ಎಲ್‌ಐಸಿ: ಈ ಯೋಜನೆಯಲ್ಲಿ ಒಂದೇ ಬಾರಿ ಹೂಡಿಕೆ ಮಾಡಿದರೆ ಸಾಕು! ನೀವು 1 ಲಕ್ಷ ಪಿಂಚಣಿಯನ್ನು ಪಡೆಯಬಹುದು
ಸ್ನೇಹಿತರೇ ಭಾರತೀಯ ಜೀವ ವಿಮಾ ನಿಗಮವು ಹೊಸ “ಜೀವನ್ ಶಾಂತಿ ಪಾಲಿಸಿ” ಪಿಂಚಣಿ ಯೋಜನೆಯನ್ನು ದೇಶದ ಜನರಿಗೆ ಪರಿಚಯಿಸಿದ್ದು, ಇದು ನೀವ್ರತ್ತಿಯ ನಂತರದ ಜನರ ಜೀವನದಲ್ಲಿ ಆರ್ಥಿಕ ಸ್ಥಿರತೆಯನ್ನು ಕಾಪಾಡಲಿದೆ. ಜೀವನದ ಅಂತಿಮ ಘಟ್ಟದವರೆಗೂ ನಿರಂತರ ಆದಾಯವನ್ನು ಪಡೆಯಲು ಯಾರು ಇಚ್ಚಿಸುತ್ತಾರೋ ಅಂತವರಿಗೆ ಈ ಯೋಜನೆಯು ಪರ್ಫೆಕ್ಟ್ ಆಗಿದೆ.
ಎಲ್‌ಐಸಿ ನ್ಯೂ ಜೀವನ್ ಶಾಂತಿ ಪಾಲಿಸಿಯ ವಿವರ: ಈ ಯೋಜನೆಯಲ್ಲಿ 30 ರಿಂದ 79 ವರ್ಷ ತುಂಬಿರುವ ದೇಶದ ಪ್ರತಿಯೊಬ್ಬ ನಾಗರಿಕನು ಹೂಡಿಕೆಯನ್ನು ಮಾಡಬಹುದು. ಎಲ್‌ಐಸಿ ನ್ಯೂ ಜೀವನ್ ಶಾಂತಿ ಪಾಲಿಸಿಯು ಸಿಂಗಲ್ ಪ್ರಿಮಿಯಮ್ ಪ್ಲಾನ್ ಆಗಿದ್ದು, ಹೂಡಿಕೆದಾರರು ಒಂದೇ ಬಾರಿ ಹೂಡಿಕೆಯನ್ನು ಮಾಡಿ ಲೈಫ್ ಟೈಮ್ ಪಿಂಚಣಿಯ ಸೌಲಭ್ಯವನ್ನು ಅನುಭೋಗಿಸಬಹುದು.
ಎಲ್‌ಐಸಿ ನ್ಯೂ ಜೀವನ್ ಶಾಂತಿ ಪಾಲಿಸಿಯ ಲೆಕ್ಕಾಚಾರ: ನೀವು ಜೀವನ್ ಶಾಂತಿ ಪಾಲಿಸಿಯಲ್ಲಿ ಹೂಡಿಕೆಯನ್ನು ಮಾಡಿದ ನಂತರ, ನಿಮ್ಮ ಪಿಂಚಣಿಯ ಆಯ್ಕೆಯನ್ನು ಮಾಡಬೇಕಾಗುತ್ತದೆ ಹೂಡಿಕೆದಾರರು defferred annuity for single life ಮತ್ತು defferred annuity for joint life ಗಳಲ್ಲಿ ಹೂಡಿಕೆ ಮಾಡಿ ವಾರ್ಷಿಕ, ಅರ್ಧ ವಾರ್ಷಿಕ ಮತ್ತು ಮಾಸಿಕ ಆವ್ರತ್ತಿಗಳಲ್ಲಿ ಪಿಂಚಣಿ ಸೌಲಭ್ಯವನ್ನು ಪಡೆಯಬಹುದಾಗಿದೆ.
