ಬ್ಯಾಂಕ್ ಎಫ್‌ಡಿ 7% ರಿಟರ್ನ್ ಕೊಟ್ಟರೆ ಈ ಯೋಜನೆಗಳು 15% ರಿಟರ್ನ್ಸ್ ನೀಡುತ್ತದೆ! ಎಫ್‌ಡಿ ಯೋಜನೆಗಿಂತ ದುಪ್ಪಟ್ಟು ಗಳಿಕೆ

ಬ್ಯಾಂಕ್ ಎಫ್‌ಡಿ 7% ರಿಟರ್ನ್ ಕೊಟ್ಟರೆ ಈ ಯೋಜನೆಗಳು 15% ರಿಟರ್ನ್ಸ್ ನೀಡುತ್ತದೆ! ಎಫ್‌ಡಿ ಯೋಜನೆಗಿಂತ ದುಪ್ಪಟ್ಟು ಗಳಿಕೆ

ಸ್ನೇಹಿತರೇ ಹಣ ಅನ್ನುವಂತಹದ್ದು ರಕ್ತ ಇದ್ದ ಹಾಗೆ, ಆಕಸ್ಮಿಕವಾಗಿ ನಮ್ಮ ದೇಹದಲ್ಲಿ ರಕ್ತ ಸಂಚರಿಸುವುದನ್ನು ನಿಲ್ಲಿಸಿ ಒಂದೇ ಜಾಗದಲ್ಲಿ ಹೆಪ್ಪುಗಟ್ಟಿದರೆ ನಮ್ಮ ದೇಹ ಕಾಯಿಲೆಗಳಿಗೆ ಹೇಗೆ ಶರಣಾಗುತ್ತೋ ಹಾಗೆಯೇ ಹಣವು ಸಹ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡದೆ ಒಂದೇ ಜಾಗದಲ್ಲಿ ಕೂಡಿಟ್ಟರೆ ಹಣದುಬ್ಬರದ ಕಾರಣದಿಂದ ಕ್ರಮೇಣ ಅದರ ಮೂಲ ಮೌಲ್ಯವನ್ನು ಕಳೆದು ಕೊಳ್ಳುತ್ತದೆ. ಹೀಗಾಗಿ ಈ ಲೇಖನದಲ್ಲಿ ನಾವು ಹಣ ಹೂಡಿಕೆ ಮಾಡಿ ಹೆಚ್ಚು ಗಳಿಕೆ ಕೊಡುವ ಎರಡು ಉಪಾಯಗಳಲ್ಲಿ ಯಾವುದು ಉತ್ತಮ ಅನ್ನುವುದನ್ನು ತಿಳಿಕೊಳ್ಳೋಣ ಬನ್ನಿ.

ಯೂನಿಟ್ ಲಿಂಕ್ಡ್ ಇನ್ಸುರೆನ್ಸ್ ಪ್ಲಾನ್ vs ಇಕ್ವಿಟಿ ಮ್ಯೂಚುವಲ್ ಫಂಡ್ಸ್

ಸ್ನೇಹಿತರೇ ಇನ್ಸೂರೆನ್ಸ್ ಕಂಪನಿಗಳಿಂದ ನಿರ್ವಹಿಸಲ್ಪಡುವ ಮಾರುಕಟ್ಟೆ-ಸಂಬಂಧಿತ ಸಿಸ್ಟಮ್ಯಾಟಿಕ್ ಹೂಡಿಕೆಗಳು ಮತ್ತು ಇಕ್ವಿಟಿ ಮ್ಯೂಚುವಲ್ ಫಂಡ್ಸ್ ನಡುವೆ ಯಾವುದು ಉತ್ತಮ ಅಂತ ತಿಳಿದು ಕೊಳ್ಳುವ ಮೊದಲೇ ಇವುಗಳ ನಡುವಿನ ವ್ಯತ್ಯಾಸ, ಲಾಭ ಮತ್ತು ಲೋಪಗಳನ್ನು ತಿಳಿಉಕೊಳ್ಳುವುದು ಬಹುಮುಖ್ಯ.

ಯೂನಿಟ್ ಲಿಂಕ್ಡ್ ಇನ್ಸುರೆನ್ಸ್ ಪ್ಲಾನ್

ಸ್ನೇಹಿತರೇ ಯೂನಿಟ್ ಲಿಂಕ್ಡ್ ಇನ್ಸುರೆನ್ಸ್ ಪ್ಲಾನ್ಅಂದರೆ ಇನ್ಸೂರೆನ್ಸ್ ಕಂಪನಿಗಳಿಂದ ನಿರ್ವಹಿಸಲ್ಪಡುವ ಮಾರುಕಟ್ಟೆ-ಸಂಬಂಧಿತ ಸಿಸ್ಟಮ್ಯಾಟಿಕ್ ಹೂಡಿಕೆಗಳು ನಿಮ್ಮ ದೀರ್ಘಾವಧಿಯ ಹೂಡಿಕೆ ಮೇಲೆ ಎರಡುಪಟ್ಟು ಲಾಭವನ್ನು ನೀಡುವ ವಿಮಾ ಯೋಜನೆಗಳಾಗಿದ್ದು ಇದರ ಜೊತೆಗೆ ದುರದ್ರಷ್ಟಕರ ಘಟನೆಯ ಸಂದರ್ಭದಲ್ಲಿ ಕುಟುಂಬಕ್ಕೆ ಆರ್ಥಿಕ ನೆರವು ನೀಡುತ್ತದೆ.

