ಪಿ‌ಎಮ್ ವಿಶ್ವಕರ್ಮ ಯೋಜನೆ ಅರ್ಜಿ ಸಲ್ಲಿಕೆ ಶೀಘ್ರದಲ್ಲೇ ಆರಂಭ: ರೂ 15000 ಪಡೆಯಲು ಯಾರೆಲ್ಲಾ ಅರ್ಹರು ಗೊತ್ತಾ!

ಸ್ನೇಹಿತರೇ ಸೆಪ್ಟೆಂಬರ್ 17, 2023 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ (MSME) ಸಚಿವಾಲಯದ ಅಡಿಯಲ್ಲಿ ಪಿ‌ಎಮ್ ವಿಶ್ವಕರ್ಮ ಯೋಜನೆಯನ್ನು(PM Vishwakarma Yojana) ಆರಂಭಿಸಿದರು. ಈ ಯೋಜನೆಯಲ್ಲಿ ಕೇಂದ್ರ ಸರ್ಕಾರವು 2023-24 ರ ಹಣಕಾಸು ವರ್ಷದಿಂದ 2027-28 ಹಣಕಾಸು ವರ್ಷದವರೆಗೆ ಅಂದರೆ ಒಟ್ಟು 5 ವರ್ಷಗಳ ಅವಧಿಗೆ ರೂ 13,000 ಕೋಟಿಯನ್ನು ಖರ್ಚು ಮಾಡಲಿದೆ.

ಹೌದು, ಪಿ‌ಎಮ್ ವಿಶ್ವಕರ್ಮ ಯೋಜನೆ ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಲ್ಲಿ ಪಾಲ್ಗೊಂಡಿರುವ ದೇಶದ ಎಲ್ಲ ಕುಶಲಕರ್ಮಿಗಳ ಸರ್ವತೋಮುಖ ಅಭಿವ್ರದ್ದಿಗಾಗಿ ಜಾರಿಗೊಳಿಸಿರುವ ಯೋಜನೆಯಾಗಿದೆ. ಹಾಗಾದರೆ ಯಾರು ಈ ಕುಶಲಕರ್ಮಿ ವ್ಯಾಪಾರಸ್ತರು ಅನ್ನುವ ಗೊಂದಲ ನಿಮ್ಮಲ್ಲಿ ಇದ್ದೇ ಇರುತ್ತೆ ಮತ್ತು ಕೇಂದ್ರ ಸರ್ಕಾರ ಪಿ‌ಎಮ್ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಕುಶಲಕರ್ಮಿಗಳಿಗೆ ಏನೆಲ್ಲಾ ಸೌಲಭ್ಯವನ್ನು ನೀಡುತ್ತಿದೆ ಅಂತ ತಿಳಿಯಲು ಬಯಸಿದ್ದರೆ ಲೇಖನವನ್ನು ಪೂರ್ತಿಯಾಗಿ ಓದಿರಿ.

ಪಿ‌ಎಮ್ ವಿಶ್ವಕರ್ಮ ಯೋಜನೆಗೆ ಈ 18 ವ್ಯಾಪಾರಸ್ತರು ಅರ್ಹರು

  • ಬಡಗಿ
  • ದೋಣಿ ತಯಾರಕರು
  • ಶಸ್ತ್ರಾಸ್ತ್ರ ತಯಾರಿಸುವವರು (ಆರ್ಮರ್)
  • ಕಮ್ಮಾರರು
  • ಸುತ್ತಿಗೆ ಮತ್ತು ಟೂಲ್ ಕಿಟ್ ಮಾಡುವವರು
  • ಬೀಗ ತಯಾರಿಸುವವರು
  • ಅಕ್ಕಸಾಲಿಗರು
  • ಕುಂಬಾರರು
  • ಶಿಲ್ಪಿಗಳು, ಕಲ್ಲು ಒಡೆಯುವವರು
  • ಚಮ್ಮಾರರು
  • ಮೇಸ್ತ್ರಿ
  • ಬುಟ್ಟಿ/ಚಾಪೆ/ಪೊರಕೆ /ಸೆಣಬು ನೇಯುವವರು
  • ಸಾಂಪ್ರದಾಯಿಕ ಗೊಂಬೆ ಮತ್ತು ಆಟಿಕೆ ತಯಾರಕರು
  • ಕ್ಷೌರಿಕರು
  • ಹೂಮಾಲೆ ತಯಾರಕರು
  • ಮಡಿವಾಳರು
  • ಟೈಲರ್
  • ಮೀನಿನ ಬಲೆಯ ತಯಾರಕರು

