Karnataka Udyogini Scheme: ಮಹಿಳೆಯರಿಗೆ 3ಲಕ್ಷ ರೂ ಸಾಲದ ನೆರವು. ಕೂಡಲೇ ತಿಳಿಯಿರಿ

Karnataka Udyogini Scheme: ಮಹಿಳೆಯರಿಗೆ 3ಲಕ್ಷ ರೂ ಸಾಲದ ನೆರವು. ಕೂಡಲೇ ತಿಳಿಯಿರಿ

ಸ್ನೇಹಿತರೇ ಸರ್ಕಾರವು ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಕೇಂದ್ರ ಸರ್ಕಾರವು ಮಹಿಳೆಯರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಲು 3ಲಕ್ಷ ಬಡ್ಡಿ ರಹಿತ ಶಾಲಾ ನೀಡುವ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.

ಸ್ನೇಹಿತರೇ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವ್ಯಾಪಾರ ಮತ್ತು ಉದ್ಯಮವನ್ನು ನಡೆಸುವ ಮಹಿಳೆಯರಿಗೆ ಆರ್ಥಿಕ ನೆರವನ್ನು ದೊರಕಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಉದ್ಯೋಗಿನಿ ಯೋಜನೆಯನ್ನು(Udyogini Scheme) ಜಾರಿಗೆ ತಂದಿವೆ. ಈ ಮೇಲೆ ತಿಳಿಸಿದ ಕಾರ್ಯ ವರ್ಗಕ್ಕೆ ಸೇರಿದ ಆಸಕ್ತ ಮಹಿಳೆಯರಿಗೆ ಕೇಂದ್ರ ಸರ್ಕಾರ ಬಡ್ಡಿರಹಿತ, ಸಬ್ಸಿಡಿ ರೂಪದಲ್ಲಿ ಮೂರು ಲಕ್ಷದವರೆಗೆ ಸಾಲವನ್ನು ನೀಡಲಿದೆ.

ಉದ್ಯೋಗಿನಿ ಯೋಜನೆಯ ಅಡಿಯಲ್ಲಿ ವ್ಯಾಪಾರ ಮತ್ತು ಉದ್ಯಮವನ್ನು ನಡೆಸುವ ಮಹಿಳೆಯರು ಸಾಲವನ್ನು ಪಡೆಯುವುದಲ್ಲದೆ, ಅಂಗವಿಕಲರು, ವಿಧವೆಯರು ಮತ್ತು ದಲಿತ ವರ್ಗಕ್ಕೆ ಸೇರಿದ ಮಹಿಳೆಯರಿಗೆ ಸಂಪೂರ್ಣ ಬಡ್ಡಿರಹಿತ ಸಾಲವನ್ನು ನೀಡಲಾಗುತ್ತದೆ

ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಮಹಿಳೆಯರಿಗೆ:

  • ಘಟಕ ವೆಚ್ಚ: ಕನಿಷ್ಠ ರೂ.1.00 ಲಕ್ಷದಿಂದ ಗರಿಷ್ಠ ರೂ.3.00 ಲಕ್ಷ.
  • ಸಹಾಯಧನ: ಸಾಲದ ಮೊತ್ತದ 50%.
  • ಕುಟುಂಬದ ಆದಾಯ ಮಿತಿ: ವರ್ಷಕ್ಕೆ ರೂ.2.00 ಲಕ್ಷಗಳಿಗಿಂತ ಕಡಿಮೆಯಿರಬೇಕು.

