ವಾಹನ ಸವಾರರಿಗೆ ಹೊಸ ನಿಯಮ! ಟೋಲ್ ಸಂಗ್ರಹಣೆಯಲ್ಲಿ ಬದಲಾವಣೆ

ವಾಹನ ಸವಾರರಿಗೆ ಹೊಸ ನಿಯಮ! ಟೋಲ್ ಸಂಗ್ರಹಣೆಯಲ್ಲಿ ಬದಲಾವಣೆ

ಸ್ನೇಹಿತರೇ ರಸ್ತೆ ಮತ್ತು ಹೆದ್ದಾರಿಗಳ ಸಚಿವರಾದ ನಿತಿನ್ ಗಡ್ಕರಿ ಅವರು ಭಾರತದ ರಸ್ತೆಗಳ ಮೂಲ ಸೌಕರ್ಯಾಗಳನ್ನು ಆಧುನಿಕರಣಗೊಳಿಸಲು ಬಹುಮುಖ್ಯ ಯೋಯಿಜನೆಯೊಂದನ್ನು ಅನಾವರಣಗೊಳಿಸಿದ್ದಾರೆ. ಹೌದು ರಸ್ತೆ ಮತ್ತು ಹೆದ್ದಾರಿಗಳ ಸಚಿವಾಲಯವು ಲಾಜಿಸ್ಟಿಕ್ ಸುಧಾರಣೆಗೆ ಮಾಸ್ಟರ್ ಪ್ಲಾನ್ ಅಭಿವ್ರದ್ದಿ ಪಡಿಸಿದ್ದು, ಇದರಲ್ಲಿ ಹೆದ್ದಾರಿ ಮತ್ತು ಹೈ ಸ್ಪೀಡ್ ಹೆದ್ದಾರಿಗಳನ್ನೊಳಗೊಂಡಿದೆ. ಈ ಯೋಜನೆಯನ್ನು ಸಚಿವಾಲವು ಪಿ‌ಎಮ್ ಗತಿ ಶಕ್ತಿ ಚಟುವಟಿಕೆಗಳ ಅಡಿಯಲ್ಲಿ ಈ-ವೇ ಬಿಲ್ಲುಗಳು, ಟೋಲ್ ಮತ್ತು ಸಂಚಾರ ಸಮೀಕ್ಷೆಗಳ ವರದಿಯನ್ನು ಪರಿಶೀಲಿಸಿ ತಯಾರಿಸಲಾಗಿದೆ.

ಜಾಗತಿಕ ನಾವಿಗೇಶನ್ ಸ್ಯಾಟಲೈಟ್ ಸಿಸ್ಟಂ (GNSS)

ಎಲ್ಲರಿಗೂ ಚಕಿತಗೊಳಿಸುವ ವಿಷಯವೇನೆಂದರೆ ಈ ಯೋಜನೆಯ ಅಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಮೇಲೆ ಜಾಗತಿಕ ನಾವಿಗೇಶನ್ ಸ್ಯಾಟಲೈಟ್ ಸಿಸ್ಟಂ (GNSS) ಆಧಾರಿತ ಟೋಲ್ ಸಂಗ್ರಹಣೆಯ ವ್ಯವಸ್ಥೆಯನ್ನು ಪರಿಚಯಿಸಲಾಗುವುದು. ಈ ಹೊಸ ಕ್ರಮವು ಹಿಂದಿನ ಪರಂಪರಾಗತ ಟೋಲ್ ಬೂತ್ ಗಳನ್ನು ಬದಲಾಯಿಸಲಿದೆ. ಹೌದು ಟೋಲ್ ಸಂಗ್ರಹಣೆಯನ್ನು ಸುಗಮಗೊಳಿಸಲು ಮತ್ತು ಟೋಲ್ ಸಂಗ್ರಹಣಾ ಕೇಂದ್ರಗಳ ದಕ್ಷತೆಯನ್ನು ಹೆಚ್ಚಿಸಲು ಈ ಯೋಜನೆಯನ್ನು ಜಾರಿಗೆ ತರಲಿದೆ.

ಸ್ನೇಹಿತರೇ ಈಗಾಗಲೇ ಜಿ‌ಎನ್‌ಎಸ್‌ಎಸ್ ವ್ಯವಸ್ಥೆಯ ಪೈಲೆಟ್ ಅಧ್ಯಯನವನ್ನು ಕರ್ನಾಟಕದ ಬೆಂಗಳೂರು-ಮೈಸೂರು ಎನ್‌ಎಚ್-275 ರಸ್ತೆ, ಪಾಣಿಪತ್-ಹಿಸಾರ್ ಎನ್‌ಎಚ್ 709 ರಸ್ತೆಯ ಮೇಲೆ ನಡೆಸಲಾಗಿದೆ. ಸಚಿವಾಲವು ಸ್ಟೇಕ್ ಹೊಲ್ದರ್ಸ್( ಪಾಲುದಾರರು) ಸಮಾಲೋಚನೆಗಾಗಿ ಜೂನ್ 25, 2024 ರಂದು ಸಭೆ ನಡೆಸಿದ್ದು ಇದರ ಜೊತೆಗೆ ಜೂನ್ 7, 2024 ರಂದು ಗ್ಲೋಬಲ್ ಎಕ್ಸ್ಪ್ರೇಷನ್ ಆಫ್ ಇಂಟರೆಸ್ಟ್ (EOI) ಅನ್ನು ಆಹ್ವಾನಿಸಲಾಗಿತ್ತು.

ರಸ್ತೆಗಳ ನಿರ್ಮಾಣವನ್ನು ತ್ವರಿತಗೊಳಿಸಲು ಸಚಿವಾಲವು ಪ್ರಸ್ತುತ ಮತ್ತು ಮುಂದಿನ ಹಣಕಾಸು ವರ್ಷದ ವಿವರವಾದ ಯೋಜನಾ ವರದಿ (DPR) ಮತ್ತು ಟೆಂಡರ್ ಹಂತದಲ್ಲಿ ಹಲವಾರು ಯೋಜನೆಗಳನ್ನು ಹೊಂದಿದ್ದೇವೆ ಅಂತ ನಿತಿನ್ ಗಡ್ಕರಿಯವರು ತಿಳಿಸಿದ್ದಾರೆ.

ಸ್ನೇಹಿತರೇ ಹೊಸ ಜಿ‌ಎನ್‌ಎಸ್‌ಎಸ್ ಆಧಾರಿತ ಟೋಲ್ ಸಂಗ್ರಹಣೆ ವ್ಯವಸ್ಥೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಅಭಿವ್ರದ್ದಿಯ ಮಾಸ್ಟರ್ ಪ್ಲಾನ್ ಗಳನ್ನು ಜಾರಿಗೆ ತರಲು ಸಚಿವಾಲವು ಮುಂದಾಗಿದ್ದು, ಈ ಎರಡು ಯೋಜನೆಗಳು ಲಾಜಿಸ್ಟಿಕ್ಸ್ ಸಾಗಾಣಿಕೆಯಲ್ಲಿ ಸುಧಾರಣೆ ಮತ್ತು ದಕ್ಷತೆಯನ್ನು ಹೆಚ್ಚಿಸಲಿವೆ ಎಂದು ಹೇಳಬಹುದು.

Leave a Comment