ಕರ್ನಾಟಕ ಪೌರಾಡಳಿತ ಇಲಾಖೆಯಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕ (FDA) ಮತ್ತು ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಬೆಳಗಾವಿ ಮತ್ತು ಕಲಬುರಗಿ ಮಹಾ ನಗರಪಾಲಿಕೆಗಳಲ್ಲಿರುವ ಈ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ಹುದ್ದೆಗಳಿಗೆ ಸಂಬಂದಿತ ಸಂಪೂರ್ಣ ಮಾಹಿತಿಯನ್ನು ಪರಿಶೀಲಿಸಿ ದಿನಾಂಕ 20-07-2024 ರ ಒಳಗೆ ಅರ್ಜಿ ಸಲ್ಲಿಸಬಹುದು.
ಈ ಲೇಖನದಲ್ಲಿ ಕರ್ನಾಟಕ ಪೌರಾಡಳಿತ ಇಲಾಖೆಯಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕ (FDA) ಮತ್ತು ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಗಳ ಅರ್ಜಿ ಸಲ್ಲಿಕೆಗೆ ಬೇಕಾಗುವ ಅರ್ಹತಾ ಮಾನದಂಡಗಳನ್ನು ವಿವರವಾಗಿ ನೀಡಲಾಗಿದ್ದು, ಅಭ್ಯರ್ಥಿಗಳು ಲೇಖನವನ್ನು ಪೂರ್ತಿಯಾಗಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ಕರ್ನಾಟಕ ಪೌರಾಡಳಿತ ಇಲಾಖೆ ನೇಮಕಾತಿ 2024: ಹುದ್ದೆಗಳ ವಿವರ ಮತ್ತು ವೇತನ
- ದ್ವಿತೀಯ ದರ್ಜೆ ಸಹಾಯಕರು (SDA): 21,400- 42,000 ರೂ. ವೇತನ (ಡಿಎ & ಎಚ್.ಆರ್.ಎ ಮುಂತಾದ ಪ್ರತ್ಯೇಕ ಸೌಲಭ್ಯಗಳು ಇರುತ್ತವೆ)
- ಪ್ರಥಮ ದರ್ಜೆ ಸಹಾಯಕರು (FDA): 27,650- 52,650 ರೂ. ವೇತನ (ಡಿಎ & ಎಚ್.ಆರ್.ಎ ಮುಂತಾದ ಪ್ರತ್ಯೇಕ ಸೌಲಭ್ಯಗಳು ಇರುತ್ತವೆ)
ವಿದ್ಯಾರ್ಹತೆ
- ಎಸ್‌ಡಿಏ(SDA): ಕನಿಷ್ಟ ಪಿಯುಸಿ ಪೂರ್ಣಗೊಂಡಿರಬೇಕು
- ಎಫ್‌ಡಿಏ(FDA): ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಂಡಿರಬೇಕು
ವಯೋಮಿತಿ
- ಅಭ್ಯರ್ಥಿಗಳ ಕನಿಷ್ಟ ವಯಸ್ಸು 18 ವರ್ಷಗಳು ಮತ್ತು ಗರಿಷ್ಠ 40 ವರ್ಷಗಳು
- ಪರಿಶಿಷ್ಟ ಜಾತಿ/ಪಂಗಡ (SC/ST): 5 ವರ್ಷ ಸಡಿಲಿಕೆ
- ಇತರೆ ಹಿಂದೂಳಿದ ವರ್ಗ (OBC): 3 ವರ್ಷ ಸಡಿಲಿಕೆ
- ಅಂಗವಿಕಲ (PWD): 10 ವರ್ಷ ಸಡಿಲಿಕೆ
ಕರ್ನಾಟಕ ಪೌರಾಡಳಿತ ಇಲಾಖೆ ನೇಮಕಾತಿ 2024 ಅರ್ಜಿ ಶುಲ್ಕ
ಅರ್ಜಿ ಸಲ್ಲಿಕೆಗೆ ಯಾವುದೇ ಅರ್ಜಿ ಇರುವುದಿಲ್ಲ.
ಆಯ್ಕೆ ವಿಧಾನ
ಅಭ್ಯರ್ಥಿಗಳ ಅಂಕಗಳ ಆಧಾರದ ಮೇಲೆ ಆಯ್ಕೆ ನಡೆಸಲಾಗುವುದು.
ಅರ್ಜಿ ಸಲ್ಲಿಕೆ
ಆಸಕ್ತ ಅಭ್ಯರ್ಥಿಗಳು ಕರ್ನಾಟಕ ಪೌರಾಡಳಿತ ಇಲಾಖೆ ಅಧಿಕ್ರತ ಪೋರ್ಟಲ್ ಗೆ ಭೇಟಿ ನೀಡಿ ಅರ್ಜಿ ನಮೂನೆಯ ಪ್ರತಿಯನ್ನು ತೆಗೆಸಿಕೊಳ್ಳಬೇಕು, ನಂತರ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಇತ್ತೀಚಿನ ಫೋಟೋ, ವಿದ್ಯಾರ್ಹತೆ, ಅನುಭವ, ಮತ್ತು ಇತರ ಅಗತ್ಯ ದಾಖಲೆಗಳನ್ನು 20-07-2024 ರ ಒಳಗೆ ನೇರವಾಗಿ ಅಥವಾ ಅಂಚೆ ಮೂಲಕ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.
ಆಯ್ಕೆ ಪ್ರಾಧಿಕಾರ ಮತ್ತು ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, 9ನೇ ಮಹಡಿ, ವಿಶ್ವೇಶ್ವರಯ್ಯ ಮುಖ್ಯ ಗೋಪುರ, ಡಾ. ಅಂಬೇಡ್ಕರ್ ವೀದಿ, ಬೆಂಗಳೂರು- 560001.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 20-06-2024
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-07-2024