ಕೆ‌ಎಸ್‌ಆರ್‌ಟಿ‌ಸಿ ಪ್ರಯಾಣ ದರ ಏರಿಕೆ ಬಹುತೇಕ ಖಚಿತ! ಮತ್ತೊಂದು ಬೆಲೆ ಏರಿಕೆಯಿಂದ ರಾಜ್ಯದ ಜನರಲ್ಲಿ ಹೆಚ್ಚಿದ ಆತಂಕ

ಕೆ‌ಎಸ್‌ಆರ್‌ಟಿ‌ಸಿ ಪ್ರಯಾಣ ದರ ಏರಿಕೆ ಬಹುತೇಕ ಖಚಿತ! ಮತ್ತೊಂದು ಬೆಲೆ ಏರಿಕೆಯಿಂದ ರಾಜ್ಯದ ಜನರಲ್ಲಿ ಹೆಚ್ಚಿದ ಆತಂಕ

ಸ್ನೇಹಿತರೇ ಗ್ಯಾರಂಟಿ ಯೋಜನೆಗಳಿಂದ ಸಾಕಷ್ಟು ನಷ್ಟ ಅನುಭವಿಸುತ್ತಿರುವ ರಾಜ್ಯ ಸರ್ಕಾರ, ಒಂದೊಂದಾಗಿಯೇ ವಸ್ತುಗಳ ಬೆಲೆ ಏರಿಕೆಯನ್ನು ಮಾಡುತ್ತಿದೆ ಅನ್ನುವ ಆರೋಪಗಳು ಕೇಳಿ ಬರುತ್ತಿದ್ದು, ಈಗ ಕೆ‌ಎಸ್‌ಆರ್‌ಟಿ‌ಸಿ ನಿಗಮವು ಜನರ ಪ್ರಯಾಣ ದರ ಹೆಚ್ಚಿಸುವುದು ಬಹುತೇಕ ಖಚಿತ ಅಂತ ಕೆ‌ಎಸ್‌ಆರ್‌ಟಿ‌ಸಿ ನಿಗಮದ ಅಧ್ಯಕ್ಷ ಶ್ರೀನಿವಾಸ್ ಅವರು ತಿಳಿಸಿದ್ದಾರೆ.

ಹೌದು, ರಾಜ್ಯ ಸರ್ಕಾರ ಈ ಹಿಂದೆ ಪೆಟ್ರೋಲ್, ಡೀಸೆಲ್ ಮತ್ತು ಹಾಲಿನ ಬೆಲೆ ಏರಿಕೆ ಮಾರ್ಗ ಅನುಸರಿಸಿರುವುದನ್ನು ಕಂಡು ರಾಜ್ಯದ ಜನರು ತೀವ್ರ ಬೇಸರ ವ್ಯಕ್ತ ಪಡಿಸಿದ್ದರು. ಆದರೆ ಇದೀಗ ಮತ್ತೊಂದು ಬೆಲೆ ಏರಿಕೆ ಮಾಡುವುದಾಗಿ ನಿರ್ಧಾರ ಕೈಗೊಳ್ಳಲಾಗಿದ್ದು ಶೀಘ್ರದಲ್ಲೇ ಅದನ್ನು ಜಾರಿಗೊಳಿಸಲಾಗುವುದು ಅನ್ನುವ ಸುದ್ದಿಯು ರಾಜ್ಯದ ಜನರ ನಿದ್ದೆ ಕೆಡಿಸಿದೆ.

ಕೆ‌ಎಸ್‌ಆರ್‌ಟಿ‌ಸಿ ನಿಗಮದ ಅಧ್ಯಕ್ಷ ಶ್ರೀನಿವಾಸ್ ಸ್ಪಷ್ಟನೆ

ಗುಬ್ಬಿ ವಿಧಾನಸಭಾ ಕ್ಷೇತ್ರದ ಶಾಸಕ ಮತ್ತು ಕೆ‌ಎಸ್‌ಆರ್‌ಟಿ‌ಸಿ ನಿಗಮದ ಅಧ್ಯಕ್ಷ ಶ್ರೀನಿವಾಸ್ ಅವರು ಮಾಧ್ಯಮಗಳ ಜೊತೆ ಮಾತನಾಡಿ ಕೆ‌ಎಸ್‌ಆರ್‌ಟಿ‌ಸಿ ನಿಗಮವು ಕಳೆದ ತ್ರೈ ಮಾಸಿಕದಲ್ಲಿ ಒಟ್ಟು 295 ಕೋಟಿ ನಷ್ಟವನ್ನು ಅನುಭವಿಸಿದ್ದು, ಇದು ಹೀಗೆ ಮುಂದುವರೆದರೆ ನಿಗಮವು ಅತಿ ಶೀಘ್ರದಲ್ಲೇ ಮುಚ್ಚಿ ಹೋಗಲಿದೆ. ರಾಜ್ಯದಲ್ಲಿ ಪೆಟ್ರೋಲ್ ಡೀಸೆಲ್ ಮತ್ತು ವಾಹನಗಳ ಬಿಡಿ ಭಾಗಗಳ ಬೆಲೆ ಏರಿರುವುದರಿಂದ ಕೆ‌ಎಸ್‌ಆರ್‌ಟಿ‌ಸಿ ಪ್ರಯಾಣ ದರ ಹೆಚ್ಚಿಸುವುದು ಅಗತ್ಯವಿದೆ.

ಪ್ರತಿ ಬಾರಿಯೂ ನಿಗಮದ ನಷ್ಟ ಭರಿಕೆಗೆ ಸರ್ಕಾರದ ನೆರವು ಪಡೆಯುವುದು ಉತ್ತಮ ಆಡಳಿತದ ಲಕ್ಷಣವಲ್ಲ ಅಂತ ಹೇಳಿದರು. ಕೆ‌ಎಸ್‌ಆರ್‌ಟಿ‌ಸಿ ಪ್ರಯಾಣ ದರ ಹೆಚ್ಚಳ ಮಾಡುವ ಪ್ರಸ್ತಾವದ ಬಗ್ಗೆ ಸದ್ಯದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸಿ ಜಾರಿಗೊಳಿಸಲಾಗುವುದು ಅಂತ ತಿಳಿಸಿದರು.

ಹಾಗೆಯೇ ಪ್ರಯಾಣ ದರ ಏರಿಕೆಯಾದರೆ ಕೇವಲ ಪುರುಷರಿಗೆ ಮಾತ್ರವಲ್ಲದೆ ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರ ಪ್ರಯಾಣ ದರವು ಸಹ ಏರಿಕೆಯಾಗಲಿದೆ. ಆದರೆ ಮಹಿಳೆಯರ ಪ್ರಯಾಣ ದರದ ಖರ್ಚನ್ನು ರಾಜ್ಯ ಸರ್ಕಾರ ಭರಿಸಲಿದೆ.

ಕೆ‌ಎಸ್‌ಆರ್‌ಟಿ‌ಸಿ ನಿಗಮದ ಅಧ್ಯಕ್ಷ ಶ್ರೀನಿವಾಸ್ ಅವರ ಈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಬೇಸರ ವ್ಯಕ್ತ ಪಡಿಸಿದ್ದು, ಮಾಧ್ಯಮದವರು ಪ್ರಯಾಣ ದರ ಏರಿಕೆಯ ಬಗ್ಗೆ ಪ್ರಶ್ನೀಸಿದಾಗ, ನಿಗಮದ ಅಧ್ಯಕ್ಷ ಶ್ರೀನಿವಾಸ್ ಬಳಿಯೇ ಚರ್ಚಿಸಿ ಅಂತ ವಾಗ್ದಾಳಿ ನಡೆಸಿದರು.

Leave a Comment