ಉತ್ತರ ಕನ್ನಡ ಜಿಲ್ಲಾ ಪಂಚಾಯತಿ ನೇಮಕಾತಿ 2024 (Uttara Kannada Zilla Panchayat Recruitment 2024) ಕಾರವಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಗೆ ಸಂಬಂದಿತ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು, ತಾಲೂಕು ಎಮ್‌ಐಎಸ್ (MIS) ಸಂಯೋಜಕರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನೇಮಕಾತಿಗೆ ಸಂಬಂದಿತ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಕೆಯನ್ನು ಮಾಡಬಹುದಾಗಿದೆ.
ಉತ್ತರ ಕನ್ನಡ ಜಿಲ್ಲಾ ಪಂಚಾಯತಿ ನೇಮಕಾತಿ 2024 ಮುಖಾಂತರ ಅರ್ಹ ಅಭ್ಯರ್ಥಿಗಳನ್ನು ಒಂದು ವರ್ಷದ ಒಪ್ಪಂದದ ಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುವುದು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯ ಕೊನೆಯ ದಿನಾಂಕ ಜುಲೈ 12, 2024ರ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಉತ್ತರ ಕನ್ನಡ ಜಿಲ್ಲಾ ಪಂಚಾಯತಿ ನೇಮಕಾತಿ 2024 ರ ಶೀರ್ಷಿಕೆ:
- ಸಂಸ್ಥೆಯ ಹೆಸರು: ಉತ್ತರ ಕನ್ನಡ ಜಿಲ್ಲಾ ಪಂಚಾಯತಿ, ಕಾರವಾರ
- ಹುದ್ದೆಯ ಹೆಸರು: ತಾಲೂಕು ಎಮ್‌ಐಎಸ್ (MIS) ಸಂಯೋಜಕ
- ಒಟ್ಟು ಖಾಲಿ ಹುದ್ದೆಗಳು: 01
- ಅರ್ಜಿಯ ವಿಧಾನ: ಆನ್‌ಲೈನ್
- ಉದ್ಯೋಗದ ಸ್ಥಳ: ಉತ್ತರ ಕನ್ನಡ (ಕಾರವಾರ)
ಪ್ರಮುಖ ದಿನಾಂಕಗಳು:
- ಅರ್ಜಿಯ ಪ್ರಾರಂಭ ದಿನಾಂಕ: ಜುಲೈ 06, 2024
- ಅರ್ಜಿಯ ಕೊನೆಯ ದಿನಾಂಕ: ಜುಲೈ 12, 2024
ವಯೋಮಿತಿ:
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯೋಮಿತಿ 25 ರಿಂದ 40 ವರ್ಷದೊಳಗಿರಬೇಕು.
ವಿದ್ಯಾರ್ಹತೆ:
- BCA ಪದವಿ ಹೊಂದಿರಬೇಕು
- ಕನಿಷ್ಠ 02 ರಿಂದ 3 ವರ್ಷಗಳ ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಅನುