ಎಸ್‌ಎಸ್‌ಸಿ ಐಟಿ ಎಕ್ಸಿಕ್ಯುಟಿವ್ ನೇಮಕಾತಿ 2024: ಭಾರತೀಯ ನೌಕಾದಳದಲ್ಲಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟ
ಸ್ನೇಹಿತರೇ ಭಾರತೀಯ ನೌಕಾ ದಳ 2024 ರ ಸಾಲಿನ ಎಸ್‌ಎಸ್‌ಸಿ ಐಟಿ ಎಕ್ಸಿಕ್ಯುಟಿವ್ ನೇಮಕಾತಿಗಾಗಿ 18 ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆಗಸ್ಟ್ 02, 2024 ರಿಂದ ಪ್ರಾರಂಭವಾಗಿ ಆಗಸ್ಟ್ 16, 2024 ರಂದು ಕೊನೆಗೊಳ್ಳಲಿದೆ.
ಆಯ್ಕೆಯಾದ ಅಭ್ಯರ್ಥಿಗಳನ್ನು ದೇಶಾದಾದ್ಯಂತ ಅವಶ್ಯಕ ಸ್ಥಳಗಳಲ್ಲಿ ನಿಯೋಜನ ಮಾಡಲಾಗುವುದು. ಆಸಕ್ತರು ತಮ್ಮ ಅರ್ಹತೆಯನ್ನು ಪರಿಶೀಲಿಸಿ, ಅಧಿಕ್ರತ ನೋಟಿಫಿಕೇಶನ್ ಅಲ್ಲಿ ಸೂಚಿಸಿರುವಂತೆ ನಿಗದಿತ ದಿನಾಂಕದೊಳಗಾಗಿ ತಮ್ಮ ಅರ್ಜಿಯನ್ನು ಸಲ್ಲಿಸಬೇಕು.
ವಿದ್ಯಾರ್ಹತೆ: ಎಸ್‌ಎಸ್‌ಸಿ ಐಟಿ ಎಕ್ಸಿಕ್ಯುಟಿವ್ ನೇಮಕಾತಿಗಾಗಿ ಶೈಕ್ಷಣಿಕ ಅರ್ಹತೆಯೂ ಹತ್ತನೇ ಅಥವಾ ಹನ್ನೆರಡನೆಯ ತರಗತಿಯಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
ಇದರ ಜೊತೆಗೆ ಅಭ್ಯರ್ಥಿಗಳು ಕಂಪ್ಯೂಟರ್ ಸೈನ್ಸ್ ಅಂಡ್ ಎಂಜಿನಿಯರಿಂಗ್, ಇನ್ಫರ್ಮೇಷನ್ ಟೆಕ್ನಾಲಜಿ, ಸಾಫ್ಟ್‌ವೇರ್ ಸಿಸ್ಟಮ್ಸ್, ಸೈಬರ್ ಸೆಕ್ಯುರಿಟಿ, ಸಿಸ್ಟಮ್ ಅಡ್ಮಿನಿಸ್ಟ್ರೇಷನ್ ಮತ್ತು ನೆಟ್ವರ್ಕಿಂಗ್, ಕಂಪ್ಯೂಟರ್ ಸಿಸ್ಟಮ್ಸ್ ಮತ್ತು ನೆಟ್ವರ್ಕಿಂಗ್, ಡೇಟಾ ಅನಾಲಿಟಿಕ್ಸ್, ಅಥವಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ವಿಷಯಗಳಲ್ಲಿ M.Sc., B.E., B.Tech., ಅಥವಾ M.Tech ಡಿಗ್ರಿಗಳನ್ನು ಹೊಂದಿರಬೇಕು. ಜೊತೆಗೆ, BCA ಅಥವಾ B.Sc. (ಕಂಪ್ಯೂಟರ್ ಸೈನ್ಸ್/ಇನ್‌ಫರ್ಮೇಶನ್ ಟೆಕ್ನಾಲಜಿ) ಸಹಿತ MCA ಡಿಗ್ರಿಗಳನ್ನು ಹೊಂದಿರುವವರು ಅರ್ಹರಾಗುತ್ತಾರೆ.
ವಯೋಮಿತಿ: ಅಭ್ಯರ್ಥಿಗಳು ಜನವರಿ 02, 2000 ರಿಂದ ಜುಲೈ 01, 2005 ರ ನಡುವಿನ ದಿನಾಂಕದೊಳಗಾಗಿ ಜನಿಸಿರಬೇಕು.
