ಕೆಎಚ್ ಮುನಿಯಪ್ಪ: ರೇಷನ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಸಿಹಿಸುದ್ದಿ! 1.73 ಲಕ್ಷ ಹೊಸ ಬಿಪಿಎಲ್ ಕಾರ್ಡ್ ವಿಲೇವಾರಿ ಶೀಘ್ರದಲ್ಲೇ ನಡೆಯಲಿದೆ
ಸ್ನೇಹಿತರೇ ಹೊಸ ಬಿಪಿಎಲ್ ರೇಷನ್ ಕಾರ್ಡ್ ನಿರೀಕ್ಷೆಯಲ್ಲಿದ ಎಲ್ಲರಿಗೂ ಆಹಾರ ಸಚಿವ ಕೆಎಚ್ ಮುನಿಯಪ್ಪ ಅವರು ಸಿಹಿಸುದ್ದಿ ನೀಡಿದ್ದಾರೆ. ಹಾಗಾದರೆ ಸಚಿವ ಕೆಎಚ್ ಮುನಿಯಪ್ಪ ಅವರು ವಿಧಾನ ಸಭೆಯಲ್ಲಿ ನೀಡಿದ ಹೇಳಿಕೆ ಏನು? ಅಂತ ತಿಳಿಯೋನ ಬನ್ನಿ.
ಹೌದು ರಾಜ್ಯದಲ್ಲಿ 80% ರಷ್ಟು ಜನ ಬಿಪಿಎಲ್ ರೇಷನ್ ಕಾರ್ಡ್ ಬಳಕೆದಾರರಾಗಿದ್ದು ಇದರಲ್ಲಿ ಸಾಕಷ್ಟು ಜನ ಕಾನೂನು ವಿರೋಧವಾಗಿ ಅನರ್ಹರಾಗಿದ್ದರು ನಕಲಿ ದಾಖಲೆಗಳೊಂದಿಗೆ ಬಿಪಿಎಲ್ ರೇಷನ್ ಕಾರ್ಡ್ ಸೌಲಭ್ಯವನ್ನು ಪಡೆತ್ತಿರುವ ಮಾಹಿತಿಯನ್ನು ಪಡೆದಿದ್ದರು.
ಈ ವರದಿಯನ್ನು ಗಮನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲ ದಿನಗಳ ಹಿಂದೆ ನಡೆದ ಜಿಲ್ಲಾಧಿಕಾರಿಗಳ ಮತ್ತು ಜಿಲ್ಲಾ ಪಂಚಾಯತ್ ಸಿಈಓ ಗಳ ಸಭೆಯಲ್ಲಿ ಕಳವಳ ವ್ಯಕ್ತಪಡಿಸಿ, ಹೊಸ ರೇಷನ್ ಕಾರ್ಡ್ ಅರ್ಜಿದಾರರ ದಾಖಲೆಗಳ ನೈಜತೆ ಪರಿಶೀಲಿಸಿ ಹೊಸ ಬಿಪಿಎಲ್ ರೇಷನ್ ಕಾರ್ಡ್ ವಿಲೇವಾರಿ ಮಾಡಬೇಕು ಅಂತ ಅಧಿಕಾರಿಗಳಿಗೆ ಆದೇಶ ನೀಡಿದ್ದರು.
1.73 ಲಕ್ಷ ಹೊಸ ಬಿಪಿಎಲ್ ಕಾರ್ಡ್ ವಿಲೇವಾರಿ ಶೀಘ್ರದಲ್ಲೇ!
ಹೌದು ಸೋಮವಾರ ವಿಧಾನ ಪರಿಷತ್ ನಲ್ಲಿ ಬಿಜೆಪಿ ಶಾಸಕ ಪ್ರತಾಪ್ ಸಿಂಹ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಆಹಾರ ಸಚಿವ ಕೆಎಚ್ ಮುನಿಯಪ್ಪ ಪ್ರಸ್ತುತ 2.95 ಲಕ್ಷ ಹೊಸ ರೇಷನ್ ಕಾರ್ಡ್ ಬಂದಿದ್ದು, ಅದರಲ್ಲಿ ಒಟ್ಟು 2.36 ಲಕ್ಷ ಅರ್ಜಿಗಳು ಮಾತ್ರ ನೈಜವಾಗಿದ್ದು ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಹರಾಗಿದ್ದಾರೆ.
ಇದರಲ್ಲಿ 1.73 ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿಗಳು ಸಲ್ಲಿಕೆಯಾಗಿದ್ದು, ಅರ್ಜಿದಾರರಿಗೆ ಶೀಘ್ರದಲ್ಲೇ ಬಿಪಿಎಲ್ ಕಾರ್ಡ್ ವಿಲೇವಾರಿ ಮಾಡಲಾಗುವುದು ಎಂದು ಸಚಿವ ಕೆಎಚ್ ಮುನಿಯಪ್ಪ ಅವರು ವಿಧಾನ ಪರಿಷತ್ ನಲ್ಲಿ ಮಾಹಿತಿ ಪ್ರಸ್ತುತ ಪಡಿಸಿದರು.
ಇದರ ಜೊತೆಗೆ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ, ಅರ್ಜಿ ಹಾಕಿದ ಒಂದು ವಾರದೊಳಗಾಗಿ ಬಿಪಿಎಲ್ ಕಾರ್ಡ್ ಆರೋಗ್ಯ ಸೇವೆಯನ್ನು ಲಭಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.