ನ್ಯಾಷನಲ್ ಕೌನ್ಸಿಲ್ ಆಫ್ ಮ್ಯೂಸಿಯಮ್ಸ್ ನೇಮಕಾತಿ 2024: ಇಲಾಖೆಯಿಂದ ಸಹಾಯಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಸ್ನೇಹಿತರೇ ನ್ಯಾಷನಲ್ ಕೌನ್ಸಿಲ್ ಆಫ್ ಮ್ಯೂಸಿಯಮ್ಸ್ ಇಲಾಖೆಯಿಂದ ಸಹಾಯಕ ಹುದ್ದೆಗಳ ನೇಮಕಾತಿಗೆ ಅಧಿಕ್ರತ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಎನ್‌ಸಿ‌ಎಸ್‌ಎಮ್ ನೇಮಕಾತಿ 2024(NCSM Recruitment 2024) ಅಧಿಸೂಚನೆಯ ಪ್ರಕಟಣೆಯಂತೆ ಒಟ್ಟು 17 ಹುದ್ದೆಗಳು ಖಾಲಿ ಇದ್ದು, ಉದ್ಯೋಕಾಂಕ್ಷಿಗಳಿಗೆ ಆಫೀಸ್ ಸಹಾಯಕ ಹುದ್ದೆಗಳನ್ನು(Office Jobs) ಗಿಟ್ಟಿಸಿಕೊಳ್ಳಲು ಸುವರ್ಣಾವಕಾಶ ಕಲ್ಪಿಸಿಕೊಟ್ಟಂತಾಗಿದೆ.

ನ್ಯಾಷನಲ್ ಕೌನ್ಸಿಲ್ ಆಫ್ ಮ್ಯೂಸಿಯಮ್ಸ್ ನೇಮಕಾತಿಗೆ ಅರ್ಜಿ ಸಲ್ಲಿಸಲು ಆಸಕ್ತತೆಯನ್ನು ಹೊಂದಿರುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ಪ್ರಕಟಿಸಿರುವ ಅಗತ್ಯ ವಿಧ್ಯಾರ್ಹತೆ(Qualification), ವಯೋಮಿತಿ(Age limit), ವೇತನ(Salary) ಮತ್ತು ಹುದ್ದೆಗಳ ವಿವರ(Job details) ಇನ್ನಿತರ ಪ್ರಮುಖ ಅಂಶಗಳ ಮಾಹಿತಿಯನ್ನು ಲೇಖನದಲ್ಲಿ ನೀಡಲಾಗಿದ್ದು, ಅರ್ಜಿ ಸಲ್ಲಿಸುವ ಪೂರ್ವದಲ್ಲಿ ಇದನ್ನು ತಪ್ಪದೆ ಪೂರ್ತಿಯಾಗಿ ಓದಿರಿ.

ನ್ಯಾಷನಲ್ ಕೌನ್ಸಿಲ್ ಆಫ್ ಮ್ಯೂಸಿಯಮ್ಸ್ ನೇಮಕಾತಿ 2024: ಹುದ್ದೆಗಳ ವಿವರ

ಎನ್‌ಸಿ‌ಎಸ್‌ಎಮ್ ನೇಮಕಾತಿ 2024ರ ಅಧಿಸೂಚನೆಯ ಪ್ರಕಾರ ಇಲಾಖೆಯಲ್ಲಿ ವಿವಿಧ ವಿಭಾಗದ ಒಟ್ಟು 17 ಖಾಲಿ ಇವೆ. ಹುದ್ದೆಗಳ ವಿಂಗಡಣೆ ಈ ಕೆಳಗಿನಂತಿದೆ

  • ಕ್ಯುರೇಟರ್ ಇ ವಿಭಾಗದಲ್ಲಿ 01 ಹುದ್ದೆ
  • ಕ್ಯುರೇಟರ್ ಬಿ ವಿಭಾಗದಲ್ಲಿ 09 ಹುದ್ದೆಗಳು
  • ಕಚೇರಿ ಸಹಾಯಕ ವಿಭಾಗದಲ್ಲಿ 07 ಹುದ್ದೆಗಳು

