥವಾ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಪೊಲೀಸ್ ಪರಿಶೀಲನೆ, ಪಾತ್ರ ಪರಿಶೀಲನೆ ನಡೆಸಿ ನೇಮಕ ಮಾಡಲಾಗುತ್ತದೆ.
ಆನ್‌ಲೈನ್ ನೋಂದಣಿ:
- ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 6ನೇ ಜುಲೈ 2024 ರಿಂದ ಜಾಯಿನ್ ಇಂಡಿಯನ್ ನೇವಿ ನೇಮಕಾತಿ ಅಧಿಕೃತ ವೆಬ್‌ಸೈಟ್‌ನಲ್ಲಿ (joinindiannavy.gov.in) ಆನ್‌ಲೈನ್ ಅರ್ಜಿಯನ್ನು ಸಲ್ಲಿಸಬೇಕು .
- ಅರ್ಜಿ ನಮೂನೆಯಲ್ಲಿ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ ಅದರ ಜೊತೆಗೆ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ (ಜನ್ಮ ದಿನಾಂಕ ಪುರಾವೆ, 10ನೇ ಮತ್ತು 12ನೇ ತರಗತಿಯ ಅಂಕಪಟ್ಟಿ, ಜೆಇಇ (ಮೇನ್ಸ್) 2023ರ ಅಂಕಪಟ್ಟಿ)
ಆನ್‌ಲೈನ್ ನೋಂದಣಿಯನ್ನು ಮಾಡಲು ಅಭ್ಯರ್ಥಿಗಳಿಗೆ ಕೊನೆಯ ದಿನಾಂಕ 20ನೇ ಜುಲೈ 2024 ಆಗಿದ್ದು ಆಸಕ್ತರು ತಪ್ಪದೆ ನಿಗದಿತ ದಿನಾಂಕದೊಳಗಾಗಿ ಅರ್ಜಿ ಸಲ್ಲಿಕೆಯನ್ನು ಪೂರ್ಣಗೊಳಿಸಿ.
ವಿಶೇಷ ಏನೆಂದರೆ ಇಂಡಿಯನ್ ನೆವಿ 10+2 ಬಿ.ಟೆಕ್ ಎಂಟ್ರಿ ನೇಮಕಾತಿಯು 2024 (Indian Navy 10+2 B.Tech Entry Recruitment 2024) ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಭಾರತೀಯ ನೌಕಾಪಡೆ ಸೇರಿ, ರಾಷ್ಟ್ರಕ್ಕೆ ಸೇವೆ ಸಲ್ಲಿಸುವುದರ ಜೊತೆಗೆ ಬಿ.ಟೆಕ್ ಪದವಿಯನ್ನು ಪಡೆಯಲು ಅತ್ಯುತ್ತಮ ಅವಕಾಶವನ್ನು ಒದಗಿಸಲಿದೆ.