ಹೊಸ ರೇಷನ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಈ ನಿಯಮ ಜಾರಿ. ಮನೆ ಬಾಗಿಲಿಗೆ ಬರಲಿದ್ದಾರೆ ಅಧಿಕಾರಿಗಳು. ಈ ದಾಖಲೆಗಳು ಕಡ್ಡಾಯ
ಸ್ನೇಹಿತರೇ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 5 ಕೆಜೆ ಉಚಿತ ಅಕ್ಕಿಯ ಹಣವನ್ನು ಫಲಾನುಭವಿಗಳ ಖಾತೆಗೆ ಯಾವುದೇ ಲೋಪದೋಷಗಲ್ಲಿದೆ ಸಂದಾಯವಾಗುವಂತೆ ಕ್ರಮಕೈಗೊಳ್ಳಬೇಕು ಅಂತ ಆಹಾರ ಮತ್ತು ನಾಗರಿಕ ಇಲಾಖೆ ಸಚಿವ ಕೆ ಎಚ್ ಮುನಿಯಪ್ಪ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಆಹಾರ ಇಲಾಖೆ ನಿಗಮದ ಸಭೆಯೊಂದರಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಇಲಾಖೆಯಲ್ಲಿನ ಲೋಪದೋಷಗಳನ್ನು ಪರಿಶೀಲಿಸಿ ಅದರ ಕ್ರಮ ತೆಗೆಕೊಳ್ಳುಬೇಕು ಮತ್ತು ಅಧಿಕಾರಿಗಳು ಅರ್ಜಿದಾರರ ಮನೆ ಬಾಗಿಲಿಗೆ ತೆರಳಿ ದಾಖಲೆಗಳ ಪರಿಶೀಲನೆ ನಡೆಸಿ ಸರಿಯಾದ ರೀತಿಯಲ್ಲಿ ಹೊಸ ಬಿಪಿಎಲ್ ಪಡಿತರ ಚೀಟಿಯ ವಿಲೇವಾರಿಯಾಗಬೇಕು ಅಂತ ತಿಳಿಸಿದ್ದಾರೆ.
ಸ್ನೇಹಿತರೇ ಆಹಾರ ಮತ್ತು ನಾಗರಿಕ ಇಲಾಖೆ ಸಚಿವ ಕೆ ಎಚ್ ಮುನಿಯಪ್ಪ ಈ ಖಡಕ್ ಸೂಚನೆಯಿಂದ ಅಧಿಕಾರಿ ವರ್ಗ ಅಲರ್ಟ್ ಆಗಿದ್ದು, ಇನ್ನುಮುಂದೆ ಅಧಿಕಾರಿಗಳು ದಾಖಲೆಗಳು ನೈಜವಾಗಿಲ್ಲದಿದ್ದರೆ ಅಥವಾ ದಾಖಲೆಗಳ ಪರಿಶೀಲನೆ ಸಂದರ್ಭಯಲ್ಲಿ ಏನಾದರೂ ತಪ್ಪು ಕಂಡು ಬಂದರೆ ಅಧಿಕಾರಿಗಳು ಖುದ್ದು ಅರ್ಜಿದಾರರ ಮನೆ ಬಾಗಿಲಿಗೆ ದಾಖಲೆಗಳ ನೈಜತೆಯನ್ನು ಪರೀಕ್ಷಿಸಲಿದ್ದಾರೆ.
ಈ ಹಿಂದೆಒಟ್ಟು ಸಲ್ಲಿಕೆಯದ್ದ 39 ಲಕ್ಷ ಅರ್ಜಿಗಳಲ್ಲಿ ಬರೋಬ್ಬರಿ 36 ಲಕ್ಷಕ್ಕೂ ಹೆಚ್ಚು ಅರ್ಜಿದಾರರಿಗೆ ಹೊಸ ಬಿಪಿಎಲ್ ರೇಷನ್ ಕಾರ್ಡ್ ವಿಲೇವಾರಿ ಮಾಡಲಾಗಿದ್ದು ಇನ್ನೂ ಸುಮಾರು 3 ಲಕ್ಷದಷ್ಟೂ ಅರ್ಜಿಗಳ ವಿಲೇವಾರಿ ಬಾಕಿ ಉಳಿದಿರುತ್ತದೆ.
ಆಹಾರ ಇಲಾಖೆ ಅಧಿಕಾರಿಗಳು ಇದೀಗ ಚುರುಕಾಗಿದ್ದು, ಅತೀ ಶೀಘ್ರದಲ್ಲಿ ಈ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಅಧಿಕಾರಿಗಳು ವರದಿಯನ್ನು ಪರಿಶೀಲಿಸಿ ಹೊಸ ಬಿಪಿಎಲ್ ರೇಷನ್ ಕಾರ್ಡ್ ಪಡೆಯುವುದಕ್ಕೆ ಅರ್ಹರು ಮತ್ತು ಅನರ್ಹರು ಯಾರೆಂಬುದನ್ನು ಗುರುತಿಸಿ ಅರ್ಹರಿಗೆ ಮಾತ್ರ ಈ ಅನ್ನಭಾಗ್ಯ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಅವಕಾಶ ಮಾಡಿಕೊಡಲಿದ್ದಾರೆ.
ಹಾಗಾದರೆ ಬಿಪಿಎಲ್ ರೇಷನ್ ಕಾರ್ಡ್ ಪಡೆಯುವುದಕ್ಕೆ ಬೇಕಾಗುವ ದಾಖಲೆಗಳಾದರೂ ಏನು?
- ಅರ್ಜಿದಾರರ LPG ಸಂಪರ್ಕದ ವಿವರಗಳು
- ವಾರ್ಷಿಕ ಆದಾಯದ ದಾಖಲೆಗಳು
- ಅರ್ಜಿದಾರರ ಫೋಟೋ
- ಗುರುತಿನ ಪುರಾವೆ
- ಇತ್ತೀಚಿನ ವಿದ್ಯುತ್ ಬಿಲ್
- ಕುಟುಂಬದ ಸದಸ್ಯರ ಹೆಸರು
- ಕುಟುಂಬ ಸದಸ್ಯರೊಂದಿಗೆ ಅರ್ಜಿದಾರರ ಸಂಬಂಧ
- ಪಿನ್ ಕೋಡ್ ಜೊತೆಗೆ ಅರ್ಜಿದಾರರ ವಸತಿ ವಿಳಾಸ
- ಅರ್ಜಿದಾರರು ಅವಿವಾಹಿತರಾಗಿದ್ದರೆ ಪೋಷಕರ ವಿಳಾಸ
- ಆಧಾರ್ ಕಾರ್ಡ್
- ಮೊಬೈಲ್ ಸಂಖ್ಯೆ