ಹೌದು, 20 ಫೆಬ್ರವರಿಯಿಂದ 7 ಮಾರ್ಚ್ ಹಾಗೂ 30 ಮಾರ್ಚ್ 2024 ರಂದು ನಡೆದ ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) GD ಕಾನ್ಸ್‌ಟೇಬಲ್ ಪರೀಕ್ಷೆಯ ಫಲಿತಾಂಶ (ssc gd result 2024) ಮತ್ತು ಕಟ್ ಆಫ್ (ssc gd cutoff) ಸಹ ಬಿಡುಗಡೆ ಮಾಡಲಾಗಿದ್ದು ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ssc.gov.in ನಲ್ಲಿ ಡೌನ್ಲೋಡ್ ಮಾಡಬಹುದಾಗಿದೆ
ಎಸ್‌ಎಸ್‌ಸಿ ಜಿಡಿ ಪರೀಕ್ಷೆಯನ್ನು ಸರಿ ಸುಮಾರು 47 ಲಕ್ಷ ವಿದ್ಯಾರ್ಥಿಗಳು ಬರೆದಿದ್ದು ಅದರಲ್ಲಿ 3,08,076 ಪುರುಷರು ಮತ್ತು 38,328 ಮಹಿಳಾ ಅಭ್ಯರ್ಥಿಯರು ಲಿಖಿತ ಪರೀಕ್ಷೆಯಲ್ಲಿ ಆಯ್ಕೆಗೊಂಡಿದ್ದಾರೆ. ಪುರುಷ ಮತ್ತು ಮಹಿಳೆಯರ ಮೇರಿಟ್ ಲಿಸ್ಟ್ ಪಟ್ಟಿಯನ್ನು ಕೆಳಗಿನ ಲೇಖದಲ್ಲಿ ನೀಡಲಾಗಿದ್ದು ಅದನ್ನು ತೆರೆದು ಪಟ್ಟಿಯಲ್ಲಿ ನಿಮ್ಮ ಹೆಸರು ಬಂದಿದೆಯಾ ಅಂತ ಪರಿಶೀಲಿಸಿ. ಎಸ್‌ಎಸ್‌ಸಿ ಜಿಡಿ 2024 ಲಿಖಿತ ಪರೀಕ್ಷೆಯಲ್ಲಿ ಆಯ್ಕೆಯಾದ ವಿಧ್ಯಾರ್ಥಿಗಳ ಪಟ್ಟಿ ಕೆಳಗೆ ನೀಡಲಾಗಿದೆ.
ಎಸ್‌ಎಸ್‌ಸಿ ಜಿಡಿ ಲಿಖಿತ ಪರೀಕ್ಷೆಯನ್ನು ಬರೆದ ಎಲ್ಲ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಸಂಸ್ಥೆಯ ಅಧಿಕ್ರತ ಪೋರ್ಟಲ್ ಗೆ ಭೇಟಿ ನೀಡಿ ಅಲ್ಲಿ ನಿಮ್ಮ ಯೂಸರ್ ನೇಮ್ ಮತ್ತು ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ. ನಂತರ ಫಲಿತಾಂಶ ಆಯ್ಕೆಯ ಅಥವಾ ಟ್ಯಾಬ್ ಮೇಲೆ ಒತ್ತಿದರೆ ನಿಮ್ಮ ಪರದೆಯ ಮೇಲೆ ನಿಮ್ಮ ಫಲಿತಾಂಶ ಪ್ರದರ್ಶನಗೊಳ್ಳುವುದು.
ಅಭ್ಯರ್ಥಿಗಳು ಈ ಹಂತಗಳನ್ನು ಅನುಸರಿಸಿ ಎಸ್‌ಎಸ್‌ಸಿ ಜಿಡಿ ಕಾನ್ಸ್‌ಟೇಬಲ್ ಫಲಿತಾಂಶವನ್ನು ತಕ್ಷಣವೇ ಪರಿಶೀಲಿಸಿ
- ಮೊದಲು ಅಧಿಕೃತ ವೆಬ್‌ಸೈಟ್ ssc.gov.in ಗೆ ಹೋಗಿ
- ಮುಖಪುಟದಲ್ಲಿ ಫಲಿತಾಂಶ ಬಟನ್ ಮೇಲೆ ಕ್ಲಿಕ್ ಮಾಡಿ
- ನಂತರ ಜಿಡಿ ಟ್ಯಾಬ್ ಮೇಲೆ ಒತ್ತಿರಿ
- ನಿಮಗೆ ಸಂಬಂಧಿತ ಎಸ್‌ಎಸ್‌ಸಿ ಜಿಡಿ ಫಲಿತಾಂಶದ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಫಲಿತಾಂಶವು ಪರದೆಯ ಮೇಲೆ ಪ್ರದರ್ಶನಗೊಳ್ಳುವುದು ಫಲಿತಾಂಶ PDF ಡೌನ್ಲೋಡ್ ಮಾಡಿ