ಇಸ್ರೋ ನೇಮಕಾತಿ 2024: ಉದ್ಯೋಕಾಂಕ್ಷಿಗಳಿಗೆ ಅದ್ಭುತ ಅವಕಾಶ!

ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ (ISRO) ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳನ್ನು ಅಧಿಕೃತ ವೈದ್ಯಾಧಿಕಾರಿ (Authorized Medical Officer), ಚರ್ಮರೋಗ ತಜ್ಞ (Dermatologist) ಮತ್ತು ಸಲಹೆಗಾರ ಚರ್ಮರೋಗ ತಜ್ಞ (Consultant Dermatologist) ಹುದ್ದೆಗಳಿಗೆ ನೇಮಕ ಮಾಡಲು ಅಧಿಕ್ರತ ಅಧಿಸೂಚನೆಯನ್ನು ಹೊರಡಿಸಿದ್ದು. ನೀವು ಸಹ ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆಯಲ್ಲಿ (ISRO) ಸೇವೆಸಲ್ಲಿಸಲು ಬಯಸಿದ್ದರೆ ಕೂಡಲೇ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯ ಕೊನೆಯ ದಿನಾಂಕ ಜುಲೈ 15, 2024 ಆಗಿರುತ್ತದೆ.

ಅಭ್ಯರ್ಥಿಗಳ ಬೇಕಾಗುವ ಅರ್ಹತೆ ಮತ್ತು ಅನುಭವ:

ಅಧಿಕೃತ ವೈದ್ಯಾಧಿಕಾರಿ:

  • ಶೈಕ್ಷಣಿಕ ಅರ್ಹತೆ: ವೈದ್ಯಕೀಯ ಮಂಡಳಿಯಲ್ಲಿ ಶಾಶ್ವತವಾಗಿ ನೋಂದಣಿ ಪಡೆದಿರುವ ಎಮ್‌ಎಮ್‌ಬಿ‌ಎಸ್ (MBBS) ಪದವಿ ಪೂರ್ಣಗೊಂಡಿರಬೇಕು.
  • ಅನುಭವ: ಕನಿಷ್ಠ 2 ವರ್ಷದ ಅನುಭವ ಹೊಂದಿರಬೇಕು

ಸಲಹೆಗಾರ ಚರ್ಮರೋಗ ತಜ್ಞ/ಚರ್ಮರೋಗ ತಜ್ಞ:

  • ಶೈಕ್ಷಣಿಕ ಅರ್ಹತೆ: MBBS, MD/DNB ಚರ್ಮರೋಗ ಅಥವಾ ಚರ್ಮರೋಗದಲ್ಲಿ ಪಿಜಿ ಡಿಪ್ಲೋಮಾ ಪದವಿಯನ್ನು ಹೊಂದಿರಬೇಕು
  • ಅನುಭವ: ಪಿಜಿ ಪದವಿ/ಡಿಪ್ಲೋಮಾ ನಂತರ ಕನಿಷ್ಠ 2 ವರ್ಷಗಳ ಅನುಭವ ಹೊಂದಿರಬೇಕು

ಹುದ್ದೆಗಳ ವಿವರ

  • ಅಧಿಕೃತ ವೈದ್ಯಾಧಿಕಾರಿ (Authorized Medical Officer)
  • ಚರ್ಮರೋಗ ತಜ್ಞ (Dermatologist)
  • ಸಲಹೆಗಾರ ಚರ್ಮರೋಗ ತಜ್ಞ (Consultant Dermatologist)

ಉದ್ಯೋಗ ಸ್ಥಳ:

ಆಯ್ಕೆಯಾದ ಅಭ್ಯರ್ಥಿಗಳನ್ನು ಭಾರತಾದ್ಯಂತ ವಿವಿಧ ರಾಜ್ಯಗಳಲ್ಲಿರುವ ISRO ಕಚೇರಿಗಳಲ್ಲಿ ನಿಯೋಜಿಸಲಾಗುವುದು.