ಪಿ‌ಎಮ್ ವಿಶ್ವಕರ್ಮ ಯೋಜನೆಯ ಪ್ರಯೋಜನಗಳು

  • ಪಿ‌ಎಮ್ ವಿಶ್ವಕರ್ಮ ಯೋಜನೆ ಫಲಾನುಭವಿಗಳಿಗೆ ಪ್ರತ್ಯೇಕ ಉದ್ದಿಮೆಗೆ ಸಂಬಂದಿತ 15 ದಿನಗಳ ತರಬೇತಿ ನೀಡಲಾಗುತ್ತದೆ. ಮತ್ತು ತರಬೇತಿಯ ಅವಧಿಯಲ್ಲಿ ಪ್ರತಿದಿನ ರೂ. 500ರ ಶಿಷ್ಯವೇತನವು ಸಹ ನೀಡಲಾಗುತ್ತದೆ.
  • ಫಲಾನುಭವಿಗಳಿಗೆ ರೂ. 15,000 ವರೆಗೆ ಉದ್ದಿಮೆಗೆ ಸಂಬಂದಿತ ಉಪಕರಣಗಳ ಖರೀದಿಗೆ ಟೂಲ್ಕಿಟ್ ಪ್ರೋತ್ಸಾಹ ನೀಡಲಾಗುತ್ತದೆ.
  • ಭಾರತ ಸರ್ಕಾರ ಫಲಾನುಭವಿಗಳಿಗೆ ‘ಉದ್ಯಮ ಅಭಿವೃದ್ಧಿ ಸಾಲ’ದ ರೂಪದಲ್ಲಿ ರೂ. 3 ಲಕ್ಷದವರೆಗೆ ನೀಡುತ್ತದೆ. ಮೊದಲ ಹಂತದಲ್ಲಿ ರೂ. 1 ಲಕ್ಷ ಮತ್ತು ಎರಡನೇ ಹಂತದಲ್ಲಿ ರೂ. 2 ಲಕ್ಷವನ್ನು ನೀಡಲಾಗುತ್ತದೆ. ಫಲಾನುಭವಿಗಳು ಮೂಲ ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ರೂ. 1 ಲಕ್ಷ ಮೊದಲ ಹಂತದ ಸಾಲ ಪಡೆಯಲು ಅರ್ಹರಾಗಿರುತ್ತಾರೆ ಮತ್ತು ಎರಡನೇ ಹಂತದ ಸಾಲವನ್ನು ಪಡೆಯಲು, ಫಲಾನುಭವಿಯು ಮೊದಲ ಹಂತದ ರೂ. 1 ಲಕ್ಷ ಸಾಲವನ್ನು 5% ಬಡ್ಡಿದರದಲ್ಲಿ ಮರುಪಾವತಿ ಮಾಡಿರಬೇಕು.

ಪಿ‌ಎಮ್ ವಿಶ್ವಕರ್ಮ ಯೋಜನೆಯ ಅರ್ಜಿಯನ್ನು ಆಸಕ್ತ ಮತ್ತು ಅರ್ಹರು ಸೂಕ್ತ ದಾಖಲೆಗಳೊಂದಿಗೆ ಹತ್ತಿರದ ಸಿ‌ಎಸ್‌ಸಿ ಕೇಂದ್ರಕ್ಕೆ ಭೇಟಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಅಥವಾ ಪಿ‌ಎಮ್ ವಿಶ್ವಕರ್ಮ ಯೋಜನೆಯ ಅಧಿಕ್ರತ ಪೋರ್ಟಲ್ ಗೆ ಭೇಟಿ ಮನೆಯಲ್ಲೇ ಕುಳಿತು ಅರ್ಜಿ ಸಲ್ಲಿಸಬಹುದು. ಆನ್ಲೈನ್ ಅರ್ಜಿ ಸಲ್ಲಿಕೆಯ ಲಿಂಕನ್ನು ಕೆಳಗೆ ನೀಡಲಾಗಿದೆ.

Leave a Comment