ಹೂಡಿಕೆಯ ಆಯ್ಕೆ

  • ಫಂಡ್ ಆಯ್ಕೆ: ಹೂಡಿಕೆದಾರರು ಒಂದೇ ಫಂಡ್ ಆಯ್ಕೆ ಒಳಗಡೆ ವಿವಿಧ ರೀತಿಯ ಇನ್ವೆಸ್ಟ್ಮೆಂಟ್ ಪ್ಲಾನ್ ಗಳನ್ನು ಆರಿಸಬಹುದು
  • ಅಸೆಟ್ ಕ್ಲಾಸ್: ಹೂಡಿಕೆದಾರರು ಇಕ್ವಿಟಿ, ಡೆಟ್, ಕಾರ್ಪೊರೇಟ್ ಡೆಟ್ ಅಥವಾ ಮನಿ ಮಾರ್ಕೆಟ್ ಇನ್ಸ್ಟ್ರುಮೆಂಟ್ ಗಳಲ್ಲಿ ಹೂಡಿಕೆ ಮಾಡಬವುದು.

ಹೂಡಿಕೆದಾರಣ ಆದ್ಯತೆ ಮೇರೆಗೆ ಫಂಡ್ ಗಳನ್ನು ಸ್ವಯಂ ಚಾಲಿತವಾಗಿ ಮತ್ತು ಉಚಿತವಾಗಿ ಯಾವುದು ಶುಲ್ಕವಿಲ್ಲದೆ ಬದಲಾವಣೆ ಮಾಡಿಕೊಳ್ಳಬಹುದು.

ಸ್ನೇಹಿತರೇ ಐ‌ಟಿ ಕಾಯ್ದೆಯ 80ಸಿ ವಿಭಾಗದ ಅಡಿಯಲ್ಲಿ ಪಾವತಿಸಿದ ಪ್ರೀಮಿಯಂಗಳಿಗೆ ತೆರಿಗೆ ಕಡಿತ ಲಭ್ಯವಿದ್ದು , ಜೊತೆಗೆ ಗಳಿಸಿದ ಲಾಭದ ಮೇಲೆ ಯಾವುದೇ ತರಹದ ತೆರಿಗೆ ಇಲ್ಲ( zero capital gain tax).

ಸ್ನೇಹಿತರೇ ಹತ್ತು ವರ್ಷಗಳಲ್ಲಿನ ಲಾರ್ಜ್ ಕ್ಯಾಪ್ ಹೂಡಿಕೆ ವರ್ಗದ ಸರಾಸರಿ ಲಾಭ 14% ಆಗಿದ್ದು ಇದು ನಾವು ಮಾಡಿಸುವ ಎಫ್‌ಡಿ ಯ ಲಾಭದ (ಸರಾಸರಿ 7%) ದುಪ್ಪಟ್ಟಿರುತ್ತದೆ.

ವಾರ್ಷಿಕ ಪ್ರೀಮಿಯಮ್‌ನ 10 ಪಟ್ಟು ಇನ್ಸೂರೆನ್ಸ್ ಕವರ್ ಅನ್ನು ಕ್ಲೈಮ್ ಮಾಡವುದರ ಜೊತೆಗೆ ಹೆಚ್ಚುವರಿ ಲಾಭಗಳನ್ನು ರೈಡರ್‌ಗಳ ಮೂಲಕ ಪಡೆಯಬಹುದು.

ಇಕ್ವಿಟಿ ಮ್ಯೂಚುವಲ್ ಫಂಡ್

ಹೂಡಿಕೆದಾರರು ಸಿಂಗಲ್ ಫಂಡ್ ಅಲ್ಲಿ ಹೂಡಿಕೆ ಮಾಡಬಹುದು. ಒಂದೇ ಫಂಡ್ ಅಲ್ಲಿ ಹಲವು ಆಯ್ಕೆಗಳು ಇರುವುದಿಲ್ಲ. ಹೂಡಿಕೆದಾರರು ಇಕ್ವಿಟಿ, ಡೆಟ್ ಫಂಡ್, ಗೋಲ್ಡ್, ಕೊಮೊಡಿಟೀಸ್ ಮತ್ತು ಎಮ್‌ಎಮ್‌ಐ ಗಳಲ್ಲಿ ಹೂಡಿಕೆ ಮಾಡಬಹುದು.

