ಪಂಜಾಬ್ ನ್ಯಾಷನಲ್ ಬ್ಯಾಂಕ್ ನೇಮಕಾತಿ 2024: ಒಟ್ಟು 2700 ಹುದ್ದೆಗಳ ಭರ್ಜರಿ ನೇಮಕಾತಿ

ಸ್ನೇಹಿತರೇ ಪಂಜಾಬ್ ನ್ಯಾಷನಲ್ ಬ್ಯಾಂಕ್(Panjab National Bank) ಸಂಸ್ಥೆಯಲ್ಲಿ ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಪಂಜಾಬ್ ನ್ಯಾಷನಲ್ ಬ್ಯಾಂಕ್ ನೇಮಕಾತಿ 2024(Panjab National Bank Recruitment 2024) ಅಧಿಕ್ರತ ಅಧಿಸೂಚನೆಯನ್ನು(Official Notification) ಹೊರಡಿಸಿದೆ. ಒಟ್ಟು ವಿವಿಧ ರಾಜ್ಯಗಳಲ್ಲಿ 2700 ಅಪ್ರೆಂಟಿಸ್ ಹುದ್ದೆಗಳ (PNB Apprentices vacancy) ನೇಮಕಕ್ಕೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 14-07-2024 ಆಗಿದ್ದು, ಪಿ‌ಎನ್‌ಬಿ ನೇಮಕಾತಿ 2024 (PNB Recruitment 2024) ಆನ್ಲೈನ್ ಪರೀಕ್ಷೆಯೂ ದಿನಾಂಕ 28-07-2024 ರಂದು ನಡೆಯಲಿದೆ

ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗಾಗಿ ಅರ್ಜಿ ಸಲ್ಲಿಕೆ ಮಾಡಿ ಪರೀಕ್ಷೆ ತಯಾರಿ ನಡೆಸತಕ್ಕದ್ದು. ಆಸಕ್ತರು ಪಿ‌ಎನ್‌ಬಿ ಅಪ್ರೆಂಟಿಸ್ ನೇಮಕಾತಿ 2024 (PNB Apprentices Recruitment 2024) ಅಧಿಕ್ರತ ಅಧಿಸೂಚನೆಯಲ್ಲಿ ಪ್ರಕಟಿಸಿರುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಕೆಗೆ ಬೇಕಾಗುವ ವಿಧ್ಯಾರ್ಹತೆ, ವಯೋಮಿತಿ, ವೇತನ, ಅರ್ಜಿ ಶುಲ್ಕ, ವಿವಿಧ ಹುದ್ದೆಗಳ ವಿವರ ಮತ್ತು ಆಯ್ಕೆ ವಿಧಾನ ಇನ್ನಿತರ ಪ್ರಮುಖ ಅಂಶಗಳ ಬಗ್ಗೆ ಅರಿತುಕೊಳ್ಳುವುದು ಉತ್ತಮ. ಈ ಲೇಖನದಲ್ಲಿ ಅರ್ಹತಾ ಮಾನದಂಡಗಳ ನಿಮಗೆ ನೀಡಲಾಗಿದೆ. ತಪ್ಪದೆ ಲೇಖನವನ್ನು ಪೂರ್ತಿಯಾಗಿ ಓದಿರಿ.

ಹುದ್ದೆಗಳ ವಿವರ

ಪಂಜಾಬ್ ನ್ಯಾಷನಲ್ ಬ್ಯಾಂಕ್ ನೇಮಕಾತಿ 2024 ಅಧಿಕ್ರತ ಅಧಿಸೂಚನೆ (Official Notification) ಯಲ್ಲಿ ಪ್ರಕಟಿಸಿರುವಂತೆ ಒಟ್ಟು ಅಪ್ರೆಂಟಿಸ್ 2700 ಹುದ್ದೆಗಳ ನೇಮಕಾತಿ ನಡೆಯಲಿದ್ದು, ವಿವಿಧ ರಾಜ್ಯಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ನಿಯೋಜಿಸಲಾಗುತ್ತದೆ. ಎಲ್ಲ ರಾಜ್ಯಗಳ ಪಟ್ಟಿಯನ್ನು ಕೆಳಗಡೆ ನೀಡಲಾಗಿದೆ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (02), ಆಂಧ್ರ ಪ್ರದೇಶ (27), ಅರುಣಾಚಲ ಪ್ರದೇಶ (04), ಅಸ್ಸಾಂ (27), ಬಿಹಾರ (79), ಚಂಡೀಗಢ (19), ಛತ್ತೀಸ್ಗಢ (51), ದಾದ್ರಾ ಮತ್ತು ನಾಗರ ಹವೇಲಿ (02), ದಮನ್ ಮತ್ತು ದಿಯು (04), ದೆಹಲಿ (178), ಗೋವಾ (04), ಗುಜರಾತ್ (117), ಹರಿಯಾಣ (226), ಹಿಮಾಚಲ ಪ್ರದೇಶ (83), ಜಮ್ಮು ಮತ್ತು ಕಾಶ್ಮೀರ (26), ಜಾರ್ಖಂಡ್ (19), ಕರ್ನಾಟಕ (32), ಕೇರಳ (22), ಲಡಾಖ್ (02), ಮಧ್ಯ ಪ್ರದೇಶ (133), ಮಹಾರಾಷ್ಟ್ರ (145), ಮಣಿಪುರ (06), ಮೇಘಾಲಯ (02), ಮಿಜೋರಾಂ (02), ನಾಗಾಲ್ಯಾಂಡ್ (02), ಒಡಿಶಾ (71), ಪಾಂಡಿಚೇರಿ (02), ಪಂಜಾಬ್ (251), ರಾಜಸ್ಥಾನ (206), ಸಿಕ್ಕಿಂ (04), ತಮಿಳು ನಾಡು (60), ತೆಲಂಗಾಣ (34), ತ್ರಿಪುರ (13), ಉತ್ತರ ಪ್ರದೇಶ (561), ಉತ್ತರಾಖಂಡ್ (48), ಪಶ್ಚಿಮ ಬಂಗಾಳ (236).

