ಎಫ್‌ಡಿ ಗಿಂತ ಹೆಚ್ಚು ಆದಾಯ ಗಳಿಸಿ ಕೊಡಲಿದೆ ಈ ಪೋಸ್ಟ್ ಆಫೀಸ್ ಸ್ಕೀಮ್! ತಿಂಗಳಿಗೆ ರೂ 20 ಸಾವಿರವನ್ನು ಪಡೆಯುವ ಲೆಕ್ಕಾಚಾರ ಇಲ್ಲಿದೆ ನೋಡಿ
ಸ್ನೇಹಿತರೇ ಈ ಲೇಖನದಲ್ಲಿ ಬ್ಯಾಂಕ್ ಗಳಿಗಿಂತ ಹೆಚ್ಚಿನ ಆದಾಯವನ್ನು ಗಳಿಸಿಕೊಡುವ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಹೌದು ಆ ಯೋಜನೆ ಯಾವುದೆಂದರೆ ಸೀನಿಯರ್ ಸಿಟಿಜೇನ್ ಸೇವಿಂಗ್ ಸ್ಕೀಮ್ ಯಾಗಿದೆ. ಈ ಯೋಜನೆಯನ್ನು ವಿಶೇಷವಾಗಿ ಹಿರಿಯ ನಾಗರಿಕರಿಗಂತಲೆ ರೂಪಿಸಲಾಗಿದ್ದು, 8% ಕ್ಕೂ ಅಧಿಕ ಬಡ್ಡಿದರವನ್ನು ಒದಗಿಸುತ್ತಿದೆ. ಇನ್ನೂ ಹೂಡಿಕೆದಾರರ ಹಣಕ್ಕೆ ಸರ್ಕಾರವೇ ಭದ್ರತೆ ನೀಡುತ್ತದೆ. ಹಾಗಾದರೆ ಆಕರ್ಷಕ ಬಡ್ಡಿದರವನ್ನು ನೀಡುತ್ತಿರುವ ಈ ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜೇನ್ ಸೇವಿಂಗ್ ಸ್ಕೀಮ್ ನ ಹೆಚ್ಚುವರಿ ಪ್ರಯೋಜನಗಳನ್ನು ತಿಳಿದುಕೊಳ್ಳೋಣ ಬನ್ನಿ.
ಸ್ನೇಹಿತರೇ, ಜನವರಿ 01, 2024 ರಿಂದ ಈ ಸೀನಿಯರ್ ಸಿಟಿಜೇನ್ ಸೇವಿಂಗ್ ಸ್ಕೀಮ್ ಸರಾಸರಿ 8.2% ವಾರ್ಷಿಕ ಬಡ್ಡಿದರವನ್ನು ನೀಡುತ್ತಿದ್ದು, ಈ ಬಡ್ಡಿದರವು ಬಹುತೇಕ ಎಲ್ಲ ಬ್ಯಾಂಕುಗಳ ಸ್ಥಿರ ಠೇವಣಿಗಳ (FD) ಬಡ್ಡಿದರಕ್ಕಿಂತ ಹೆಚ್ಚು ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಸೀನಿಯರ್ ಸಿಟಿಜೇನ್ ಸೇವಿಂಗ್ ಸ್ಕೀಮ್ ಅಲ್ಲಿ ಆಸಕ್ತರು ಕೇವಲ ರೂ. 1,000 ರಿಂದ ಹೂಡಿಕೆಯನ್ನು ಪ್ರಾರಂಭಿಸಬಹುದಾಗಿದ್ದು, ಗರಿಷ್ಠ ಹೂಡಿಕೆಯ ಮಿತಿಯು ರೂ. 30 ಲಕ್ಷ ಆಗಿರುತ್ತದೆ. ಹಿರಿಯ ನಾಗರಿಕರು ತಮ್ಮ ಹೂಡಿಕೆಯ ಸಾಮರ್ಥ್ಯಕ್ಕೆ ತಕ್ಕಂತೆ ಹೂಡಿಕೆಯನ್ನು ಮಾಡಬಹುದು.