ಸ್ವಯಂಚಾಲಿತ ಹೂಡಿಕೆಯ ಆಯ್ಕೆ ಇರುವುದಿಲ್ಲ ಮತ್ತು ಫಂಡ್ ಬದಲಾವಣೆಯ ಮೇಲೆ 1.5% ಶುಲ್ಕ ನೀಡಬೇಕಾಗುತ್ತದೆ.

ಸ್ನೇಹಿತರೇ ಇಕ್ವಿಟಿ ಮ್ಯೂಚುವಲ್ ಫಂಡ್ ಗಳಲ್ಲಿ ಮ್ಯುಚುರಿಟಿ ಸಮಯದಲ್ಲಿ ಒಟ್ಟು ಲಾಭ ಗಳಿಕೆಯ 10% ತೆರಿಗೆಯನ್ನು (long term capital gain tax) ಸರ್ಕಾರಕ್ಕೆ ನೀಡಬೇಕಾಗುತ್ತದೆ.

ಸ್ನೇಹಿತರೇ ಇಕ್ವಿಟಿ ಮ್ಯೂಚುವಲ್ ಫಂಡ್ ಹಿಂದಿನ ಪ್ರದರ್ಶನದ ಪ್ರಕಾರ ಲಾರ್ಜ್ ಕ್ಯಾಪ್ ವರ್ಗದ ಫಂಡ್ ಗಳು ಸರಾಸರಿ 15% ರಿಟರ್ನ್ಸ್ ತಂದುಕೊಟ್ಟಿವೆ.

ಇಕ್ವಿಟಿ ಮ್ಯೂಚುವಲ್ ಫಂಡ್ಗಳಲ್ಲಿ ಯಾವುದೇ ತರಹದ ಇನ್ಸೂರೆನ್ಸ್ ಕವರ್ ಮತ್ತು ಲಾಯಲ್ಟಿ ಬೆನಿಫಿಟ್ ಇರುವುದಿಲ್ಲ.

ಈ ಮೇಲೆನಿ ಎರಡು ಪ್ಲಾನ್ ಗಳನ್ನು ಉದಾಹರಣೆಯ ಮೂಲಕ ತಿಳಿಯೋನ ಬನ್ನಿ.

ಯೂನಿಟ್ ಲಿಂಕ್ಡ್ ಇನ್ಸುರೆನ್ಸ್ ಪ್ಲಾನ್ ಹೂಡಿಕೆ

ನೀವು 35 ವರ್ಷದವರಾಗಿದ್ದು, ಮುಂದಿಂದ 20 ವರ್ಷಗಳ ಕಾಲ ನಿಗದಿತ ಮತ್ತು ನಿಯಮಿತವಾಗಿ 20 ವರ್ಷಗಳ ಕಾಲ ವಾರ್ಷಿಕ 50,000 ಪ್ರಿಮಿಯಮ್ ಇರುವ ಯೂ‌ಎಲ್‌ಐ‌ಪಿ (ULIP) ಯೋಜನೆಯಲ್ಲಿ ಹೂಡಿಕೆ ಮಾಡುತ್ತಿರಾ ಅಂತ ಊಹಿಸೋಣ. ಇದರ ಲೆಕ್ಕಾಚಾರ ಹೀಗಿರುತ್ತೆ ನೋಡಿ.

ಹೂಡಿಕೆ ವಿವರಗಳು:

  • ವಾರ್ಷಿಕ ಪ್ರೀಮಿಯಮ್: ₹50,000
  • ಪಾಲಿಸಿಯ ಅವಧಿ: 20 ವರ್ಷಗಳು
  • ವಿಮಾ ಕವರ್: ₹5,00,000 (ವಾರ್ಷಿಕ ಪ್ರೀಮಿಯಮ್‌ನ 10 ಪಟ್ಟು)

