ಎಚ್‌ಡಿ‌ಎಫ್‌ಸಿ ಬ್ಯಾಂಕ್ ನಿಂದ ಸ್ಪೆಷಲ್ ಎಫ್‌ಡಿ ಬಡ್ಡಿ ದರ ಘೋಷಣೆ! ನೀವು 20 ಸಾವಿರ ಹೂಡಿಕೆ ಮಾಡಿದರೆ 35 ತಿಂಗಳಲ್ಲಿ ಬಂಪರ್ ರಿಟರ್ನ್ಸ್

ಎಚ್‌ಡಿ‌ಎಫ್‌ಸಿ ಬ್ಯಾಂಕ್ ನಿಂದ ಸ್ಪೆಷಲ್ ಎಫ್‌ಡಿ ಬಡ್ಡಿ ದರ ಘೋಷಣೆ! ನೀವು 20 ಸಾವಿರ ಹೂಡಿಕೆ ಮಾಡಿದರೆ 35 ತಿಂಗಳಲ್ಲಿ ಬಂಪರ್ ರಿಟರ್ನ್ಸ್

ಸ್ನೇಹಿತರೇ ಇತ್ತೀಚಿಗೆ ದೇಶದ ಪ್ರಖ್ಯಾತ ಹಣಕಾಸು ಸಂಸ್ಥೆಗಳಾದ ಎಸ್‌ಬಿ‌ಐ ಬ್ಯಾಂಕ್, ಕೆನರಾ ಬ್ಯಾಂಕ್, ಪಿ‌ಎನ್‌ಬಿ, ಎಚ್‌ಡಿ‌ಎಫ್‌ಸಿ ಇನ್ನಿತರ ಪ್ರಮುಖ ಬ್ಯಾಂಕುಗಳು ದೇಶದ ಜನರಿಗೆ ಸ್ಥಿರ ಠೇವಣಿಯ ಮೇಲೆ ಸ್ಪೆಷಲ್ ಎಫ್‌ಡಿ ರೇಟ್ಸ್ ಗಳನ್ನು ನೀಡುತ್ತಿದ್ದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ಕ್ರಾಂತಿಯೇ ತಂದಿವೆ.

ಹೌದು ಭಾರತದ ಅತಿದೊಡ್ಡ ಖಾಸಗಿ ವಲಯದ ಸಾಲದಾತ ಎಚ್‌ಡಿ‌ಎಫ್‌ಸಿ ಬ್ಯಾಂಕ್ ನಾಗರಿಕರಿಗೆ ಸ್ಥಿರ ಠೇವಣಿಯಲ್ಲಿ ಹೂಡಿಕೆ ಮಾಡವಂತೆ ಆಕರ್ಷಿಸಲು ಸ್ಪೆಷಲ್ ಎಫ್‌ಡಿ ರೇಟ್ಸ್ ಘೋಷಿಸಿದೆ. ತನ್ನ ಸ್ಪರ್ಧಿಗಳಿಗಿಂತ 35 ರಿಂದ 55 ತಿಂಗಳ ಅವಧಿಗೆ ಹೆಚ್ಚಿನ ಬಡ್ಡಿ ದರಗಳನ್ನು ನೀಡುವ ಸೀಮಿತ ಆವ್ರತ್ತಿಯ ಸ್ಥಿರ ಠೇವಣಿಯನ್ನು ಪರಿಚಯಿಸಿದೆ. ಹಾಗಾದರೆ ಸ್ಪೆಷಲ್ ಎಫ್‌ಡಿ ದರಗಳೇಷ್ಟು ಎಂದು ತಿಳಿದುಕೊಳ್ಳೋಣ ಬನ್ನಿ.

