ನಬಾರ್ಡ್ ಗ್ರೇಡ್ ಎ ನೇಮಕಾತಿ 2024: 102 ಸಹಾಯಕ ವ್ಯವಸ್ಥಾಪಕರ ಹುದ್ದೆಗಳಿಗೆ ಈಗಲೇ ಅರ್ಜಿ ಹಾಕಿ

ನಬಾರ್ಡ್ ಗ್ರೇಡ್ ಎ ನೇಮಕಾತಿ 2024: 102 ಸಹಾಯಕ ವ್ಯವಸ್ಥಾಪಕರ ಹುದ್ದೆಗಳಿಗೆ ಈಗಲೇ ಅರ್ಜಿ ಹಾಕಿ

ಸ್ನೇಹಿತರೇ ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್ಮೆಂಟ್ 2024 ನೇ ಸಾಲಿನ ನಬಾರ್ಡ್ ಗ್ರೇಡ್ ಎ ಹುದ್ದೆಗಳ ನೇಮಕಾತಿ ಗೆ ಅಧ್ಕ್ರತ ಅಧಿಸೂಚನೆಯನ್ನು ಹೊರಡಿಸಿದೆ. ಈ ಬಾರಿ ವಿವಿಧ ವಿಭಾಗಗಳಲ್ಲಿ ಆರ್‌ಡಿ‌ಬಿ‌ಎಸ್ ಮತ್ತು ರಾಜಭಾಷಾ ಸೇರಿದಂತೆ ಗ್ರೇಡ್ ಎ ನಲ್ಲಿ ಸಹಾಯಕ ವ್ಯವಸ್ಥಾಪಕರ 102 ಹುದ್ದೆಗಳನ್ನು ಭರ್ತಿ ಮಾಡಲು ನಬಾರ್ಡ್ ಮುಂದಾಗಿದೆ.

ಹುದ್ದೆಗಳ ವಿವರ ಮತ್ತು ಅರ್ಹತೆ: ನಬಾರ್ಡ್ ಗ್ರೇಡ್ ಎ ನೇಮಕಾತಿ 2024 ರಲ್ಲಿ ಬ್ಯಾಂಕಿಂಗ್ ವಿಭಾಗದ ವಿವಿಧ ನಿರ್ವಹಣಾ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದ್ದು ಅರ್ಹ ಅಭ್ಯರ್ಥಿಗಳು ಸಂಬಂದಿತ ವಿಷಯದಲ್ಲಿ ಬ್ಯಾಚುಲರ್ ಡಿಗ್ರಿಯನ್ನು ಹೊಂದಿರಬೇಕು.

  • ಜನರಲ್(50): ಬಾಚುಲರ್ಸ್ ಡಿಗ್ರಿ ಅಥವಾ ಪಿಜಿ ಡಿಗ್ರಿ, ಎಮ್‌ಬಿಎ/ಪಿಜಿಡಿಎಂ ಅಥವಾ ಸಿಎ / ಸಿಎಸ್ / ಐಸಿಡಬ್ಲ್ಯುಎ / ಪಿಹೆಚ್‌ಡಿ.
  • ಚಾರ್ಟರ್ಡ್ ಅಕೌಂಟೆಂಟ್ (4): ಚಾರ್ಟರ್ಡ್ ಅಕೌಂಟೆಂಟ್.
  • ಫೈನಾನ್ಸ್ (7): ಬಿಬಿಎ/ಬಿಎಮ್‌ಎಸ್ (ಫೈನಾನ್ಸ್) ಅಥವಾ ಪಿಜಿ ಡಿಪ್ಲೋಮಾ/ಎಮ್‌ಬಿಎ (ಫೈನಾನ್ಸ್) / ಬಿಎಫ್‌ಐಎ.
  • ಕಂಪ್ಯೂಟರ್/ಐಟಿ (16): ಬಾಚುಲರ್ಸ್/ಪಿಜಿ ಡಿಗ್ರಿ ಇನ್ ಕಂಪ್ಯೂಟರ್ ಸೈನ್ಸ್/ಐಟಿ.
  • ಅಗ್ರಿಕಲ್ಚರ್ (2): ಬಾಚುಲರ್ಸ್ ಅಥವಾ 2 ವರ್ಷದ ಪಿಜಿ ಡಿಗ್ರಿ ಇನ್ ಅಗ್ರಿಕಲ್ಚರ್.
  • ಅನಿಮಲ್ ಹಸ್‌ಬಂಡ್ರಿ (2): ಬಾಚುಲರ್ಸ್ ಅಥವಾ ಪಿಜಿ ಡಿಗ್ರಿ ಇನ್ ವೆಟರಿನರಿ/ಅನಿಮಲ್ ಹಸ್‌ಬಂಡ್ರಿ.
  • ಫಿಷರೀಸ್ (1): ಬಾಚುಲರ್ಸ್ ಅಥವಾ ಪಿಜಿ ಡಿಗ್ರಿ ಇನ್ ಫಿಷರೀಸ್ ಸೈನ್ಸ್.
  • ಫುಡ್ ಪ್ರೊಸೆಸಿಂಗ್ (1): ಬಾಚುಲರ್ಸ್/ಪಿಜಿ ಡಿಗ್ರಿ ಇನ್ ಫುಡ್ ಪ್ರೊಸೆಸಿಂಗ್/ಫುಡ್ ಟೆಕ್ನಾಲಜಿ.
  • ಫಾರೆಸ್ಟ್ರಿ (2): ಬಾಚುಲರ್ಸ್/ಪಿಜಿ ಡಿಗ್ರಿ ಇನ್ ಫಾರೆಸ್ಟ್ರಿ.
  • ಪ್ಲಾಂಟೇಶನ್ ಮತ್ತು ಹಾರ್ಟಿಕಲ್ಚರ್ (1): ಬಾಚುಲರ್ಸ್/ಪಿಜಿ ಡಿಗ್ರಿ ಇನ್ ಹಾರ್ಟಿಕಲ್ಚರ್.
  • ಜಿಯೋ ಇನ್ಫಾರ್ಮಾಟಿಕ್ಸ್ (1): ಬಿ.ಇ./ಬಿ.ಟೆಕ್ ಅಥವಾ ಎಮ್.ಇ./ಎಮ್.ಟೆಕ್/ಎಮ್.ಎಸ್‌ಸಿ ಡಿಗ್ರಿ ಇನ್ ಜಿಯೋ ಇನ್ಫಾರ್ಮಾಟಿಕ್ಸ್.
  • ಡೆವಲಪ್ಮೆಂಟ್ ಮ್ಯಾನೇಜ್‌ಮೆಂಟ್ (3): ಬಾಚುಲರ್ಸ್/ಪಿಜಿ ಡಿಗ್ರಿ ಇನ್ ಸೋಶಿಯಲ್ ವರ್ಕ್/ಡೆವಲಪ್ಮೆಂಟ್ ಸ್ಟಡೀಸ್.
  • ಸ್ಟಾಟಿಸ್ಟಿಕ್ಸ್ (2): ಬಾಚುಲರ್ಸ್/ಮಾಸ್ಟರ್‌ಸ್ ಡಿಗ್ರಿ ಇನ್ ಸ್ಟಾಟಿಸ್ಟಿಕ್ಸ್.
  • ಸಿವಿಲ್ ಎಂಜಿನಿಯರಿಂಗ್ (3): ಬಾಚುಲರ್ಸ್/ಪಿಜಿ ಡಿಗ್ರಿ ಇನ್ ಸಿವಿಲ್ ಎಂಜಿನಿಯರಿಂಗ್.
  • ಎಲೆಕ್ಟ್ರಿಕಲ್ ಎಂಜಿನಿಯರಿಂಗ್ (1): ಬಾಚುಲರ್ಸ್/ಪಿಜಿ ಡಿಗ್ರಿ ಇನ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್.
  • ಎನ್ವಿರಾನ್ಮೆಂಟಲ್ ಎಂಜಿನಿಯರಿಂಗ್/ಸೈನ್ಸ್ (2): ಬಾಚುಲರ್ಸ್/ಮಾಸ್ಟರ್‌ಸ್ ಡಿಗ್ರಿ ಇನ್ ಎನ್ವಿರಾನ್ಮೆಂಟಲ್ ಎಂಜಿನಿಯರಿಂಗ್/ಸೈನ್ಸ್.
  • ಎಚ್‌ಆರ್ ಮ್ಯಾನೇಜ್‌ಮೆಂಟ್ (2): ಬಾಚುಲರ್ಸ್ + 2 ವರ್ಷಗಳ ಪಿಜಿ ಡಿಪ್ಲೋಮಾ ಇನ್ ಪರ್ಸನಲ್ ಮ್ಯಾನೇಜ್‌ಮೆಂಟ್/ಹ್ಯೂಮನ ರಿಸೋರ್ಸ್.
  • ಅಸಿಸ್ಟೆಂಟ್ ಮ್ಯಾನೇಜರ್ (ರಾಜಭಾಷಾ) (2): ಇಂಗ್ಲಿಷ್ ಅಥವಾ ಹಿಂದಿ ಮಾಧ್ಯಮದಲ್ಲಿ ಬಾಚುಲರ್ಸ್ + ಪಿಜಿ ಡಿಪ್ಲೋಮಾ ಇನ್ ಟ್ರಾನ್ಸ್ ಲೇಶನ್.

ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಪ್ರಿಲೀಂನರಿ ಪರೀಕ್ಷೆ, ಮುಖ್ಯ ಪರೀಕ್ಷೆ, ಮಾನಸಿಕ ಪರೀಕ್ಷೆ ಮತ್ತು ಸಂದರ್ಶನ ಹೀಗೆ ನಾಲ್ಕು ಹಂತಗಳನ್ನು ಒಳಗೊಂಡಿರುತ್ತದೆ.

ವಯೋಮಿತಿ ಮತ್ತು ಸಡಲಿಕೆ: ಅಭ್ಯರ್ಥಿಗಳ ವಯೋಮಿತಿಯು 21 ರಿಂದ 30 ವರ್ಷಗಳ ನಡುವಿರಬೇಕು. ಕೆಲವು ವಿಶೇಷ ವರ್ಗದ ಅಭ್ಯರ್ಥಿಗಳಿಗೆ ವಯೋ ಸಡಲಿಕೆ ನೀಡಿದ್ದು ಅದರಲ್ಲಿ ಓ‌ಬಿ‌ಸಿ ಗಾಗಿ 3 ವರ್ಷ, ಎಸ್‌ಸಿ/ಎಸ್‌ಟಿ ಗಾಗಿ 5 ವರ್ಷ ಮತ್ತು ಪಿ‌ಡಬಲ್ಯು‌ಬಿ‌ಡಿ ಅಭ್ಯರ್ಥಿಗಳಿಗೆ 10 ವರ್ಷ.

ವೇತನ: ಆಯ್ಕೆಯಾದ ಅಭ್ಯರ್ಥಿಗಳಿಗೆ ಗ್ರೇಡ್ ಎ ಅಧಿಕಾರಿ ಹುದ್ದೆಯ ಪ್ರಾರಂಬಿಕ ಮೂಲ ವೇತನವು ರೂ 44,500 ಇದು 4 ವರ್ಷಗಳ ನಂತರ ಪ್ರತಿ ವರ್ಷಕ್ಕೆ ರೂ 2500 ಬಡ್ತಿಯಂತೆ ರೂ 54,500 ಆಗುವುದು. 7 ವರ್ಷಗಳ ನಂತರ ಪ್ರತಿ ವರ್ಷಕ್ಕೆ 2850 ರೂ ಬಡ್ತಿ ಆಗುವುದು. ಹೀಗೆ 17 ವರ್ಷಗಲ್ ನಂತರ ಅಂತಿಮ ವೇತನವು ಪ್ರತಿ ತಿಂಗಳಿಗೆ ರೂ 89,150 ಆಗುವುದು.