ಲಾಭದ ಲೆಕ್ಕಾಚಾರ

  • 20 ವರ್ಷಗಳಲ್ಲಿ ನಿಮ್ಮ ಒಟ್ಟು 10,00,000 ರೂ ಪ್ರಿಮಿಯಮ್ ಪಾವತಿಸುತ್ತಿರಿ
  • ವಾರ್ಷಿಕ ರೀಟರ್ನ್ 14% ಪರಿಗಣಿಸಿದರೆ, ನಿಮ್ಮ ಹೂಡಿಕೆಯು ಕ್ರಮೇಣವಾಗಿ ಬೆಳೆದು 20 ವರ್ಷಗಳ ನಂತರ ಮ್ಯೂಚೂರಿಟಿ ಸಮಯದಲ್ಲಿ ಒಟ್ಟು ಹಣದ ಮೌಲ್ಯ 1,50,00,000 ರೂ ಆಗುತ್ತದೆ.
  • ಸೆಕ್ಷನ್ 80c ಅಡಿಯಲ್ಲಿ ತೆರಿಗೆ ಉಳಿತಾಯವನ್ನು ಪಡೆಯುವಿರಿ ಮತ್ತು ಕ್ಯಾಪಿಟಲ್ ಗೇನ್ ಟಾಕ್ಸ್ ಇರುವುದಿಲ್ಲ.
  • ದುರಂತವಾದಲ್ಲಿ, ನಿಮ್ಮ ಕುಟುಂಬವು ₹5,00,000 ವಿಮಾ ಕವರ್ ಅನ್ನು ಪಡೆಯುತ್ತದೆ.

ಇಕ್ವಿಟಿ ಮ್ಯೂಚುವಲ್ ಫಂಡ್ಸ್ ಹೂಡಿಕೆ

ನೀವು 35 ವರ್ಷದವರಾಗಿದ್ದು, ಮುಂದಿಂದ 20 ವರ್ಷಗಳ ಕಾಲ ನಿಗದಿತ ಮತ್ತು ನಿಯಮಿತವಾಗಿ 20 ವರ್ಷಗಳ ಕಾಲ ವಾರ್ಷಿಕ 50,000 ಪ್ರಿಮಿಯಮ್ ಇರುವ ಇಕ್ವಿಟಿ ಮ್ಯೂಚುವಲ್ ಫಂಡ್ಸ್ ಯೋಜನೆಯಲ್ಲಿ ಹೂಡಿಕೆ ಮಾಡುತ್ತಿರಾ ಅಂತ ಊಹಿಸೋಣ. ಇದರ ಲೆಕ್ಕಾಚಾರ ಹೀಗಿರುತ್ತೆ ನೋಡಿ.

ಹೂಡಿಕೆ ವಿವರಗಳು:

  • ವಾರ್ಷಿಕ ಹೂಡಿಕೆ: ₹50,000
  • ಹೂಡಿಕೆಯ ಅವಧಿ: 20 ವರ್ಷಗಳು

ಲಾಭದ ಲೆಕ್ಕಾಚಾರ

  • 20 ವರ್ಷಗಳಲ್ಲಿ ನಿಮ್ಮ ಒಟ್ಟು 10,00,000 ರೂ ಪ್ರಿಮಿಯಮ್ ಪಾವತಿಸುತ್ತಿರಿ
  • ವಾರ್ಷಿಕ ರೀಟರ್ನ್ 15% ಪರಿಗಣಿಸಿದರೆ, ನಿಮ್ಮ ಹೂಡಿಕೆಯು ಕ್ರಮೇಣವಾಗಿ ಬೆಳೆದು 20 ವರ್ಷಗಳ ನಂತರ ಮ್ಯೂಚೂರಿಟಿ ಸಮಯದಲ್ಲಿ ಒಟ್ಟು ಹಣದ ಮೌಲ್ಯ 1,90,00,000 ರೂ ಆಗುತ್ತದೆ.
  • ಮ್ಯೂಚೂರಿಟಿ ಸಮಯದಲ್ಲಿ ನೀವು ಗಳಿಸಿದ ರಿಟರ್ನ್ಸ್ ಮೇಲೆ 10% ದೀರ್ಘಕಾಲಿಕ ಲಾಭದ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
  • ಇನ್ಸೂರೆನ್ಸ್ ಕವರ್ ಇರುವುದಿಲ್ಲ

ತೀರ್ಮಾನ: ಯೂ‌ಎಲ್‌ಐ‌ಪಿ (ULIPs) ಮತ್ತು ಇಕ್ವಿಟಿ ಮ್ಯೂಚುವಲ್ ಫಂಡ್ಸ್ ಎರಡರಲ್ಲಿಯೂ ತಮ್ಮದೇ ಆದ ಲಾಭಗಳು ಇವೆ. ULIPs ಇನ್ಸೂರೆನ್ಸ್ ಕವರ್ ಪ್ರಯೋಜನಗಳೊಂದಿಗೆ ಹೂಡಿಕೆ ಮತ್ತು ತೆರಿಗೆ ಉಳಿತಾಯ ಆಯ್ಕೆಗಳನ್ನು ಪರಿಗಣಿಸಿದರೆ ಉತ್ತಮ, ಮತ್ತು ಇಕ್ವಿಟಿ ಮ್ಯೂಚುವಲ್ ಫಂಡ್ಸ್ ಗಳು ಹೆಚ್ಚು ಲಾಭ ಮತ್ತು ಲಿಕ್ವಿಡಿಟಿ ಬಯಸುವವರಿಗೆ ಉತ್ತಮವಾಗಿವೆ.

Leave a Comment