ನ್ಯಾಷನಲ್ ಕೌನ್ಸಿಲ್ ಆಫ್ ಮ್ಯೂಸಿಯಮ್ಸ್ ನೇಮಕಾತಿ 2024: ವಯೋಮಿತಿ

ಆಸಕ್ತ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು ಈ ಕೆಳಗಿನಂತಿದೆ

  • ಕ್ಯುರೇಟರ್ ಇ ವಿಭಾಗ: ಕನಿಷ್ಠ 18 ವರ್ಷ ಮತ್ತು ಗರಿಷ್ಠ 45 ವರ್ಷ
  • ಕ್ಯುರೇಟರ್ ಬಿ ವಿಭಾಗ: ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ
  • ಕಚೇರಿ ಸಹಾಯಕ ವಿಭಾಗ: ಕನಿಷ್ಠ 18 ವರ್ಷ ಮತ್ತು ಗರಿಷ್ಠ 30 ವರ್ಷ

ನ್ಯಾಷನಲ್ ಕೌನ್ಸಿಲ್ ಆಫ್ ಮ್ಯೂಸಿಯಮ್ಸ್ ನೇಮಕಾತಿ 2024: ವಿಧ್ಯಾರ್ಹತೆ

ಎನ್‌ಸಿ‌ಎಸ್‌ಎಮ್ ನೇಮಕಾತಿ 2024 ಗೆ ಅಭ್ಯರ್ಥಿಗಳು ಬಿ‌ಇ ಅಥವಾ ಬಿ.ಟೆಕ್/ಎಮ್‌ಏ ಅಥವಾ ಎಮ್.ಟೆಕ್/ಎಮ್‌ಎಸ್‌ಸಿ/ಎಮ್‌ಎಸ್ ಮಾನ್ಯತೆ ಪಡೆದ ವಿಶ್ವವಿಧ್ಯಾಲಯದಿಂದ ಯಾವುದಾದರೊಂದು ಪದವಿಯನ್ನು ಪೂರ್ಣಗೊಳಿಸಿರಬೇಕು

ನ್ಯಾಷನಲ್ ಕೌನ್ಸಿಲ್ ಆಫ್ ಮ್ಯೂಸಿಯಮ್ಸ್ ನೇಮಕಾತಿ 2024: ವೇತನ

ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉತ್ತಮ ವೇತನ ದೊರೆಯಲಿದ್ದು, ಎನ್‌ಸಿ‌ಎಸ್‌ಎಮ್ ಇಲಾಖೆಯ ವೇತನ ಶ್ರೇಣಿಯನ್ನು ಕೆಳಗೆ ನೀಡಲಾಗಿದೆ.

  • ಕ್ಯುರೇಟರ್ ಇ ವಿಭಾಗದ ಹುದ್ದೆಗಳಿಗೆ ರೂ.123100-ರೂ. 215900
  • ಕ್ಯುರೇಟರ್ ಬಿ ವಿಭಾಗದ ಹುದ್ದೆಗಳಿಗೆ ರೂ.56100-ರೂ. 177500
  • ಕಚೇರಿ ಸಹಾಯಕ ವಿಭಾಗದ ಹುದ್ದೆಗಳಿಗೆ ರೂ.35400-ರೂ.124000

ಅರ್ಜಿ ಶುಲ್ಕ

  • ಕ್ಯುರೇಟರ್ ಹುದ್ದೆಗಳಿಗೆ ಅರ್ಜಿ ಶುಲ್ಕವು ರೂ.1,700 ಆಗಿರುತ್ತದೆ (ಎಸ್‌ಸಿ/ಎಸ್‌ಟಿ/ಮಹಿಳೆ/ಅಂಗವಿಕಲ/ ಮಾಜಿ ಸೈನಿಕರಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ)
  • ಕಚೇರಿ ಸಹಾಯಕ ಹುದ್ದೆಗಳಿಗೆ ಅರ್ಜಿ ಶುಲ್ಕವು ರೂ.1,180 ಆಗಿರುತ್ತದೆ (ಎಸ್‌ಸಿ/ಎಸ್‌ಟಿ/ಮಹಿಳೆ/ಅಂಗವಿಕಲ/ ಮಾಜಿ ಸೈನಿಕರಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ)

ಆಯ್ಕೆ ವಿಧಾನ

ಮೊದಲು ಲಿಖಿತ ಪರೀಕ್ಷೆಯನ್ನು ನಡೆಸಿ ಶಾರ್ಟ್ ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ಕೊನೆಯಲ್ಲಿ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು

ನೇಮಕಾತಿಗೆ ಸಂಬಂದಿತ ಪ್ರಮುಖ ದಿನಾಂಕಗಳು

ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ 15 ಜೂನ್ ಆಗಿದ್ದು, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 05 ಜುಲೈ, 2024 ಆಗಿರುತ್ತದೆ.

Leave a Comment