ಐ‌ಟಿ‌ಬಿ‌ಪಿ ನೇಮಕಾತಿ 2024: ಈ ಹೊಸ ನೇಮಕಾತಿಗೆ ಪಿಯುಸಿ ಆದವರು ಇಂದೇ ಅರ್ಜಿ ಸಲ್ಲಿಸಿ

ಸ್ನೇಹಿತರೇ ಇಂಡೋ ಟಿಬೇತಿಯನ್ ಬಾರ್ಡರ್ ಫೋರ್ಸ್ ಇದೀಗ ಉದ್ಯೋಕಾಂಕ್ಷಿಗಳಿಗೆ ಸಿಹಿ ಸುದ್ದಿಯನ್ನು ನೀಡಿದೆ. ಐ‌ಟಿ‌ಬಿ‌ಪಿ ನೇಮಕಾತಿ 2024 ರ(ITBP Recruitment 2024) ಅಧಿಕ್ರತ ಅಧಿಸೂಚನೆಯನ್ನು(official notification) ಬಿಡುಗಡೆ ಮಾಡಲಾಗಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಇಂಡೋ ಟಿಬೇತಿಯನ್ ಬಾರ್ಡರ್ ಫೋರ್ಸ್ ಖಾಲಿ ಇರುವಂತಹ ಹೆಡ್ ಕಾನ್ಸ್ಟೆಬಲ್, ಸಬ್ ಇನ್ಸ್ಪೆಕ್ಟರ್, ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಒಟ್ಟು 29 ಹುದ್ದೆಗಳಿಗೆ ಅರ್ಜಿ ಆಹ್ವಾನವನ್ನು ಮಾಡಲಾಗಿದೆ. ಐ‌ಟಿ‌ಬಿ‌ಪಿ ನೇಮಕಾತಿ 2024 ರ ಅರ್ಜಿ ಸಲ್ಲಿಕೆಯು 05 ಜುಲೈ, 2024ರಂದು ಆರಂಭ ಗೊಂಡಿದ್ದು ದಿನಾಂಕ 28 ಜುಲೈ 2024 ರಂದು ಮುಕ್ತಾಯಗೊಳ್ಳಲಿದೆ.

ಇಂಡೋ ಟಿಬೇತಿಯನ್ ಬಾರ್ಡರ್ ಫೋರ್ಸ್ ನಲ್ಲಿ ಸೇವೆ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೆ ಮೊದಲು ನೇಮಕಾತಿಗೆ ಸಂಬಂದಿತ ಅರ್ಹತಾ ಮಾನದಂಡಗಳನ್ನು ತಿಳಿಯುವುದು ಉತ್ತಮ. ಲುಖನದಲ್ಲಿ ನಿಮಗೆ ಐ‌ಟಿ‌ಬಿ‌ಪಿ ನೇಮಕಾತಿ 2024 ರ ಅಧಿಕ್ರತ ಅಧಿಸೂಚನೆಯಲ್ಲಿ ಪ್ರಕಟಿಸಿರುವ ಅಭ್ಯಾರ್ತ್ಗಿಗಳ ವಿಧ್ಯಾರ್ಹತೆ, ವಯೋಮಿತಿ, ವೇತನ, ಅರ್ಜಿ ಶುಲ್ಕ, ಹುದ್ದೆಗಳ ವಿವರ ಇನ್ನಿತರ ಅಂಶಗಳನ್ನು ವಿವಿರಿಸಲಾಗಿದೆ.

ಹುದ್ದೆಗಳ ವಿವರ

ಐ‌ಟಿ‌ಬಿ‌ಪಿ ನೇಮಕಾತಿ 2024 ರ ಅಧಿಸೂಚನೆಯ ಪ್ರಕಾರ ಸಂಸ್ಥೆಯಲ್ಲಿ ಖಾಲಿ ಇರುವಂತಹ ಹೆಡ್ ಕಾನ್ಸ್ಟೆಬಲ್, ಸಬ್ ಇನ್ಸ್ಪೆಕ್ಟರ್, ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಒಟ್ಟು 29 ಹುದ್ದೆಗಳಿಗೆ ಅರ್ಜಿ ಆಹ್ವಾನವನ್ನು ಮಾಡಲಾಗಿದೆ. ಅದರಲ್ಲಿ

  • ಹೆಡ್ ಕಾನ್ಸ್ಟೆಬಲ್ – 14 ಹುದ್ದೆಗಳು
  • ಸಬ್ ಇನ್ಸ್ಪೆಕ್ಟರ್ – 10 ಹುದ್ದೆಗಳು
  • ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ – 05 ಹುದ್ದೆಗಳು

