ತೆರಿಗೆಯನ್ನು ಉಳಿಸುವ ಮಾಸ್ಟರ್ ಪ್ಲಾನ್: ಆದಾಯ ತೆರಿಗೆಯ ವಿನಾಯಿತಿಯನ್ನು ಪಡೆಯಲು ಈ 6 ಕ್ರಮ ಪಾಲಿಸಿ

ತೆರಿಗೆಯನ್ನು ಉಳಿಸುವ ಮಾಸ್ಟರ್ ಪ್ಲಾನ್: ಆದಾಯ ತೆರಿಗೆಯ ವಿನಾಯಿತಿಯನ್ನು ಪಡೆಯಲು ಈ 6 ಕ್ರಮ ಪಾಲಿಸಿ

ಸ್ನೇಹಿತರೇ ಜುಲೈ 23, 2024 ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ 2024 ಅನ್ನು ಪ್ರಸ್ತುತಪಡಿಸಿದರು. ಇದರಲ್ಲಿ ತೆರಿಗೆ ಸಂಬದಿತ ಹಲವಾರು ಬದಲಾವಣೆಗಳನ್ನು ಮಾಡಲಾಗಿದ್ದು ದೇಶದ ಜನರಿಗೆ ಹೊಸ ತೆರಿಗೆ ಯೋಜನೆಯನ್ನು ಪರಿಚಯಿಸಿದ್ದಾರೆ.

ಹೌದು ನೀವು ಉದ್ಯೋಗಿ ಅಥವಾ ತೆರಿಗೆ ಪಾವತಿದಾರರಾಗಿದ್ದಾರೆ, ಹೇಗಾದರೂ ಮಾಡಿ ಸರ್ಕಾರದಿಂದ ಕಡಿತವಾಗುವ ತೆರಿಗೆಯನ್ನು ಕಡಿಮೆಗೊಳಿಸಬೇಕು ಅನ್ನುವ ಯೋಚನೆ ನಿಮ್ಮ ತಲೆಯಲ್ಲಿ ಬಂದಿರುತ್ತದೆ, ಹಾಗಾದರೆ ಕಾನೂನಾತ್ಮಕವಾಗಿ ತೆರಿಗೆ ಪಾವತಿದಾರರು ಕಡಿತವಾಗುವ ತೆರಿಗೆಯನ್ನು ಹೇಗೆ ತಪ್ಪಿಸಾಹುದು ಅನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದ್ದು ಲೇಖನವನ್ನು ಪೂರ್ತಿಯಾಗಿ ಓದಿರಿ.

ಸ್ನೇಹಿತರೇ ಹೆಚ್ಚಿನ ಜನರು ತೆರಿಯನ್ನು ಉಳಿಸಲು ಎನ್‌ಪಿ‌ಎಸ್,ಪಿ‌ಪಿ‌ಎಫ್ ಅಥವಾ ಎಲ್‌ಐ‌ಸಿ, ಎಸ್‌ಎಸ್‌ವೈ ಯೋಜನೆಗಳಲ್ಲಿ ಸಾಮಾನ್ಯವಾಗಿ ಹೂಡಿಕೆ ಮಾಡುತ್ತಾರೆ. ಆದರೆ ಆದಾಯ ತೆರಿಗೆ ಯೋಜನೆ ನಿಯಮಗಳ ಅಡಿಯಲ್ಲಿ ತೆರಿಗೆ ಪಾವತಿದಾರರು ಈ ಮೇಲೆ ತಿಳಿಸಿದ ಯೋಜನೆಗಳಲ್ಲಿ ಹೂಡಿಕೆ ಮಾಡದೇ ಉಳಿತಾಯ ಮಾಡಬಹುದಾಗಿದೆ.

ಆದಾಯ ತೆರಿಗೆ ಯೋಜನೆಯ ಸೆಕ್ಷನ್ 80E

ಆದಾಯ ತೆರಿಗೆ ಯೋಜನೆಯ ಸೆಕ್ಷನ್ 80E ಅಡಿಯಲ್ಲಿ, ಬ್ಯಾಂಕ್ ನಿಂದ ಪಡೆದ ಶಿಕ್ಷಣ ಸಾಲದ ಬಡ್ಡಿಯ ಮೇಲೆ ಸಾಲದ ಯಾವುದೇ ಮಿತಿ ಇಲ್ಲದೆ 8 ವರ್ಷಗಳ ಅವಧಿಯ ತೆರಿಗೆ ವಿನಾಯಿತಿಯನ್ನು ಪಡೆಯಬಹುದಾಗಿದೆ.