ಸೀನಿಯರ್ ಸಿಟಿಜೇನ್ ಸೇವಿಂಗ್ ಸ್ಕೀಮ್ 5 ವರ್ಷಗಳ ಮ್ಯುಚ್ಯುರಿಟಿ ಅವಧಿಯನ್ನು ಹೊಂದಿದ್ದು, ಈ ಆವಡಿಗೆ ಮುನ್ನ ಖಾತೆಯನ್ನು ಮುಚ್ಚಿದರೆ, ಯೋಜನೆಯ ನಿಯಮಗಳ ಪ್ರಕಾರ ದಂಡವನ್ನು ವಿಧಿಸಲಾಗುತ್ತದೆ. ಆದಾಗ್ಯೂ ನಿರ್ದಿಷ್ಟ ಸಂದರ್ಭಗಳಲ್ಲಿ ವಯಸ್ಸಿನ ವಿನಾಯಿತಿಯನ್ನು ನೀಡುತ್ತದೆ
ಗಳಿಕೆ ಲೆಕ್ಕಾಚಾರ: ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್‌ನಲ್ಲಿ ನೀವು ಹೂಡಿಕೆ ಮಾಡುವ ಮೊತ್ತದ ಆಧಾರದ ಮೇಲೆ ಎಷ್ಟು ಆದಾಯವನ್ನು ಪಡೆಯಬಹುದೆಂದು ನೋಡಿ: ₹10 ಲಕ್ಷ ಹೂಡಿದರೆ, ವಾರ್ಷಿಕ ಇನ್ಟ್ರಸ್ಟ್ ₹82,000 ಆಗಿರುತ್ತದೆ ಮತ್ತು ಇದು ಮಾಸಿಕವಾಗಿ ₹6,833 ಆದಾಯವನ್ನು ನೀಡುತ್ತದೆ. ₹20 ಲಕ್ಷ ಹೂಡಿದರೆ, ವಾರ್ಷಿಕ ಇನ್ಟ್ರಸ್ಟ್ ₹1,64,000 ಆಗುತ್ತದೆ ಮತ್ತು ಇದು ಮಾಸಿಕವಾಗಿ ₹13,666 ಆದಾಯವನ್ನು ಒದಗಿಸುತ್ತದೆ. ₹30 ಲಕ್ಷ ಹೂಡಿದರೆ, ವಾರ್ಷಿಕ ಇನ್ಟ್ರಸ್ಟ್ ₹2,46,000 ಆಗುತ್ತದೆ ಮತ್ತು ಮಾಸಿಕವಾಗಿ ₹20,500 ಆದಾಯವನ್ನು ನೀಡುತ್ತದೆ.
ಸ್ನೇಹಿತರೇ ಅನೇಕ ಬ್ಯಾಂಕುಗಳು ಎಫ್‌ಡಿ ಮೇಲೆ ನೀಡುವ ನಿಗದಿತ ಅವಧಿಯ ಬಡ್ಡಿದರಕ್ಕೆ ಹೊಲಿಸಿದರೆ ಈ ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ ಆಕರ್ಷಕ 8.2% ನೀಡುತ್ತಿದೆ, ಆದರೆ ಎಸ್‌ಬಿಐ 7.50%, ಎಚ್‌ಡಿಎಫ್‌ಸಿ 7.50% ಪಿಎನ್‌ಬಿ 7% ಬಡ್ಡಿದರವನ್ನು ನೀಡುತ್ತಿವೆ.
ಎಸ್‌ಸಿಎಸ್‌ಎಸ್ ಯೋಜನೆಯಲ್ಲಿ ಹೂಡಿಕೆ ಮಾಡುವವರಿಗೆ ಆದಾಯ ತೆರಿಗೆ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಯ ಸೌಲಭ್ಯವನ್ನು ಒದಗಿಸಲಾಗಿದ್ದು ಹೂಡಿಕೆದಾರರು ವರ್ಷಕ್ಕೆ 1.5 ಲಕ್ಷದವರೆಗೆ ತೆರಿಗೆ ವಿನಾಯಿತಿಯನ್ನು ಪಡೆಯಬಹುದು.
ಖಾತೆದಾರರು ತಮ್ಮ ಖಾತೆಯನ್ನು ಯಾವುದೇ ಸಂದರ್ಭದಲ್ಲಿ ಮುಚ್ಚಿಸಬಹುದು ಆದರೆ ಈ ಸಂಬಂದಿತ ಕೆಲವು ನಿಯಮಗಳು ಅನ್ವಯವಾಗುತ್ತವೆ. ಖಾತೆ ಒಂದು ವರ್ಷದೊಳಗಾಗಿ ಮುಚ್ಚಿದರೆ, ಆಸಕ್ತಿಯ ಮೊತ್ತವನ್ನು ಪ್ರಿನ್ಸಿಪಲ್ ಮೊತ್ತದಿಂದ ಕಡಿತ ಮಾಡಲಾಗುತ್ತದೆ. ಒಂದು ವರ್ಷದಿಂದ ಎರಡು ವರ್ಷಗಳೊಳಗಿನ ಅವಧಿಯಲ್ಲಿ ಖಾತೆ ಮುಚ್ಚಿದರೆ, ಪ್ರಿನ್ಸಿಪಲ್ ಮೊತ್ತದ 1.5% ಅನ್ನು ದಂಡವಾಗಿ ಕಡಿತ ಮಾಡಲಾಗುತ್ತದೆ. ಎರಡು ವರ್ಷಗಳ ನಂತರ ಖಾತೆ ಮುಚ್ಚಿದರೆ, ಪ್ರಿನ್ಸಿಪಲ್ ಮೊತ್ತದ 1% ದಂಡವಾಗಿ ಕಡಿತ ಮಾಡಲಾಗುತ್ತದೆ.
ಖಾತೆದಾರನು ಮ್ಯುಚ್ಯುರಿಟಿ ಅವಧಿಗೂ ಮುನ್ನ ಸಾವನ್ನೊಪ್ಪಿದರೆ ಖಾತೆಯನ್ನು ಮುಚ್ಚಿ ಸಂಪೂರ್ಣ ಹಣವನ್ನು ನಾಮನಿರ್ದೇಶಿತರಿಗೆ (ನಾಮಿನಿ) ಹಸ್ತಾಂತರಿಸಲಾಗುತ್ತದೆ.