ವಿಶೇಷ ಎಫ್‌ಡಿ ದರಗಳು: ಎಚ್‌ಡಿ‌ಎಫ್‌ಸಿ ಬ್ಯಾಂಕ್ ರೂ. 3 ಕೋಟಿ ಒಳಗಿನ ಠೇವಣಿಗಳಿಗೆ 35 ತಿಂಗಳ ಸೀಮಿತ ಆವ್ರತ್ತಿಯ ಸ್ಥಿರ ಠೇವಣಿಯ ಮೇಲೆ 7.35% ಬಡ್ಡಿ ದರವನ್ನು ನೀಡಲಿದೆ ಮತ್ತು 55 ತಿಂಗಳ ಸೀಮಿತ ಆವ್ರತ್ತಿಯ ಸ್ಥಿರ ಠೇವಣಿಯ ಮೇಲೆ 7.4% ಬಡ್ಡಿ ದರವನ್ನು ನೀಡಲಿದೆ. ಇದರ ಜೊತೆಯಲ್ಲಿ ಹಿರಿಯ ನಾಗರಿಕರಿಗೆ ಈ ದರಗಳ ಮೇಲೆ ಹೆಚ್ಚುವರಿ 0.50% ಬಡ್ಡಿ ದರವನ್ನು ನೀಡಲು ನಿರ್ಧರಿಸಿದೆ.

ಗ್ರಾಹಕರು ಆನ್ಲೈನ್ ಬ್ಯಾಂಕಿಂಗ್ ಮೂಲಕ ಈ ಸ್ಪೆಷಲ್ ಎಫ್‌ಡಿ ಗಳಿಗೆ ನೋಂದಣಿ ಮಾಡಿ, ತಮ್ಮ ಅನುಕೂಲಕ್ಕೆ ತಕ್ಕಂತೆ ಮಾಸಿಕ, ತ್ರೈಮಾಸಿಕ ಅಥವಾ ವಾರ್ಷಿಕ ರೂಪದಲ್ಲಿ ಪ್ರಿಮಿಯಮ್ ಅನ್ನು ಪಾವತಿಸಬಹುದು.

ರೂ. 20,000 ಹೂಡಿಕೆ: 35 ತಿಂಗಳ ಅವಧಿಗೆ 7.35% ಬಡ್ಡಿದರದಲ್ಲಿ ರೂ. 20,000 ಹೂಡಿಕೆ ಮಾಡಿದರೆ, ನೀವು ರೂ. 4,446.54 ಬಡ್ಡಿಯನ್ನು ಪಡೆಯುವಿರಿ, ಹೂಡಿಕೆ ಅವಧಿಯ ಕೊನೆಯಲ್ಲಿ ಒಟ್ಟು ಮೊತ್ತ ರೂ. 24,446.54 ಆಗುತ್ತದೆ ಮತ್ತು 55 ತಿಂಗಳ ಅವಧಿಗೆ 7.4% ಬಡ್ಡಿದರದಲ್ಲಿ ರೂ. 20,000 ಹೂಡಿಕೆ ಮಾಡಿದರೆ, ನೀವು ರೂ. 6,832.61 ಬಡ್ಡಿ ಪಡೆಯುವಿರಿ, ಹೂಡಿಕೆ ಅವಧಿಯ ಕೊನೆಯಲ್ಲಿ ಒಟ್ಟು ಮೊತ್ತ ರೂ. 26,832.61 ಆಗುತ್ತದೆ.

ರೂ. 30,000 ಹೂಡಿಕೆ: 35 ತಿಂಗಳ ಅವಧಿಗೆ 7.35% ಬಡ್ಡಿದರದಲ್ಲಿ ರೂ. 30,000 ಹೂಡಿಕೆ ಮಾಡಿದರೆ, ನೀವು ರೂ. 6,669.81 ಬಡ್ಡಿ ಪಡೆಯುತ್ತೀರಿ, ಹೂಡಿಕೆ ಅವಧಿಯ ಕೊನೆಯಲ್ಲಿ ಒಟ್ಟು ಮೊತ್ತ ರೂ. 36,669.81 ಆಗುತ್ತದೆ ಮತ್ತು 55 ತಿಂಗಳ ಅವಧಿಗೆ 7.4% ಬಡ್ಡಿದರದಲ್ಲಿ ರೂ. 30,000 ಹೂಡಿಸಿದರೆ, ನೀವು ರೂ. 10,248.92 ಬಡ್ಡಿ ಪಡೆಯುತ್ತೀರಿ, ಹೂಡಿಕೆ ಅವಧಿಯ ಕೊನೆಯಲ್ಲಿ ಒಟ್ಟು ಮೊತ್ತ ರೂ. 40,248.92 ಆಗುತ್ತದೆ.

Leave a Comment