ಎಸ್‌ಎಸ್‌ಸಿ ಐಟಿ ಎಕ್ಸಿಕ್ಯುಟಿವ್ ನೇಮಕಾತಿಯ ಅರ್ಜಿ ಪ್ರಕ್ರಿಯೆಯು ಆಗಸ್ಟ್ 02, 2024 ರಿಂದ ಆಗಸ್ಟ್ 16, 2024 ರವರೆಗೆ ನಡೆಯಲಿದ್ದು, ಈ ನೇಮಕಾತಿಗೆ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ನೀಡುವಂತಿರುವುದಿಲ್ಲ.
ಆಯ್ಕೆ ಪ್ರಕ್ರಿಯೆ: ಎಸ್‌ಎಸ್‌ಸಿ ಐಟಿ ಎಕ್ಸಿಕ್ಯುಟಿವ್ ನೇಮಕಾತಿಯ ಆಯ್ಕೆ ಪ್ರಕ್ರಿಯೆಯು ವಿವಿಧ ಹಂತಗಳ್ಳಿ ನಡೆಯಲಿದ್ದು, ಮೊದಲ ಹಂತದಲ್ಲಿ, ಅಭ್ಯರ್ಥಿಗಳ ಶೈಕ್ಷಣಿಕ ಮಾನದಂಡಗಳನ್ನು ಪರಿಶೀಲಿಸಿ ಶಾರ್ಟ್ ಲಿಸ್ಟ್ ಮಾಡಲಾಗುವುದು. ನಂತರ ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳನ್ನು ಎಸ್‌ಎಸ್‌ಬಿ ಸಂದರ್ಶನಕ್ಕೆ ಕರೆದೊಯ್ಯಲಾಗುವುದು. ಇದರಲ್ಲಿ ಅಭ್ಯರ್ಥಿಗಳ ಯೋಗ್ಯತೆಯನ್ನು ಮೌಲ್ಯಮಾಪನ ಮಾಡಲಾಗುವುದು. ಸಂದರ್ಶನದಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ.
ಅರ್ಜಿ ಸಲ್ಲಿಕೆ ವಿಧಾನ: ಎಸ್‌ಎಸ್‌ಸಿ ಐಟಿ ಎಕ್ಸಿಕ್ಯುಟಿವ್ ನೇಮಕಾತಿ 2024 ಕ್ಕೆ ಆನ್ಲೈನ್ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮೊದಲು ಭಾರತೀಯ ನೌಕಾ ದಳದ ಅಧಿಕ್ರತ ಪೋರ್ಟಲ್ ಗೆ ಭೇಟಿ ನೀಡಬೇಕು. ನಂತರ ಮುಖಪುಟದಲ್ಲಿ ಕಾಣುವ “Navy SSC Executive IT officer Recruitment” ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಈವಾಗ ಅಭ್ಯರ್ಥಿಗಳು ಅಗತ್ಯವಾದ ವಿವರಗಳನ್ನು ನೀಡಿ ಈ- ಮೇಲ್ ವಿಳಾಸವನ್ನು ಪರಿಶೀಲಸಿ ಖಾತೆಯನ್ನು ರಿಜಿಸ್ಟರ್ ಮಾಡಬೇಕು. ನಂತರ್ ಆನ್ಲೈನ್ ಅರ್ಜಿ ನಮೂನೆಯನ್ನು ಯಾವುದೇ ತಪ್ಪು ಮಾಡದೆ ಸಂಪೂರ್ಣವಾಗಿ ಭರ್ತಿ ಮಾಡಬೇಕು. ಭಾವಚಿತ್ರ ಮತ್ತು ಸಹಿ ಇನ್ನಿತರ ಅಗ್ತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
ಈ ಮೇಲೆ ತಿಳಿಸಿದ ಹಂತಗಳನ್ನು ಅಭ್ಯರ್ಥಿಗಳು ಅನುಸರಿಸುವುದರಿಂದ 2024 ನೇ ಸಾಲಿನ ಭಾರತೀಯ ನೌಕಾದಳ ಎಸ್‌ಎಸ್‌ಸಿ ಐಟಿ ಎಕ್ಸಿಕ್ಯುಟಿವ್ ನೇಮಕಾತಿಗೆ ಯಶಸ್ವಿಯಾಗಿ ಅರ್ಜಿ ಸಲ್ಲಿಸಬಹುದು.
ಪ್ರಮುಖ ಲಿಂಕ್
- ಆನ್ಲೈನ್ ಅರ್ಜಿ ಸಲ್ಲಿಕೆ: ಇಲ್ಲಿ ಒತ್ತಿ
- ಅಫೀಷಿಯಲ್ ನೋಟಿಫಿಕೇಶನ್: ಇಲ್ಲಿ ಒತ್ತಿ