ವಿದ್ಯಾರ್ಹತೆ

ಅಭ್ಯರ್ಥಿಗಳು ಯಾವುದೇ ಒಂದು ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯದಿಂದ ಪದವಿಯನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ

ಅಭ್ಯರ್ಥಿಗಳ ಕನಿಷ್ಠ ವಯಸ್ಸು 20 ವರ್ಷಗಳು ಮತ್ತು ಗರಿಷ್ಠ ವಯಸ್ಸು 28 ವರ್ಷಗಳು ಆಗಿರಬೇಕು, ಅಂದರೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು 30-06-1996 ಕ್ಕಿಂತ ಮುಂಚೆ ಮತ್ತು 30-06-2004 ಕ್ಕಿಂತ ನಂತರ ಜನಿಸಿರಬಾರದು, ವಿಶೇಷ ವರ್ಗದ ಅಭ್ಯರ್ಥಿಗಳಿಗೆ ನಿಯಮಗಳಿಗೆ ಅನುಸಾರ ವಯೋ ಸಡಲಿಕೆ ಅನ್ವಯಿಸಲಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ಅಫೀಷಿಯಲ್ ನೋಟಿಫಿಕೇಶನ್ ಪರಿಶೀಲಿಸಿ.

ಅರ್ಜಿ ಶುಲ್ಕ

  • ಸಾಮಾನ್ಯ/ಓ‌ಬಿ‌ಸಿ ವರ್ಗಗಳಿಗೆ: ರೂ. 944
  • ಮಹಿಳೆ/ಎಸ್‌ಸಿ/ಎಸ್‌ಟಿವರ್ಗಗಳಿಗೆ: ರೂ. 708
  • ಪಿ‌ಡಬಲ್ಯು‌ಬಿ‌ಡಿ ವರ್ಗಕ್ಕೆ: ರೂ. 472

ಆಯ್ಕೆ ವಿಧಾನ

2024ರ ಪಿಎನ್‌ಬಿ ನೇಮಕಾತಿ 2024 ಅಧಿಸೂಚನೆಯಲ್ಲಿ ಹೇಳಿರುವಂತೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯ ಮೊದಲ ಹಂತದಲ್ಲಿ ಕಂಪ್ಯೂಟರ್ ಜ್ಞಾನ ಪರೀಕ್ಷೆ ನಡೆಸಿ (ಅಭ್ಯರ್ಥಿಗಳು ಸ್ಥಳೀಯ ಭಾಷಾ ಪ್ರಾವಿಣ್ಯತೆ ಪಡೆದಿರಬೇಕು), ಕೊನೆಯಲ್ಲಿ ವೈದ್ಯಕೀಯ ಪರೀಕ್ಷೆ ಪರಿಶೀಲನೆಯ ನಂತರ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ ವಿಧಾನ

  • ಮೊದಲು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
  • “ಲೇಟೆಸ್ಟ್” ವಿಭಾಗಕ್ಕೆ ಹೋಗಿ ” ಪಂಜಾಬ್ ನ್ಯಾಷನಲ್ ಬ್ಯಾಂಕ್ ನೇಮಕಾತಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಿ
  • ನಂತರ “ಅಪ್ಲೈ ಆನ್ಲೈನ್” ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಎಲ್ಲಾ ಅಗತ್ಯ ವಿವರಗಳನ್ನು ಭರ್ತಿ ಮಾಡಿ “ನೆಕ್ಸ್ಟ್” ಬಟನ್ ಮೇಲೆ ಕ್ಲಿಕ್ ಮಾಡಿ
  • ಈವಾಗ ನಿರ್ದಿಷ್ಟ ಗಾತ್ರದ ನಿಮ್ಮ ಫೋಟೋ ಮತ್ತು ಬೆರಳಚ್ಚುನ್ನು ಅಪ್‌ಲೋಡ್ ಮಾಡಿ.
  • ಕೊನೆಯಲ್ಲಿ ಶುಲ್ಕ ಪಾವತಿಸಿ, ಇಲ್ಲಿಗೆ ಅರ್ಜಿ ಪ್ರಕ್ರಿಯೆ ಕೊನೆಗೊಳ್ಳುವುದು

Leave a Comment