ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ನೇಮಕಾತಿ 2024: ಒಟ್ಟು 2700 ಹುದ್ದೆಗಳ ಬ್ರಹತ್ ನೇಮಕಾತಿ. ಅಭ್ಯರ್ಥಿಗಳಿಗೆ ಸುವರ್ಣಾವಕಾಶ

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ನೇಮಕಾತಿ 2024: ಒಟ್ಟು 2700 ಹುದ್ದೆಗಳ ಬ್ರಹತ್ ನೇಮಕಾತಿ. ಅಭ್ಯರ್ಥಿಗಳಿಗೆ ಸುವರ್ಣಾವಕಾಶ

ಸ್ನೇಹಿತರೇ ನೀವು ಪದವಿ ಪಾಸಾಗಿದ್ದು, ಉದ್ಯೋಗಕ್ಕಾಗಿ ಹುಡುಕುತ್ತಿದ್ದರೆ, ನಿಮಗಾಗಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಉತ್ತಮ ಅವಕಾಶವನ್ನು ಕಲ್ಪಿಸಿಕೊಡಲಿದೆ. ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (PNB) ಅಪ್ರೆಂಟಿಸ್ ತರಬೇತುದಾರ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕ್ರತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಆಸಕ್ತಿ ಹೊಂದಿರುವವರು ಕೆಳಗಿನ ಮಾಹಿತಿಗಳನ್ನು ಓದಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (PNB) 2700 ಅಪ್ರೆಂಟಿಸ್ ತರಬೇತುದಾರ ಹುದ್ದೆಗಳನ್ನು ಭರ್ತಿಮಾಡಲು ನಿಶ್ಚಯಿಸಿದ್ದು, ಕರ್ನಾಟಕದಲ್ಲಿ 22 ಹುದ್ದೆಗಳಿವೆ, ಅಭ್ಯರ್ಥಿಗಳು ಯಾವುದೇ ಪದವಿ ಪಾಸಾಗಿದ್ದರೆ ಸಾಕು. ಅಪ್ರೆಂಟಿಸ್ ಹುದ್ದೆಗಳ ಆಯ್ಕೆಯನ್ನು ಆನ್‌ಲೈನ್‌ ಸಿಬಿಟಿ ಪರೀಕ್ಷೆಯ ಮೂಲಕ ಮಾಡಲಾಗುವುದು ಮತ್ತು ಈ ಹುದ್ದೆಗಳ ಮಾಸಿಕ ಸ್ಟೈಫಂಡ್ ₹15,000 ಆಗಿರುತ್ತದೆ

ವಯೋಮಿತಿ

ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 20 ವರ್ಷವಾಗಿದ್ದು, ಗರಿಷ್ಠ ವಯಸ್ಸು 28 ವರ್ಷ ಇರಬೇಕು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಎಸ್‌ಸಿ/ಎಸ್‌ಟಿ ಕೆಟಗರಿಯವರಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ

ಪ್ರಮುಖ ದಿನಾಂಕಗಳು

ಅರ್ಜಿಯನ್ನು 30-06-2024 ರಿಂದ 14-07-2024ರ ಒಳಗೆ ಸಲ್ಲಿಸಬೇಕು ಮತ್ತು ಆನ್‌ಲೈನ್‌ ಪರೀಕ್ಷೆ 28-07-2024 ರಂದು ನಡೆಯಲಿದೆ.

ಅರ್ಜಿ ಶುಲ್ಕ

ಜೆನೆರಲ್ ಕೆಟಗರಿಯ ಅಭ್ಯರ್ಥಿಗಳು ₹800, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ₹600, ಮತ್ತು ಪಿಡಬ್ಲ್ಯೂಡಿ ಅಭ್ಯರ್ಥಿಗಳು ₹400 ಅರ್ಜಿಶುಲ್ಕ ಪಾವತಿಸಬೇಕು

ಪರೀಕ್ಷಾ ವಿಧಾನ

ಪರೀಕ್ಷೆಯಲ್ಲಿ ಜೆನೆರಲ್ ಇಂಗ್ಲಿಷ್, ಫೈನಾನ್ಷಿಯಲ್ ಅವಾರ್ನೆಸ್, ಕ್ವಾಂಟಿಟೇಟಿವ್ ಅಂಡ್ ರೀಸನಿಂಗ್ ಆಪ್ಟಿಟ್ಯೂಡ್, ಮತ್ತು ಕಂಪ್ಯೂಟರ್ ನಾಲೆಡ್ಜ್ ವಿಭಾಗಗಳಿಂದ ತಲಾ 25 ಅಂಕಗಳಿಗೆ ಪ್ರಶ್ನೆಗಳನ್ನು ಕೇಳಲಾಗುವುದು. ಅಭ್ಯರ್ಥಿಗಳಿಗೆ 60 ನಿಮಿಷದ ಪರೀಕ್ಷೆಯಲ್ಲಿ 100 ಅಂಕಗಳಿಗೆ, 100 ಪ್ರಶ್ನೆಗಳನ್ನು ಕೇಳಲಾಗುವುದು.

ವೇತನ

ಪಿ‌ಎನ್‌ಬಿ ಅಧಿಕ್ರತ ಅಧಿಸೂಚನೆಯ ಪ್ರಕಾರ ಅಪ್ರೆಂಟಿಸ್ ತರಬೇತಿಯು ಅವಧಿ 1 ವರ್ಷವಾಗಿದ್ದು, ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ನಿಯೋಜನೆಗೊಳ್ಳುವವರಿಗೆ ₹10,000, ನಗರ ಪ್ರದೇಶದಲ್ಲಿ ನಿಯೋಜನೆಗೊಳ್ಳುವವರಿಗೆ ₹12,000, ಮತ್ತು ಮೆಟ್ರೋಪಾಲಿಟನ್‌ ಸಿಟಿಗಳಲ್ಲಿ ನಿಯೋಜನೆಗೊಳ್ಳುವವರಿಗೆ ₹15,000 ಸ್ಟೈಫಂಡ್ ನೀಡಲಾಗುತ್ತದೆ

ಅರ್ಜಿ ಸಲ್ಲಿಕೆಯ ಲಿಂಕ್

Leave a Comment