ಉದ್ಯೋಗ ಪ್ರಕಾರ:

ಸ್ನೇಹಿತರೇ ಇಸ್ರೋ ನೇಮಕಾತಿ 2024 (ISRO Recruitment 2024) ಅಧಿಕ್ರತ ಅಧಿಸೂಚನೆಯಲ್ಲಿ ಪ್ರಕಟಿಸಿರುವಂತೆ, ಅಭ್ಯರ್ಥಿಗಳನ್ನು ಮೊದಲ 6 ತಿಂಗಳು ಒಪ್ಪಂದದ (contract basis) ಆಧಾರದ ಮೇಲೆ ನೇಮಕ ಮಾಡಲಾಗುವುದು, ಅನಂತರ ಪರಸ್ಪರ ಒಪ್ಪಿಗೆಯ ಮೇರೆಗೆ ಕೆಲಸದ ವಿಸ್ತರಣೆಯ ಸಾಧ್ಯತೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಆಫೀಷಿಯಲ್ ನೋಟಿಫಿಕೇಶನ್ ಅನ್ನು ಪರಿಶೀಲಿಸಿ.

ವೇತನ:

  • ಅಧಿಕೃತ ವೈದ್ಯಾಧಿಕಾರಿ: ತಿಂಗಳಿಗೆ ರೂ. 12,000 ರಿಂದ 36,000.
  • ಚರ್ಮರೋಗ ತಜ್ಞ: ಪ್ರತಿ ಕನ್ಸಲ್ಟೇಶನ್ ಗೆ ರೂ. 400.
  • ಸಲಹೆಗಾರ ಚರ್ಮರೋಗ ತಜ್ಞ: 20 ರೋಗಿಗಳ ವರೆಗೆ ಪ್ರತಿಯೊಂದು ರೋಗಿಯ ಭೇಟಿಗೆ ರೂ. 4,000. ಇಪ್ಪತ್ತು ರೋಗಿಗಳ ನಂತರ ಪ್ರತಿಯೊಂದು ಕನ್ಸಲ್ಟೇಶನ್ ಗೆ ಹೆಚ್ಚುವರಿಯಾಗಿ ರೂ. 200 ನೀಡಲಾಗುವುದು

ವೇತನ ಶ್ರೇಣಿಯ ಹೆಚ್ಚಿನ ಮಾಹಿತಿ ತಿಳಿಯಲು ಅಫೀಷಿಯಲ್ ನೋಟಿಫಿಕೇಶನ್ ಅನ್ನು ಪರಿಶೀಲಿಸಿ.

ವಯೋಮಿತಿ:

ಇಸ್ರೋ ನೇಮಕಾತಿ 2024 ರ ಅರ್ಜಿದಾರರು 60 ವರ್ಷ ದಾಟಿರಬಾರದು

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳಿಗೆ ಆಯ್ಕೆ ಸಮಿತಿಯು ವೈಯಕ್ತಿಕ ಸಂದರ್ಶನ ನಡೆಸಿ, ಸಂದರ್ಶದ ಫಲಿತಾಂಶದ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುವುದು

ಅರ್ಜಿ ಸಲ್ಲಿಸುವ ಪ್ರಕ್ರಿಯೆ:

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಇಸ್ರೋ (ISRO) ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಅರ್ಜಿ ನಮೂನೆಯನ್ನು ಆನ್‌ಲೈನ್‌ನಲ್ಲಿ ತುಂಬಿ, chsshelp@vssc.gov.in ಗೆ ಇಮೇಲ್ ಮೂಲಕ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ವೇಳೆ ಅಭ್ಯರ್ಥಿಗಳು ನಿರ್ದಿಷ್ಟ (ಅಧಿಕೃತ ವೈದ್ಯಾಧಿಕಾರಿ/ಚರ್ಮರೋಗ ತಜ್ಞ) ಹುದ್ದೆಗೆ ಅರ್ಜಿ ಎಂದು ಉಲ್ಲೇಖ ಮಾಡಬೇಕಾಗುತ್ತದೆ. ಅರ್ಜಿ ಸಲ್ಲಿಸುವ ಕೊನೆ ದಿನಾಂಕ 15 ಜುಲೈ 2024, ಹಾಗಾಗಿ ನಿಗದಿತ ದಿನಾಂಕ ಮುಗಿಯುವುದರ ಒಳಗಾಗಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

ಅರ್ಜಿ ಸಲ್ಲಿಕೆ ಮಾಡಲು ಇಮೇಲ್:

chsshelp@vssc.gov.in

Leave a Comment