ಆದಾಯ ತೆರಿಗೆ ಯೋಜನೆಯ ಸೆಕ್ಷನ್ 24B

ಆದಾಯ ತೆರಿಗೆ ಯೋಜನೆಯ ಸೆಕ್ಷನ್ 24B ಅಡಿಯಲ್ಲಿ, ಮನೆ ಸಾಲದ ಮೇಲೆ ಅಂದರೆ, ಪ್ರತಿ ವರ್ಷ 2 ಲಕ್ಷ ರೂಪಾಯಿಯವರೆಗೆ ಆದಾಯ ತೆರಿಗೆ ಕಡಿತವನ್ನು ಪಡೆಯಬಹುದಾಗಿದೆ.

ಆದಾಯ ತೆರಿಗೆ ಯೋಜನೆಯ ಸೆಕ್ಷನ್ 10

ಆದಾಯ ತೆರಿಗೆ ಯೋಜನೆಯ ಸೆಕ್ಷನ್ 10 ರ ಅಡಿಯಲ್ಲಿ, ನೀವು ಬಾಡಿಗೆ ಮನೆಯಲ್ಲಿದ್ದರೆ ನಿಮ್ಮ ವೇತನ ಮತ್ತು ವಾಸಸ್ಥಳದ ಆಧಾರದ ಮೇಲೆ ಆದಾಯ ತೆರಿಗೆಯ ಕಡಿತವನ್ನು ಪಡೆಯಬಹುದು.

ಆದಾಯ ತೆರಿಗೆ ಯೋಜನೆಯ ಸೆಕ್ಷನ್ 80C

ಆದಾಯ ತೆರಿಗೆ ಯೋಜನೆಯ ಸೆಕ್ಷನ್ 80C ಅಡಿಯಲ್ಲಿ, ನೀವು ನಿಮ್ಮ ಮಕ್ಕಳಿಗೆ ಟ್ಯೂಷನ್ ಶುಲ್ಕವನ್ನು ಪಾವತಿಸುತ್ತಿದ್ದರೆ ಅಥವಾ ವಿಶ್ವವಿದ್ಯಾಲಯ, ಶಾಲಾ-ಕಾಲೇಜುಗಳಿಗೆ ಪಾವಟಿಸುತ್ತಿರುವ ಟ್ಯೂಷನ್ ಶುಲ್ಕದ ಮೇಲೆ 1.50 ಲಕ್ಷ ರೂಪಾಯಿಯವರೆಗೆ ಆದಾಯ ತೆರಿಗೆ ಕಡತವನ್ನು ಪಡೆಯಬಹುದು. ಈ ತೆರಿಗೆ ಕಡಿತವನ್ನು ಪಡೆಯಲು ನೀವು ಓ‌ಪಿ‌ಎಸ್ ಆಯ್ಕೆಯನ್ನು ಮಾಡಬೇಕಾಗುತ್ತದೆ.

ಆದಾಯ ತೆರಿಗೆ ಯೋಜನೆಯ ಸೆಕ್ಷನ್ 80D

ಆದಾಯ ತೆರಿಗೆ ಯೋಜನೆಯ ಸೆಕ್ಷನ್ 80D, ಅಡಿಯಲ್ಲಿ ನೀವು ವಿಮಾ ಪ್ರೀಮಿಯಮ್ ಖರೀದಿಸಿ ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ಹೌದು ನಿಮ್ಮ ಪೋಷಕರ ವಯಸ್ಸು 65 ವರ್ಷಕ್ಕಿಂತ ಹೆಚ್ಚಿದ್ದರೆ 50 ಸಾವಿರ ಮತ್ತು 60 ರಿಂದ 65 ವರ್ಷದವರಾಗಿದ್ದಾರೆ 25 ಸಾವಿರ ರೂಪಾಯಿಯವರೆಗೆ ವಿನಾಯಿತಿಯನ್ನು ಪಡೆಯಬಹುದು.

Leave a Comment