ಗ್ಯಾರಂಟಿ ಯೋಜನೆಗಳಿಂದ ಹೆಚ್ಚಾಯ್ತು ಒತ್ತಡ! 50% ಕಡತಕ್ಕೆ ಸರ್ಕಾರದ ಸಿದ್ದತೆ
ಸ್ನೇಹಿತರೇ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಗೆ 50% ಕಡತ ಬೀಳಲಿದೆ ಅನ್ನುವ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದು ಈ ಕುರಿತು ಇನ್ನಷ್ಟು ಮಾಹಿತಿಯನ್ನು ತಿಳಿಯೋನ ಬನ್ನಿ.
ಹೌದು, ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದ್ಯಕ್ಷತೆಯಲ್ಲಿ ನಡೆದ ಜಿಲ್ಲಾಧಿಕಾರಿಗಳ ಮತ್ತು ಜಿಲ್ಲಾ ಪಂಚಾಯತ್ ಸಿಈಓ ಗಳ ಸಭೆಯ ಮುಖ್ಯಾಂಶಗಳನ್ನು ಗಮನಿಸಿದರೆ, ರಾಜ್ಯದ ಒಟ್ಟು ಜನ ಸಂಖ್ಯೆಯಲ್ಲಿ 80% ಜನ ಬಿಪಿಎಲ್ ಕಾರ್ಡ್ ಫಲಾನುಭವಿಗಳು ಅಂತ ತಿಳಿದು ಬಂದಿದೆ ಅಂದರೆ ರಾಜ್ಯದಲ್ಲಿ ಸರಿ ಸುಮಾರು 4.67 ಕೋಟಿ ಜನರು ಬಿಪಿಎಲ್ ಕಾರ್ಡ್ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ. ನೀತಿ ಆಯೋಗದ ನಿಯಮಗಳ ಪ್ರಕಾರ ರಾಜ್ಯದಲ್ಲಿ ಕೇವಲ 5.67% ಜನರು ಮಾತ್ರ ಬಿಪಿಎಲ್ ಹೊಂದಿರಬೇಕು.
ಇನ್ನೂ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯ ಮೇಲೆ ಸರ್ಕಾರ ಒಟ್ಟು ವಾರ್ಷಿಕ ರೂ 8000 ಕೋಟಿ ಖರ್ಚು ಮಾಡಬೇಕಾಗುತ್ತದೆ. ಮತ್ತು ಒಟ್ಟು 5 ಗ್ಯಾರಂಟಿ ಯೋಜನೆಗಳನ್ನು ಸೇರಿಸಿದರೆ ರಾಜ್ಯ ಸರ್ಕಾರ ಸುಮಾರು ವಾರ್ಷಿಕ ರೂ 28,000 ಕೋಟಿ ಯನ್ನು ಖರ್ಚು ಮಾಡಬೇಕಾಗುತ್ತದೆ. ಇದು ರಾಜ್ಯದ ಆರ್ಥಿಕ ಪ್ರಗತಿಗೆ ಮತ್ತು ಅಭಿವ್ರದ್ದಿ ಕಾಮಗಾರಿಗಳಿಗೆ ಅಡ್ಡಿಯಾಗುವುದಂತೂ ಖಚಿತ.
ಇನ್ನೂ 2.9 ಲಕ್ಷಕ್ಕೂ ಅಧಿಕ ಹೊಸ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿಗಳು ಪೆಂಡಿಂಗ್ ಇರುವುದರಿಂದ ಇದು ಹೀಗೆ ಮುಂದುವರೆದರೆ ಸರ್ಕಾರವು ಆರ್ಥಿಕವಾಗಿ ಸಾಕಷ್ಟು ನಷ್ಟ ಭರಿಸಬೇಕಾಗುತ್ತೆ, ಅಂತ ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಏಕೆಂದರೆ ಬಿಪಿಎಲ್ ಕಾರ್ಡ್ ಬಳಕೆದಾರರ ಸಂಖ್ಯೆ ಜಾಸ್ತಿ ಆಗುತ್ತಿದ್ದಂತೆ, ಸರ್ಕಾರದ ಗ್ಯಾರಂಟಿ ಯೋಜನೆಗಳ ಮಾಡುವ ಖರ್ಚು ವೆಚ್ಚಗಳ ಪ್ರಮಾಣವು ಅಷ್ಟೇ ಹೆಚ್ಚಾಗಿ, ಸರ್ಕಾರ ಆರ್ಥಿಕ ಒತ್ತಡ ಅನುಭವಿಸಿ ಇಕ್ಕಟ್ಟಿಗೆ ಸಿಲುಕಲಿದೆ.
ಇನ್ನು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ನಿನ್ನೆ ನಡೆದ ಡಾ. ಕೆ. ಸುಧಾಕರ್ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ 50% ಕಡತಕ್ಕೆ ಸಿದ್ದತೆಗಳನ್ನು ನಡೆಸುತ್ತಿದೆ ಅಂತ ಆರೋಪ ಮಾಡಿದರು.
ಅದಲ್ಲದೆ ಗ್ಯಾರಂಟಿ ಯೋಜನೆಗಳಿಗೆ ಹಣ ಸಂಗ್ರಹ ಮಾಡಲು ವಸ್ತುಗಳ ಬೆಲೆ ಏರಿಕೆಯಂತಹ ಜನ ವಿರೋಧಿ ಕ್ರಮಗಳನ್ನು ಅನುಸರಿಸುತ್ತಿದೆ. ಈಗಾಗಲೇ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್, ಮದ್ಯ ಮತ್ತು ಹಾಲಿನ ದರವನ್ನು ಏರಿಸಿ ಗ್ಯಾರಂಟಿ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿದೆ. ಇದರಿಂದ ಜನ ಸಾಮಾನ್ಯರು ಜೀವನ ನಡೆಸುವುದು ಕಷ್ಟವಾಗಿದೆ ಅಂತ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ಮಾಡಿದರು.