ಹುದ್ದೆಗಳ ಹಂಚಿಕೆ: ಒಟ್ಟು 102 ಹುದ್ದೆಗಳಿದ್ದು ಅವುಗಳ ಹಂಚಿಕೆ ಈ ರೀತಿ ಇದೆ. ಜನರಲ್ (50), ಚಾರ್ಟರ್ಡ್ ಅಕೌಂಟೆಂಟ್ಸ್ (4), ಫೈನಾನ್ಸ್ (7), ಕಂಪ್ಯೂಟರ್/ಐಟಿ (16), ಅಗ್ರಿಕಲ್ಚರ್ (2), ಅನಿಮಲ್ ಹಸ್‌ಬಂಡ್ರಿ (2), ಫಿಷರೀಸ್ (1), ಫುಡ್ ಪ್ರೊಸೆಸಿಂಗ್ (1), ಫಾರೆಸ್ಟ್ರಿ (2), ಪ್ಲಾಂಟೇಶನ್ ಮತ್ತು ಹಾರ್ಟಿಕಲ್ಚರ್ (1), ಜಿಯೋ ಇನ್ಫಾರ್ಮಾಟಿಕ್ಸ್ (1), ಡೆವಲಪ್ಮೆಂಟ್ ಮ್ಯಾನೇಜ್‌ಮೆಂಟ್ (3), ಸ್ಟಾಟಿಸ್ಟಿಕ್ಸ್ (2), ಸಿವಿಲ್ ಎಂಜಿನಿಯರಿಂಗ್ (3), ಎಲೆಕ್ಟ್ರಿಕಲ್ ಎಂಜಿನಿಯರಿಂಗ್ (1), ಎನ್ವಿರಾನ್ಮೆಂಟಲ್ ಎಂಜಿನಿಯರಿಂಗ್/ಸೈನ್ಸ್ (2), ಎಚ್‌ಆರ್ ಮ್ಯಾನೇಜ್‌ಮೆಂಟ್ (2), ಮತ್ತು ಅಸಿಸ್ಟೆಂಟ್ ಮ್ಯಾನೇಜರ್ (ರಾಜಭಾಷಾ) (2)

ಅರ್ಜಿ ಶುಲ್ಕ: ಸಾಮಾನ್ಯ ಮತ್ತು ಓ‌ಬಿ‌ಸಿ ವರ್ಗದ ಅಭ್ಯರ್ಥಿಗಳಿಗೆ ರೂ 800 ಮತ್ತು ಎಸ್‌ಸಿ/ಎಸ್‌ಟಿ ಮತ್ತು ಪಿ‌ಡಬಲ್ಯು‌ಬಿ‌ಡಿ ವರ್ಗದ ಅಭ್ಯರ್ಥಿಗಳಿಗೆ ರೂ 150.

ಅರ್ಜಿ ಸಲ್ಲಿಕೆ: ಆಸಕ್ತ ಅಭ್ಯರ್ಥಿಗಳು ನಬಾರ್ಡ್ ಅಧಿಕ್ರತ ಪೋರ್ಟಲ್ ಗೆ ಭೇಟಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಯನ್ನು ಮಾಡಬಹುದಾಗಿದೆ. ಅರ್ಜಿ ಪ್ರಕ್ರಿಯೆಯಲ್ಲಿ ನಿಮ್ಮ ಮೂಲ ಮಾಹಿತಿಯನ್ನು ನೊಂದಾಯಿಸಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ ಆನ್ಲೈನ್ ಪಾವತಿ ವಿಧಾನವನ್ನು ಬಳಸಿಕೊಂಡು ಅರ್ಜಿ ಶುಲ್ಕವನ್ನು ಪಾವತಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 15, 2024 ಆಗಿರುವುದರಿಂದ ಆಸಕ್ತರು ನಿಗದಿತ ದಿನಾಂಕದೊಳಗಾಗಿ ಅರ್ಜಿ ಸಲ್ಲಿಕೆಯನ್ನು ಮಾಡಬೇಕು

ಪ್ರಮುಖ ಲಿಂಕುಗಳು

ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸುವ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ನಬಾರ್ಡ್ ಬ್ಯಾಂಕ್ ನಲ್ಲಿ ಉದ್ಯೋಗವನ್ನು ಪಡೆಯಲು ಕೂಡಲೇ ಅರ್ಜಿ ಸಲ್ಲಿಸಬಹುದು.

Leave a Comment