ಕರ್ನಾಟಕ ಬ್ಯಾಂಕ್ ನೇಮಕಾತಿ 2024: ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಸ್ನೇಹಿತರೇ ಕರ್ನಾಟಕ ಬ್ಯಾಂಕ್ ನಲ್ಲಿ ಖಾಲಿ ಇರುವ ಡೇಟಾ ಇಂಜಿನೀಯರ್, ಕ್ಲೌಡ್ ಸೆಕ್ಯುರಿಟಿ ಇಂಜಿನೀಯರ್, ಅಪ್ಲಿಕೇಷನ್ ಭದ್ರತಾ ಇಂಜಿನೀಯರ್ ಮತ್ತು ಫೈರ್ವಾಲ್ ನಿರ್ವಾಹಕ ಹುದ್ದೆಗಳ ಭರ್ತಿ ಮಾಡಲು ಸಂಸ್ಥೆಯು ಅಧಿಕ್ರತ ಅಧಿಸೂಚನೆಯನ್ನು ಹೊರಡಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕರ್ನಾಟಕ ಬ್ಯಾಂಕ್ ನೇಮಕಾತಿ 2024 (Karnataka Bank Recruitment 2024) ಸಂಬಂದಿತ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಕೆಯನ್ನು ಮಾಡಬಹುದಾಗಿದೆ.

ನೇಮಕಾತಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಜುಲೈ 26, 2024 ಆಗಿರುತ್ತದೆ ಹೀಗಾಗಿ, ನಿಗದಿತ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಿರಿ.

ಕರ್ನಾಟಕ ಬ್ಯಾಂಕ್ ನೇಮಕಾತಿ 2024 ರ ಶೀರ್ಷಿಕೆ:

  • ಸಂಸ್ಥೆಯ ಹೆಸರು: ಕರ್ನಾಟಕ ಬ್ಯಾಂಕ್
  • ಹುದ್ದೆಯ ಹೆಸರು: ಡೇಟಾ ಇಂಜಿನೀಯರ್ (11), ಕ್ಲೌಡ್ ಸೆಕ್ಯುರಿಟಿ ಇಂಜಿನೀಯರ್ (01), ಅಪ್ಲಿಕೇಷನ್ ಭದ್ರತಾ ಇಂಜಿನೀಯರ್ (01) ಮತ್ತು ಫೈರ್ವಾಲ್ ನಿರ್ವಾಹಕ (01) ಹುದ್ದೆಗಳು
  • ಒಟ್ಟು ಖಾಲಿ ಹುದ್ದೆಗಳು: 14
  • ಅರ್ಜಿಯ ವಿಧಾನ: ಆನ್‌ಲೈನ್
  • ಉದ್ಯೋಗದ ಸ್ಥಳ: ಬೆಂಗಳೂರು

ಪ್ರಮುಖ ದಿನಾಂಕಗಳು:

  • ಅರ್ಜಿಯ ಪ್ರಾರಂಭ ದಿನಾಂಕ: ಜೂನ್ 26, 2024
  • ಅರ್ಜಿಯ ಕೊನೆಯ ದಿನಾಂಕ: ಜುಲೈ 26, 2024

ವಯೋಮಿತಿ:

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯು 35 ವರ್ಷದೊಳಗಿರಬೇಕು ಮತ್ತು ವಯೋಸಡಳಿಕೆಯು ಕರ್ನಾಟಕ ಬ್ಯಾಂಕ್ ನಿಯಮಾವಳಿ ಪ್ರಕಾರ ನಡೆಯಲಿದೆ. ಹೆಚ್ಚಿನ ಮಾಹಿತಿಯನ್ನು ಪಡೆಯಲು ಅಧಿಕ್ರತ ಅಧಿಸೂಚನೆಯನ್ನು ಓದಿರಿ

ವಿದ್ಯಾರ್ಹತೆ:

  • ಡೇಟಾ ಇಂಜಿನೀಯರ್: ಅಧಿಸೂಚನೆಯಲ್ಲಿ ನೀಡುವಂತೆ ಡೇಟಾ ಇಂಜಿನೀಯರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ‌ಎಸ್‌ಸಿ, ಬಿ‌ಸಿ‌ಏ, ಬಿ. ಟೆಕ್, ಎಮ್.ಟೆಕ್ ವಿದ್ಯಾರ್ಹತೆಯನ್ನು ಹೊಂದಿರಬೇಕು.
  • ಕ್ಲೌಡ್ ಸೆಕ್ಯುರಿಟಿ ಇಂಜಿನೀಯರ್, ಅಪ್ಲಿಕೇಷನ್ ಭದ್ರತಾ ಇಂಜಿನೀಯರ್ ಮತ್ತು ಫೈರ್ವಾಲ್ ನಿರ್ವಾಹಕ: ಅಭ್ಯರ್ಥಿಗಳು ಬಿಇ, ಬಿ. ಟೆಕ್ಎ, ಎಮ್ಎಸ್‌ಸಿ ಇದರಲ್ಲಿ ಯಾವುದಾದರೊಂದು ಪದವಿಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪೂರ್ಣಗೊಳಿಸಿರಬೇಕು

ವೇತನ:

ಸ್ನೇಹಿತರೇ ಅಧಿಸೂಚನೆಯಲ್ಲಿ ನೀಡಿರುವ ಪ್ರಕಾರ ವಿವಿಧ ಹುದ್ದೆಗಳ ವೇತನ ಶ್ರೇಣಿ ಈ ರೀತಿ ಇದೆ.

  • ಡೇಟಾ ಇಂಜಿನೀಯರ್ – ₹48,480ರೂ – ₹855920
  • ಕ್ಲೌಡ್ ಸೆಕ್ಯುರಿಟಿ ಇಂಜಿನೀಯರ್ – ₹64,820 – ₹93,960
  • ಅಪ್ಲಿಕೇಷನ್ ಭದ್ರತಾ ಇಂಜಿನೀಯರ್- ₹64,829 – ₹93,960
  • ಫೈರ್ವಾಲ್ ನಿರ್ವಾಹಕ – ₹64,820 – ₹93,690

ಅರ್ಜಿ ಶುಲ್ಕ:

ಅರ್ಜಿ ಸಲ್ಲಿಸುವ ಎಲ್ಲ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಅರ್ಜಿ ಸಲ್ಲಿಕೆ

ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ತಮ್ಮ ವಿವರವಾದ ರೆಸ್ಯೂಮ್ ಅನ್ನು recruitment@ktkbank.com ಗೆ 26-07-2024 ರ ಒಳಗಾಗಿ ಕಳುಹಿಸಬೇಕು. ಅಭ್ಯರ್ಥಿಗಳು ಈ ರೆಸ್ಯೂಮ್ ಅನ್ನು ಕೇವಲ ಮೇಲ್ (mail) ಮುಖಾಂತರ ಮಾತ್ರ ಕಳುಹಿಸಬೇಕು.

ರೆಸ್ಯೂಮ್ ನಲ್ಲಿ ಇರಬೇಕಾದ ವಿವರಗಳು:

  • ಜನ್ಮ ದಿನಾಂಕ (ವಯಸ್ಸು ಸಹಿತ)
  • ವಿವಾಹಿತ ಸ್ಥಿತಿ (martial status)
  • ಅರ್ಹತೆಗಳು
  • ಅನುಭವ (ಕೆಲಸದ ಪ್ರೊಫೈಲ್ ಸಹಿತ)
  • ತರಬೇತಿ ಕಾರ್ಯಕ್ರಮಗಳು
  • ವೈಯಕ್ತಿಕ ಕೌಶಲಗಳು
  • ಅಭ್ಯರ್ಥಿಯ ಇತ್ತೀಚಿನ ಬಣ್ಣದ ಫೋಟೋ

ಆಯ್ಕೆ ಪ್ರಕ್ರಿಯೆ

  • ಅರ್ಹತಾ ಮಾನದಂಡಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿ ಸಂದರ್ಶನಕ್ಕೆ ಕರೆಯಲಾಗುತ್ತದೆ. ಬ್ಯಾಂಕ್ ನಿಗದಿಪಡಿಸಿದ ಬೆಂಗಳೂರು ಅಥವಾ ಇತರ ಸ್ಥಳಗಳಲ್ಲಿ ಸಂದರ್ಶನ ನಡೆಯುತ್ತದೆ.
  • ಅರ್ಹತೆ, ಅನುಭವದ ಆಧಾರದ ಮೇಲೆ ಸಂದರ್ಶನ ಮತ್ತು ಸಂವಹನದ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಲಾಗುತ್ತದೆ

Leave a Comment