ವಿಧ್ಯಾರ್ಹತೆ

ಯಾವುದೇ ಒಂದು ನೇಮಕಾತಿಯನ್ನು ಅಭ್ಯರ್ಥಿಗಳ ವಿಧ್ಯಾರ್ಹತೆ ಆಧಾರದ ಮೇಲೆ ನಡೆಸಲಾಗುತ್ತದೆ. ಐ‌ಟಿ‌ಬಿ‌ಪಿ ನೇಮಕಾತಿ 2024ರ ಅರ್ಜಿ ಸಲ್ಲಿಕೆಗೆ ಯಾವುದೇ ಒಂದು ಮಾನ್ಯತೆ ಪಡೆದಿರುವ ವಿಶ್ವವಿಧ್ಯಾಲಯದಿಂದ ಪಿ‌ಯೂ‌ಸಿ(PUC) ಪೂರ್ಣಗೊಳಿಸಿರಬೇಕು

  • ಹೆಡ್ ಕಾನ್ಸ್ಟೆಬಲ್ – ಎಸ್‌ಎಸ್‌ಎಲ್‌ಸಿ
  • ಸಬ್ ಇನ್ಸ್ಪೆಕ್ಟರ್ – ಪಿ‌ಯೂ‌ಸಿ
  • ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ – ಪಿ‌ಯೂ‌ಸಿ

ವೇತನ

ಆಯ್ಕೆಯಾದ ಅಭ್ಯರ್ಥಿಗಳಿಗೆ ಐ‌ಟಿ‌ಬಿ‌ಪಿ ಸಂಸ್ಥೆಯ ನಿಯಮಗಳಿಗನುಸಾರವಾಗಿ ವೇತನವನ್ನು ನೀಡಲಾಗುವುದು. ಅಧಿಸೂಚನೆಯಲ್ಲಿ ಪ್ರಕಟಿಸಿರುವಂತೆ,

  • ಹೆಡ್ ಕಾನ್ಸ್ಟೆಬಲ್ – 25,500 ರೂ – 81,100 ರೂ
  • ಸಬ್ ಇನ್ಸ್ಪೆಕ್ಟರ್ – 35,400 ರೂ. – 1,12,400 ರೂ
  • ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ – 39200 ರೂ – 92,300 ರೂ

ಅರ್ಜಿ ಶುಲ್ಕ

  • ಜನರಲ್ / ಓ‌ಬಿ‌ಸಿ/ ಈ‌ಡಬಲ್ಯು‌ಎಸ್ ಅಭ್ಯರ್ಥಿಗಳಿಗೆ:  ರೂ 100/-
  • ಎಸ್‌ಸಿ/ ಎಸ್‌ಟಿ ವರ್ಗದ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ

ವಯೋಮಿತಿ

  • ಹೆಡ್ ಕಾನ್ಸ್ಟೆಬಲ್ – ಕನಿಷ್ಠ 18 ವರ್ಷ ಮತ್ತು ಗರೀಷ್ಟ 25 ವರ್ಷ
  • ಸಬ್ ಇನ್ಸ್ಪೆಕ್ಟರ್ -ಕನಿಷ್ಠ 21 ವರ್ಷ ಮತ್ತು ಗರೀಷ್ಟ 30 ವರ್ಷ
  • ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ -ಕನಿಷ್ಠ 20 ವರ್ಷ ಮತ್ತು ಗರೀಷ್ಟ 28 ವರ್ಷ

ಆಯ್ಕೆಯ ವಿಧಾನ

ಅಭ್ಯರ್ಥಿಗಳಿಗೆ ಮೊದಲು ದೈಹಿಕ ಪರೀಕ್ಷೆ ನಡೆಸಿ ಎರಡನೇ ಹಂತದಲ್ಲಿ ಲಿಖಿತ ಪರೀಕ್ಷೆ ಇರುವುದು ಕೊನೆಯ ಹಂತದಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ದಾಖಲೆಗಳ ಪರಿಶೀಲನೆ ಮಾಡಲಾಗುವುದು.ಅಭ್ಯರ್ಥಿಗಳು ಐ‌ಟಿ‌ಬಿ‌ಪಿ ನೇಮಕಾತಿಯ ಕುರಿತು ಯಾವುದೇ ತರಹದ ಗೊಂದಲಗಳಿದ್ದಾರೆ ಮೇಲೆ ನೀಡಿರುವ ಅಫೀಷಿಯಲ್ ನೋಟಿಫಿಕೇಶನ್ ಲಿಂಕ್ ಮೇಲೆ ಒತ್ತಿ ಸಮಸ್ಯೆ ಬಗೆಹರಿಸಿಕೊಳ್ಳಿ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 28 ಜುಲೈ 2024 ಆಗಿದ್ದು ಆಸಕ್ತರು ದಿನಾಂಕ ಮುಗಿಯುವುದರ ಒಳಗಾಗಿ ಕೆಳಗೆ ನೀಡಿರುವ ಐ‌ಟಿ‌ಬಿ‌ಪಿ ಅಧಿಕ್ರತ ಪೋರ್ಟಲ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ

Leave a Comment