ರೇಷನ್ ಕಾರ್ಡ್ ತಿದ್ದುಪಡಿಗೆ ಕಾಲಾವಕಾಶ! ಸರ್ವರ್ ಕಾಟದಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ

ಸ್ನೇಹಿತರೇ ಬಹಳ ದಿನದಿಂದ ರೇಷನ್ ಕಾರ್ಡ್ ತಿದ್ದುಪಡಿಗಾಗಿ(Ration card correction) ಕಾಯುತಿದ್ದ ರಾಜ್ಯದ ಜನರಿಗೆ ಆಹಾರ ಇಲಾಖೆ ಶುಭಸುದ್ದಿಯನ್ನು ನೀಡಿದ್ದು ಹೆಸರು ಸೇರ್ಪಡೆ, ನೊಂದಣಿ, ಸದಸ್ಯರ ಹೆಸರು ತೆಗೆದು ಹಾಕಲಿಕ್ಕೆ ಅವಕಾಶವನ್ನು ನೀಡಿದೆ.

ರಾಜ್ಯ ಮತ್ತು ಕೇಂದ್ರದಿಂದ ಸರ್ಕಾರದಿಂದ ಜಾರಿಗೊಂಡ ಗ್ಯಾರಂಟಿ ಯೋಜನೆಗಳಿಗೆ ರೇಷನ್ ಕಾರ್ಡ್ ಬಹುಮುಖ್ಯ ದಾಖಲ್ಯಾಗಿದ್ದು ಈ ಯೆಲ್ಲಾ ಯೋಜನೆಗಳ ಅರ್ಹತೆ ಪಡೆಯಲು ಸರ್ಕಾರ ರೇಷನ್ ಕಾರ್ಡ್ ನ್ನು ಕಡ್ಡಾಯಗೊಳಿಸಿದೆ. ಹಾಗಾಗಿ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಮತ್ತು ತಿದ್ದುಪಡಿಗಾಗಿ ಲಕ್ಷಾಂತರ ಜನ ಕಾಯುತ್ತಿರುವವರಿಗೆ ಆಹಾರ ಇಲಾಖೆಯಿಂದ ಬಿಗ್ ಅಪ್ಡೇಟ್ ಸಿಕ್ಕಿದೆ

ರೇಷನ್ ಕಾರ್ಡ್ ತಿದ್ದುಪಡಿ( Ration card correction)

ಆಹಾರ ಇಲಾಖೆ ಸೂಚಿಸಿರುವಂತೆ 3 ಸರ್ವರ್ ಗಳ ಮೂಲಕ ರಾಜ್ಯದ ಎಲ್ಲ ಜಿಲ್ಲೆಗಳಿಗೆ ದಿನಾಂಕ 06-07- 2024 ರಂದು ಬೆಳಿಗ್ಗೆ 10 ರಿಂದ ಸಂಜೆ 7 ಗಂಟೆಯವರೆಗೆ ಹೆಸರು ಸೇರ್ಪಡೆ ಮತ್ತು ತಿದ್ದುಪಡಿಗಾಗಿ ಅವಕಾಶ ಮಾಡಿ ಕೊಡಲಾಗುವುದು. ಹಾಗಾಗಿ ಹೆಸರು ಸೇರ್ಪಡೆ ಮತ್ತು ತಿದ್ದುಪಡಿ ಆಡಲು ಬಯಸುವವರು ತಕ್ಷಣವೇ ಹತ್ತಿರದ ಗ್ರಾಮ ಒನ್ ಅಥವಾ ಸಿ‌ಎಸ್‌ಸಿ ಕೇಂದ್ರಕ್ಕೆ ಭೇಟಿ ನೀಡಿ ತಿದ್ದುಪಡಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

ಆಹಾರ ಇಲಾಖೆ ರಾಜ್ಯದಲ್ಲಿನ ಎಲ್ಲ ಜಿಲ್ಲೆಗಳಿಗೆ 3 ಸರ್ವರ್ ಗಳನ್ನಾಗಿ ವಿಂಗಡಿಸಿ ಬೆಳಿಗ್ಗೆ 10 ರಿಂದ ಸಂಜೆ 7 ಗಂಟೆಯವರೆಗೆ ಹೆಸರು ಸೇರ್ಪಡೆ ಮತ್ತು ತಿದ್ದುಪಡಿಗಾಗಿ ಅವಕಾಶ ಮಾಡಿ ಕೊಟ್ಟಿದ್ದು ಸೂಕ್ತ ದಾಖಲೆಗಳೊಂದಿಗೆ ಎಲ್ಲ ಸರ್ವರ್ ಗಳು ಬ್ಯುಸಿ ಆಗುವ ಸಾಧ್ಯತೆಗಳು ಇದ್ದು ಬೇಗನೆ ಗ್ರಾಮ ಒನ್ ಅಥವಾ ಸಿ‌ಎಸ್‌ಸಿ ಅಥವಾ ಕರ್ನಾಟಕ ಒನ್ ಕೇಂದ್ರಕ್ಕೆ ಭೇಟಿ ನೀಡಿ ತಿದ್ದುಪಡಿಯನ್ನು ಮಾಡಿಸಿಕೊಳ್ಳಿ. ಎಲ್ಲ ರೇಷನ್ ಕಾರ್ಡ್ ತಿದ್ದುಪಡಿ ಸರ್ವರ್(ration card correction server) ಮಾಹಿತಿ ಇಲ್ಲಿದೆ

ಸರ್ವರ್ 1 (Server 1)ಜಿಲ್ಲೆಗಳು ಈ ಕೆಳಗಿನಂತಿವೆ

  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ

ಸರ್ವರ್ 2 (Server 2)ಜಿಲ್ಲೆಗಳು ಈ ಕೆಳಗಿನಂತಿವೆ

  • ಚಾಮರಾಜ ನಗರ
  • ಚಿಕ್ಕಮಗಳೂರು
  • ಧಾರವಾಡ
  • ದಕ್ಷಿಣ ಕನ್ನಡ
  • ವಿಜಯಪುರ
  • ಕೊಡಗು
  • ಉತ್ತರ ಕನ್ನಡ
  • ಹಾವೇರಿ
  • ಮಂಡ್ಯ
  • ಮೈಸೂರು
  • ಉಡುಪಿ
  • ಗದಗ
  • ಹಾಸನ
  • ಬಾಗಲಕೋಟೆ
  • ಬೆಳಗಾವಿ

ಸರ್ವರ್ 03 (Server 03)ಜಿಲ್ಲೆಗಳು ಈ ಕೆಳಗಿನಂತಿವೆ

  • ಬೀದರ
  • ಶಿವಮೊಗ್ಗ
  • ರಾಯಚೂರು
  • ಕೊಪ್ಪಳ
  • ತುಮಕೂರು
  • ವಿಜಯನಗರ
  • ಕೊಪ್ಪಳ
  • ಬಳ್ಳಾರಿ
  • ಚಿಕ್ಕ ಬಳ್ಳಾಪುರ
  • ದಾವಣಗೆರೆ
  • ಕಲಬುರಗಿ
  • ಕೋಲಾರ
  • ರಾಮನಗರ
  • ಯಾದಗಿರಿ

Leave a Comment