ಸ್ನೇಹಿತರೇ ನೀವು ಪ್ಯಾನ್ ಕಾರ್ಡ್ (PAN Card) ಬಳಕೆದಾರರಾಗಿದ್ದು, ಆದಾಯ ತೆರಿಗೆ ಇಲಾಖೆಯ (Income Tax Department) ನಿಯಮಗಳ ಪ್ರಕಾರ ನೀವು ನಿಮ್ಮ ಆದಾಯದ ಎಷ್ಟು ಪ್ರತಿಶತ ಬಡ್ಡಿಯನ್ನು ನೀಡಬೇಕು ಅನ್ನುವ ಗೊಂದಲದಲ್ಲಿದ್ದರೆ, ಈ ಲೇಖನದಲ್ಲಿ ಆದಾಯ ತೆರೆಗೆ ನಿಯಮಗಳ ಮಾಹಿತಿಯನ್ನು ನಿಮಗೆ ತುಂಬಾ ಸರಳವಾಗಿ, ಅರ್ಥವಾಗುವ ರೀತಿಯಲ್ಲಿ ತಿಳಿಸಲಾಗಿದೆ.
ಪ್ಯಾನ್ ಕಾರ್ಡ್
ಪ್ಯಾನ್ ಕಾರ್ಡ್ ಅಂದರೆ ಶಾಶ್ವತ ಖಾತೆ ಸಂಖ್ಯೆ (Permanent Account Number) ಇದು ದೇಶದೆಲ್ಲಡೆ ನಡೆಯುವ ಹಣಕಾಸು ವಹಿವಾಟುಗಳ ಪರಿಶೀಲನೆಯನ್ನು ಮಾಡಲು ಜಾರಿಗೊಳಿಸಿರುವುದಾಗಿದೆ. ತೆರಿಗೆ ಇಲಾಖೆಯ ನಿಯಮಗಳ ಪ್ರಕಾರ ನೀವು ನಿಗದಿತ ಮಿತಿಗಿಂತ ಆದಾಯವನ್ನು ಹೊಂದಿದರೆ ಹಣದ ಮೇಲೆ ತೆರಿಗೆಯನ್ನು ಕಟ್ಟಬೇಕಾಗುತ್ತದೆ. ತೆರಿಗೆ ಇಲಾಖೆಯು ರೂ 2.5 ಲಕ್ಷಕ್ಕಿಂತ ಕಡಿಮೆ ಆದಾಯವನ್ನು ಹೊಂದಿದ ಜನರಿಂದ ತೆರಿಗೆ ಸಂಗ್ರಹ ಮಾಡುವುದಿಲ್ಲ. ಆದರೆ ನಿಮ್ಮ ಆದಾಯವು ರೂ 2.5 ಲಕ್ಷ ಗಡಿ ದಾಟಿದರೆ ನಿಮ್ಮ ಮೇಲೆ ತೆರಿಗೆ ಇಲಾಖೆಯ ನಿಯಮಗಳು ಅನ್ವಯವಾಗಿ ನೀವು ತೆರಿಗೆ ಪಾವತಿಸಬೇಕಾಗುತ್ತದೆ.
ತೆರಿಗೆ ಇಲಾಖೆಯ ನೀಡಿರುವ ಮಾಹಿತಿ ಪ್ರಕಾರ ಭಾರತ ದೇಶದಲ್ಲಿ ಕೇವಲ,
- 1% ಜನರು ಮಾತ್ರ 50 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯವನ್ನು ಹೊಂದಿದ್ದಾರೆ
- 7% ಜನರು ಮಾತ್ರ10 ರಿಂದ 50 ಲಕ್ಷ ವಾರ್ಷಿಕ ಆದಾಯವನ್ನು ಹೊಂದಿದ್ದಾರೆ
- 17% ಜನರು ಮಾತ್ರ 5 ರಿಂದ 10 ಲಕ್ಷ ವಾರ್ಷಿಕ ಆದಾಯವನ್ನು ಹೊಂದಿದ್ದಾರೆ
- 18% ಜನರು ಮಾತ್ರ 2.5 ರಿಂದ 5 ಲಕ್ಷ ವಾರ್ಷಿಕ ಆದಾಯವನ್ನು ಹೊಂದಿದ್ದಾರೆ
- 57% ಜನರು 2.5 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯವನ್ನು ಹೊಂದಿದ್ದಾರೆ
ಕೆಳಗೆ ನೀಡಿರುವ ಮಾಹಿತಿಯಿಂದ ನಿಮ್ಮ ಆದಾಯದ ಅನುಗುಣವಾಗಿ ನಿಮ್ಮ ಹಣದ ಮೇಲೆ ಎಷ್ಟು ಬಡ್ಡಿಯ ಆದಾಯ ತೆರಿಗೆಯನ್ನು (income tax) ಇಲಾಖೆಗೆ ಪಾವತಿಸಬೇಕು ಅಂತ ತಿಳಿಯುವಿರಿ.
- ನೀವು 2.5 ರಿಂದ 5 ಲಕ್ಷ ವಾರ್ಷಿಕ ಆದಾಯವನ್ನು ಹೊಂದಿದವರು 5% ತೆರಿಗೆಯನ್ನು ಪಾವತಿಸಬೇಕು
- ನೀವು 5 ರಿಂದ 7.5 ಲಕ್ಷ ವಾರ್ಷಿಕ ಆದಾಯವನ್ನು ಹೊಂದಿದ್ದರೆ 10% ತೆರಿಗೆಯನ್ನು ಪಾವತಿಸಬೇಕು
- ನೀವು 7.5 ರಿಂದ 10 ಲಕ್ಷ ವಾರ್ಷಿಕ ಆದಾಯವನ್ನು ಹೊಂದಿದ್ದರೆ 15% ತೆರಿಗೆಯನ್ನು ಪಾವತಿಸಬೇಕು
- ನೀವು 10 ರಿಂದ 12.5 ಲಕ್ಷ ವಾರ್ಷಿಕ ಆದಾಯವನ್ನು ಹೊಂದಿದ್ದರೆ 20% ತೆರಿಗೆಯನ್ನು ಪಾವತಿಸಬೇಕು
- ನೀವು 12.5 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯವನ್ನು ಹೊಂದಿದ್ದರೆ 30% ತೆರಿಗೆಯನ್ನು ಪಾವತಿಸಬೇಕು