ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ ನೇಮಕಾತಿ 2024: ಅಧಿಕ್ರತ ಅಧಿಸೂಚನೆ ಪ್ರಕಟ

ಸ್ನೇಹಿತರೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ, ಉತ್ತರ ಕನ್ನಡ ಜಿಲ್ಲೆಯಿಂದ ಗ್ರೂಪ್ ‘ಸಿ’ ಬೆರಳಚ್ಚುಗಾರರು, ಬೆರಳಚ್ಚು-ನಕಲುಗಾರ, ಆದೇಶ ಜಾರಿಕಾರರ 26 ಹುದ್ದೆಗಳ ನೇಮಕಾತಿಗೆ ಅಧಿಕ್ರತ ಅಧಿಸೂಚನೆಯನ್ನು ಪ್ರಕಟಿಸಲಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಲು 19-07-2024 ಕೊನೆಯ ದಿನವಾಗಿದೆ.

ಈ ಲೇಖನದಲ್ಲಿ ನೇಮಕಾತಿಗೆ ಸಂಬಂದಿತ ಅರ್ಹತಾ ಮಾನದಂಡಗಳ ಅಂದರೆ ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ ಮತ್ತು ಅರ್ಜಿ ಸಲ್ಲಿಸುವ ವಿಧಾನ ಇನ್ನಿತರ ಪ್ರಮುಖ ಅಂಶಗಳ ಮಾಹಿತಿಯನ್ನು ವಿವರವಾಗಿ ನೀಡಲಾಗಿದ್ದು ಲೇಖನವನ್ನು ಪೂರ್ತಿಯಾಗಿ ಓದಿರಿ

ಖಾಲಿ ಹುದ್ದೆಗಳ ವಿವರ:

  • ಒಟ್ಟು ಹುದ್ದೆಗಳು: 26 ಹುದ್ದೆಗಳು
  • ಬೆರಳಚ್ಚುಗಾರರು: 03 ಹುದ್ದೆಗಳು
  • ಬೆರಳಚ್ಚು-ನಕಲುಗಾರ: 03 ಹುದ್ದೆಗಳು
  • ಆದೇಶ ಜಾರಿಕಾರರು: 20 ಹುದ್ದೆಗಳು

ವೇತನ:

  • ಬೆರಳಚ್ಚುಗಾರ: ರೂ 21400- ರೂ 42000
  • ಬೆರಳಚ್ಚು-ನಕಲುಗಾರ: ರೂ 21400- ರೂ 42000
  • ಆದೇಶ ಜಾರಿಕಾರರು: ರೂ 19950- ರೂ 37900
  • ಸಿಪಾಯಿ: ರೂ 17000- ರೂ 28950

ಶೈಕ್ಷಣಿಕ ಅರ್ಹತೆಗಳು:

ಬೆರಳಚ್ಚುಗಾರರು ಮತ್ತು ಬೆರಳಚ್ಚು-ನಕಲುಗಾರ:

  • ಕನಿಷ್ಟ ಪಿಯುಸಿ ವಿದ್ಯಾರ್ಹತೆಯನ್ನು ಹೊಂದಿರಬೇಕು
  • ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮೂಲಕ ಹಿರಿಯ ದರ್ಜೆ ಕನ್ನಡ ಮತ್ತು ಆಂಗ್ಲ ಬೆರಳಚ್ಚು ತೇರ್ಗಡೆ ಪಡೆದಿರಬೇಕು

ಆದೇಶ ಜಾರಿಕಾರರು:

ಕನಿಷ್ಟ ಹತ್ತನೇ ತರಗತಿ ತೇರ್ಗಡೆಯನ್ನು ಹೊಂದಿರಬೇಕು.

ವಯೋಮಿತಿ:

  • ಅಭ್ಯರ್ಥಿಗಳಿಗೆ ಕನಿಷ್ಟ 18 ವರ್ಷ ಮತ್ತು ಗರಿಷ್ಠ 35 ವರ್ಷದೊಳಗಿರಬೇಕು
  • ವಯೋ ಸಡಲಿಕೆ: ಎಸ್‌ಸಿ/ಎಸ್‌ಟಿ: 05 ವರ್ಷ ಸಡಿಲಿಕೆ, ಓ‌ಬಿ‌ಸಿ: 03 ವರ್ಷ ಸಡಿಲಿಕೆ, ಪಿ‌ಡಬಲ್ಯು‌ಡಿ: 10 ವರ್ಷ ಸಡಿಲಿಕೆ

ಅರ್ಜಿ ಶುಲ್ಕ:

  • ಎಸ್‌ಸಿ/ಎಸ್‌ಟಿ/ಪಿ‌ಡಬಲ್ಯು‌ಡಿ: ರೂ. 100
  • 2ಏ, 2ಬಿ, 3ಏ, 3ಬಿ: ರೂ. 150
  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: ರೂ. 300

ಆಯ್ಕೆವಿಧಾನ:

ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯವು ಲಿಖಿತ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ

ಅರ್ಜಿ ಸಲ್ಲಿಸಲು ಲಿಂಕ್:

ಅಭ್ಯರ್ಥಿಗಳು ಆನ್‌ಲೈನ್ ಅರ್ಜಿ ಸಲ್ಲಿಕೆಯನ್ನು 20.06.2024 ರಿಂದ 19.07.2024 ರೊಳಗಾಗಿ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಹೆಚ್ಚಿನ ಮಾಹಿತಿಗಳಿಗೆ ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯದ ವೆಬ್ಸೈಟ್ ಗೆ ಭೇಟಿ ನೀಡಿ.

Leave a Comment