ವಿಶೇಷ ವರ್ಗ ಮತ್ತು ಸಾಮಾನ್ಯ ವರ್ಗದ ಮಹಿಳೆಯರಿಗೆ:

  • ಗರಿಷ್ಠ ಘಟಕ ವೆಚ್ಚ: ರೂ.3.00 ಲಕ್ಷ.
  • ಸಹಾಯಧನ:ವಿಶೇಷ ವರ್ಗದ ಮಹಿಳೆಯರಿಗೆ: 30% ಅಥವಾ ಗರಿಷ್ಠ ರೂ.90,000/-. ಮತ್ತು ಸಾಮಾನ್ಯ ವರ್ಗದ ಮಹಿಳೆಯರಿಗೆ: 30% ಅಥವಾ ಗರಿಷ್ಠ ರೂ.90,000/-.
ಕರ್ನಾಟಕ ಉದ್ಯೋಗಿನಿ ಯೋಜನೆಯ ಅರ್ಹತೆಗಳು
  • ಅರ್ಜಿದಾರರು ಭಾರತೀಯ ಪ್ರಜೆ ಆಗಿರಬೇಕು
  • ವಾರ್ಷಿಕ ಆದಾಯ 1.5 ಲಕ್ಷ ರೂಪಾಯಿ ಮೀರಿರಬಾರದು
  • 18 ರಿಂದ 55 ವರ್ಷದೊಳಗಿನ ಮಹಿಳೆಯರಿಗೆ ಅವಕಾಶ
  • ಈ ಹಿಂದೆ ಪಡೆದಿರುವ ಸಾಲ ಮರುಪಾವತಿ ಮಾಡಿರಬೇಕು
  • ಒಟ್ಟು ಸಾಲದ ಮೊತ್ತ 3 ಲಕ್ಷದೊಳಗಿರಬೇಕು

ಕರ್ನಾಟಕ ಉದ್ಯೋಗಿನಿ ಯೋಜನೆಯ ಅಗತ್ಯ ದಾಖಲೆಗಳು

  • ಬ್ಯಾಂಕ್ ಪಾಸ್ ಬುಕ್
  • ಆಧಾರ್ ಕಾರ್ಡ್
  • ಆದಾಯ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ
  • ಮಹಿಳೆಯರ ಜನನ ಪ್ರಮಾಣ ಪತ್ರ
  • ಭಾವಚಿತ್ರ
  • ರೇಷನ್ ಕಾರ್ಡ್

ಕರ್ನಾಟಕ ಉದ್ಯೋಗಿನಿ ಯೋಜನೆ ಅರ್ಜಿ ಸಲ್ಲಿಸುವ ವಿಧಾನ

ಮೇಲೆ ಸೂಚಿಸಿದ ದಾಖಲೆಗಳೊಂದಿಗೆ ಬ್ಯಾಂಕ್ ಗೆ ಭೇಟಿ ನೀಡಿ, ಅಧಿಕಾರಿಗಳ ಬಳಿ ಇರುವ ಉದ್ಯೋಗಿನಿ ಯೋಜನೆ ಅರ್ಜಿ ನಮೂನೆಯನ್ನು ತೆಗೆದುಕೊಂಡು ಅದನ್ನು ಅಗತ್ಯ ವಿವರಗಳೊಂದಿಗೆ ಭರ್ತಿ ಮಾಡಿ ಮತ್ತು ಅರ್ಜಿ ನಮೂನೆಯಲ್ಲಿ ಸೂಚಿಸಿದ ಎಲ್ಲ ದಾಖಲೆಗಳ ಫೋಟೋಕಾಪಿ ಲಗತ್ತಿಸಿ ಕೊನೆಯದಾಗಿ ಅದನ್ನು ಬ್ಯಾಂಕ್ ಅಧಿಕಾರಿಗಳಿಗೆ ಸಲ್ಲಿಸಿ.ಸಾಲ ಮಂಜೂರಾದ ನಂತರ, ಸಾಲ ಬಿಡುಗಡೆಗೆ ಮುನ್ನ ಈ ಮಹಿಳೆಯರಿಗೆ 3 ರಿಂದ 6 ದಿನಗಳ ಕಾಲ ಈ‌ಡಿ‌ಪಿ(EDP) ತರಬೇತಿ ನೀಡಲಾಗುತ್ತದೆ.

ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ರಾಜ್ಯ ಸರ್ಕಾರದ ಅಧಿಕ್ರತ ಉದ್ಯೋಗಿನಿ ಯೋಜನೆ ಪೋರ್ಟಲ್ ಗೆ ಭೇಟಿ ನೀಡಿ.

Leave a Comment