Defferred annuity for single life: ಉದಾಹರಣೆಗೆ 55 ವಯಸ್ಸಿನ ಒಬ್ಬ ವ್ಯಕ್ತಿಯು ರೂ.10 ಲಕ್ಷವನ್ನು ವರ್ಷಗಳ ಕಾಲ ಹೂಡಿಕೆ ಮಾಡಿದರೆ, ಆ ವ್ಯಕ್ತಿಯು 60 ವರ್ಷ ವಯಸ್ಸಿನಿಂದ ವಾರ್ಷಿಕ ರೂ. 93,500 ಪಿಂಚನಿಯನ್ನು, ಅರ್ಧವಾರ್ಷಿಕವಾಗಿ ರೂ. 46,750 ಪಿಂಚಣಿಯನ್ನು ಮತ್ತು ಮಾಸಿಕವಾಗಿ ರೂ. 7,790 ಪಿಂಚಣಿಯನ್ನು ಪಡೆಯಬಹುದು.
Defferred annuity for joint life: ಉದಾಹರಣೆಗೆ 55 ವಯಸ್ಸಿನ ಒಬ್ಬ ವ್ಯಕ್ತಿಯು ರೂ.10 ಲಕ್ಷವನ್ನು ವರ್ಷಗಳ ಕಾಲ ಹೂಡಿಕೆ ಮಾಡಿದರೆ, ಆ ವ್ಯಕ್ತಿಯು 60 ವರ್ಷ ವಯಸ್ಸಿನಿಂದ ವಾರ್ಷಿಕ ರೂ. 89,000 ಪಿಂಚನಿಯನ್ನು, ಅರ್ಧವಾರ್ಷಿಕವಾಗಿ ರೂ. 44,500 ಪಿಂಚಣಿಯನ್ನು ಮತ್ತು ಮಾಸಿಕವಾಗಿ ರೂ. 7,420 ಪಿಂಚಣಿಯನ್ನು ಪಡೆಯಬಹುದು.
ಈ ಮೇಲೆ ತಿಳಿಸಿದ ಲೆಕ್ಕಾಚಾರವು ಸಾಮಾನ್ಯವಾಗಿದ್ದು, ವಾಸ್ತವ ಲೆಕ್ಕಾಚಾರಗಳು ಬದಲಾಗಬಹುದು. ಎಲ್‌ಐಸಿ ಸಂಸ್ಥೆಯಿಂದ ಅಧಿಕ್ರತ ಮಾಹಿತಿಯನ್ನು ಪಡೆಯಬಹುದು.
ಪಿಂಚಣಿ ಹೊಂದಿದ ಸಮಯದಲ್ಲಿ ಹೂಡಿಕೆದಾರನ ಮರಣ ಸಂಭವಿಸಿದರೆ, ನಾಮನಿರ್ದೇಶಿತ ವ್ಯಕ್ತಿಗೆ ಮೂಲ ಹೂಡಿಕೆಯ ಮೊತ್ತಕ್ಕೆ 10% ಹೆಚ್ಚುವರಿ ಸೇರಿಸಿ ಪರಿಹಾರ ನೀಡಲಾಗುವುದು. ಹೂಡಿಕೆದಾರ ಹಕ್ಕುಪತ್ರ ಮುಂಗಡ ಮಾಡಲು ಬಯಸಿದರೆ ಅವರು ಬಾಕಿ ಇರುವ ಪಿಂಚಣಿಯನ್ನು ತ್ವರಿತವಾಗಿ ಪಡೆಯುವ ಹಕ್ಕನ್ನು ಹೊಂದಿರುತ್ತಾರೆ ಮತ್ತು ಯೋಜನೆಯದೆಯಲ್ಲಿ ನೀವು ನಿಮ್ಮ ಹೂಡಿಕೆಯ ಮೊತ್ತದ ವಿರುದ್ದ ಶಾಲಾ ಪಡೆಯಬಹುದಾಗಿದೆ.