ಪ್ಯಾನ್ ಕಾರ್ಡ್ ಪ್ರತಿಯೊಬ್ಬ ಭಾರತೀಯ ನಾಗರಿಕನಿಗೂ ಕಡ್ಡಾಯವೇ! ಬಿಗ್ ಅಪ್ಡೇಟ್

ಪ್ಯಾನ್ ಕಾರ್ಡ್ ಪ್ರತಿಯೊಬ್ಬ ಭಾರತೀಯ ನಾಗರಿಕನಿಗೂ ಕಡ್ಡಾಯವೇ! ಬಿಗ್ ಅಪ್ಡೇಟ್

ಸ್ನೇಹಿತರೇ, ಪ್ಯಾನ್ ಕಾರ್ಡ್ ಅಂದರೆ ಪರ್ಮನೆಂಟ್ ಅಕೌಂಟ್ ನಂಬರ್ ಭಾರತದ ಆದಾಯ ತೆರಿಗೆ ಇಲಾಖೆ ನೀಡುವ ಹತ್ತು ಅಕ್ಷರಗಳ ಆಲ್ಫಾ ನ್ಯೂಮರಿಕ್ ಗುರುತಾಗಿದೆ. ಪ್ಯಾನ್ ಕಾರ್ಡ್ ವಿವಿಧ ಬಗೆಯ ಹಣಕಾಸು ಮತ್ತು ತೆರಿಗೆ ಸಂಬಂದಿತ ದಿನನಿತ್ಯದ ವ್ಯವಹಾರಗಳನ್ನು ನಡೆಸಲು ಇಂದು ಅತ್ಯಗತ್ಯವಾಗಿದೆ.

ಏಕೆಂದರೆ ಪ್ಯಾನ್ ಕಾರ್ಡ್ ಪ್ರತಿಯೊಬ್ಬ ತೆರಿಗೆದಾರನ ಹಣಕಾಸು ಚಟುವಟಿಕೆಗಳ ಪರಿಶೀಲನೆಯನ್ನು ನಿರಂತರವಾಗಿ ಪರಿಶೀಲಿಸುತ್ತಿರುತ್ತದೆ. ಹಾಗಾದರೆ ಭಾರದ ಪ್ರತಿಯೊಬ್ಬ ನಾಗರಿಕ ಪ್ಯಾನ್ ಕಾರ್ಡ್ ಹೊಂದಿರುವ ಅಗತ್ಯವಿದೆಯೇ ಎನ್ನುವ ಪ್ರಶ್ನೆ ನಿಮ್ಮಲ್ಲಿ ಹುಟ್ಟಿರಬಹುದು, ಇದರ ಉತ್ತರ ಇಲ್ಲ. ಪ್ರತಿಯೊಬ್ಬನು ಸಹ ಪ್ಯಾನ್ ಕಾರ್ಡ್ ಹೊಂದಿರುವ ಕಡ್ಡಾಯ ನಿಯಮ ಭಾರತ ಸರ್ಕಾರದಿಂದ ಜಾರಿಗೊಂಡಿಲ್ಲ ಆದರೆ ಕೆಲವು ಹಣಕಾಸು ವ್ಯವಹಾರಗಳಲ್ಲಿ ಮತ್ತು ಆದಾಯ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಮತ್ತು ಘಟಕಗಳಿಗೆ ಇದು ಕಡ್ಡಾಯವಾಗಿದೆ.

ಪ್ಯಾನ್ ಕಾರ್ಡ್ ಆದಾಯ ತೆರಿಗೆ ರಿಟರ್ನ್ಸ್ ಮತ್ತು ತೆರಿಗೆ ಕಡತಗಳನ್ನು ಕ್ಲೈಮ್ ಮಾಡುವಂತವರಿಗೆ ಬಹುಮುಖ್ಯ ಗುರುತಾಗಿ ಕಾರ್ಯ ನಿರ್ವಹಿಸುತ್ತದೆ. ಬ್ಯಾಂಕ್ ಖಾತೆಗಳನ್ನು ತೆರಿಯುವಾಗ, ರೂ 50,000 ಕ್ಕಿಂತ ಹೆಚ್ಚು ನಿಗದಿತ ಠೇವಣಿಗಳನ್ನು ಮಾಡುವಾಗ, ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸುವಾಗ, ವಿದೇಶಿ ವ್ಯವಹಾರಗಳನ್ನು ನಡೆಸುವಾಗ ಮ್ಯೂಚ್ಯುವಲ್ ಫಂಡ್ ಅಥವಾ ಹೂಡಿಕೆಗಳನ್ನು ಖರೀದಿಸುವಾಗ ಪ್ಯಾನ್ ಕಾರ್ಡ್ ಅಗತ್ಯವಿರುತ್ತದೆ.

ಅದೇ ರೀತಿ 10 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಆಸ್ತಿ ಖರೀದಿಸುವಾಗ, 2 ಲಕ್ಷವನ್ನು ಮೀರಿದ ವ್ಯಾಪಾರ ವ್ಯವಹಾರಗಳಿಗೆ, 2 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಆಭರಣ ಖರೀದಿಗೆ, ವಿದೇಶಿ ಪ್ರವಾಸದ ದೊಡ್ಡ ಪಾವತಿ ಮಾಡುವಾಗ ಪ್ಯಾನ್ ಕಾರ್ಡ್ ಕಡ್ಡಾಯ ವಾಗಿರುತ್ತದೆ.

ಸ್ನೇಹಿತರೇ ಒಟ್ಟಾರೆ, ಪ್ರತಿಯೊಬ್ಬ ಭಾರತೀಯನು ಪ್ಯಾನ್ ಕಾರ್ಡ್ ಹೊಂದಿರುವ ಅಗ್ತ್ಯವಿರುವುದಿಲ್ಲ, ಆದರೆ ಆದಾಯ ತೆರಿಗೆ ಹೊಂದಿದ ನಾಗರಿಕರು, ಭಾರತದಲ್ಲಿ ಆದಾಯ ಹೊಂದಿರುವ ಅನಿವಾಸಿ ನಾಗರಿಕರು (NRIs) ಹೊಂದಿರುವ ಪ್ಯಾನ್ ಹೊಂದಿರುವ ಅಗತ್ಯವಿರುತ್ತದೆ.

Leave a Comment