ಸ್ನೇಹಿತರೇ ನೀವೇನಾದರೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ(Banking job) ಉದ್ಯೋಗಾವಕಾಶ ಹುಡುಕುತ್ತಿದ್ದರೆ, ನಿಮ್ಮ ಕನಸಿನ ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ಇಲ್ಲಿದೆ, ಹೌದು ದೇಶದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾದ ಯೂಸಿಓ ಬ್ಯಾಂಕ್ ನಲ್ಲಿ ಖಾಲಿ ಇರುವ 01 ಹುದ್ದೆಗೆ ಯೂಸಿಓ ಬ್ಯಾಂಕ್ ನೇಮಕಾತಿ 2024(UCO Bank Recruitment 2024) ಅಧಿಕ್ರತ ಅಧಿಸೂಚನೆಯನ್ನು(Official Notification) ಹೊರಡಿಸಿದೆ. ಹುದ್ದೆಗೆ ಸಂಬಂದಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಹೌದು, ಉದ್ಯೋಕಾಂಕ್ಷಿಗಳಿಗೆ ಇದು ಸುವರ್ಣಾವಕಾಶ ಅಂತಾನೆ ಹೇಳಬಹುದು. ಹೀಗಾಗಿ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಕೆಗೆ ಬೇಕಾಗುವ ವಿಧ್ಯಾರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಯ ವೇತನ ಮತ್ತು ಆಯ್ಕೆ ವಿಧಾನ ಇನ್ನಿತರ ಪ್ರಮುಖ ಅಂಶಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಅರ್ಜಿ ಸಲ್ಲಿಕೆ ಮಾಡುವುದು ಉತ್ತಮ. ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ 24-07-2024 ಆಗಿದ್ದು ದಿನಾಂಕ ಮುಗಿಯುವುದರ ಒಳಗಾಗಿ ಆಸಕ್ತರು ಅರ್ಜಿ ಸಲ್ಲಿಸಬೇಕು.
ಹುದ್ದೆಯ ವಿವರ
ಯೂಸಿಓ ಬ್ಯಾಂಕ್ ಅಧಿಸೂಚನೆಯಲ್ಲಿ ಪ್ರಕಟಿಸಿರುವಂತೆ ಕೇವಲ 01(Internal Ombudsman) ಹುದ್ದೆ ಖಾಲಿ ಇದೆ.
ವಯೋಮಿತಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು 65 ವರ್ಷ ದಾಟಿರಬಾರದು
ವೇತನ
ಅಧಿಸೂಚನೆ ಹೇಳಿರುವಂತೆ ಅಭ್ಯರ್ಥಿಯ ಆಯ್ಕೆಯ ಬಳಿಕ ವೇತನವನ್ನು ನಿರ್ಧರಿಸಲಾಗುವುದು.
ವಿಧ್ಯಾರ್ಹತೆ
- ಅಭ್ಯರ್ಥಿಗಳು ಬೇರೆ ಬ್ಯಾಂಕ್ ಅಥವಾ ಹಣಕಾಸು ವಲಯದ ನಿಯಂತ್ರಣ ಸಂಸ್ಥೆ/ಎನ್‌ಬಿಎಸ್‌ಪಿ/ಎನ್‌ಬಿಎಫ್‌ಸಿ /ಸಿಐಸಿ ಯ ಜನರಲ್ ಮ್ಯಾನೇಜರ್‌ಗೆ ಸಮಾನವಾದ ಶ್ರೇಣಿಯಲ್ಲಿ ನಿವೃತ್ತ ಅಥವಾ ಸೇವೆ ಸಲ್ಲಿಸಿರುವ ಅನುಭವ ಇರಬೇಕು
- ಅಭ್ಯರ್ಥಿಗಳು ಬ್ಯಾಂಕಿಂಗ್, ನಾನ್ ಬ್ಯಾಂಕಿಂಗ್ ಫೈನಾನ್ಸ್, ನಿಯಂತ್ರಣ, ಮೇಲ್ವಿಚಾರಣೆ, ಕ್ರೆಡಿಟ್ ಮಾಹಿತಿ ಅಥವಾ ಗ್ರಾಹಕರ ರಕ್ಷಣೆಯಲ್ಲಿ ಕನಿಷ್ಠ 7 ವರ್ಷಗಳು ಅನುಭವ ಪಡೆದಿರಬೇಕು
ವಿಶೇಷ ಸೂಚನೆ: ಅರ್ಜಿದಾರರು ಈ ಹಿಂದೆ ಯೂಸಿಓ ಬ್ಯಾಂಕ್‌ನಲ್ಲಿ( UCO Bank Job) ಕೆಲಸ ಮಾಡಿರಬಾರದು ಅಥವಾ ಪ್ರಸ್ತುತ ಸೇವೆಯಲ್ಲಿರಬಾರದು.
ಅಧಿಕಾರಾವಧಿ:
ಅಭ್ಯರ್ಥಿಯನ್ನು 03 ವರ್ಷದ ಅಧಿಕಾರ ಅವಧಿಯ ಒಪ್ಪಂದದ ಮೇರೆಗೆ(Contractual Basis) ಆಯ್ಕೆ ಮಾಡಲಾಗುವು. ಮರುನೇಮಕ ಅಥವಾ ಅವಧಿಯ ವಿಸ್ತರಣೆಗೆ ಅರ್ಹತೆ ಹೊಂದಿಲ್ಲ.ಹೆಚ್ಚಿನ ಮಾಹಿತಿಗಾಗಿ ಕೆಳಗೆ ಅಧಿಕ್ರತ ಅಧೀಸೂಚನೆಯ ಲಿಂಕ್ ನೀಡಲಾಗಿದ್ದು, ಅಧಿಕಾರಾವಧಿಯ ಮಾಹಿತಿಯನ್ನು ವಿವರವಾಗಿ ನೀಡಲಾಗಿದೆ
ಅರ್ಜಿ ಶುಲ್ಕ
- ಎಸ್‌ಸಿ/ಎಸ್‌ಟಿ/ಪಿಡಬಲ್ಯುಡಿ ಅಭ್ಯರ್ಥಿಗಳಿಗೆ ರೂ. 500 ಮತ್ತು ಅದರ ಜೊತೆಗೆ ಪಾವತಿ ಗೇಟ್‌ವೇ ಶುಲ್ಕಗಳು
- ಎಲ್ಲ ಇತರ ವರ್ಗದ ಅಭ್ಯರ್ಥಿಗಳಿಗೆ ರೂ. 1000 ಮತ್ತು ಅದರ ಜೊತೆಗೆ ಪಾವತಿ ಗೇಟ್‌ವೇ ಶುಲ್ಕಗಳು
ಅರ್ಜಿ ಶುಲ್ಕಗಳ ಹೆಚ್ಚಿನ ಮಾಹಿತಿ ಪಡೆಯಲು ಕೆಳಗೆ ನೀಡಿರುವ ಆಫೀಷಿಯಲ್ ನೋಟಿಫಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
ಆಯ್ಕೆ ವಿಧಾನ
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲು ಯೂಸಿಓ ಬ್ಯಾಂಕ್ ಯಿಂದ ವೈಯಕ್ತಿಕ ಸಂದರ್ಶನ ನಡೆಸಲಾಗಿವುದು, ನಂತರ ಸಮಿತಿಯಿಂದ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ ಅಭ್ಯರ್ಥಿಯ ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ಅಧಿಕ್ರತ ಅಧಿಸೂಚನೆಯ ಲಿಂಕ್ ಮೇಲೆ ಒತ್ತಿ, ಪೂರ್ತಿ ಮಾಹಿತಿ ಪಡೆಯಿರಿ.
ಅರ್ಜಿ ಸಲ್ಲಿಕೆ
ನೇಮಕಾತಿಯ ಅರ್ಜಿ ಸಲ್ಲಿಕೆಯನ್ನು ಮಾಡಲು ಬಯಸುವ ಅಭ್ಯರ್ಥಿಗಳು ಅಧಿಕೃತ ಯೂಸಿಓ ಬ್ಯಾಂಕ್ ವೆಬ್‌ಸೈಟ್‌ನಲ್ಲಿರುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಅಧಿಕ್ರತ ಪೋರ್ಟಲ್ ಲಿಂಕ್ ಕೆಳಗೆ ನೀಡಲಾಗಿದೆ.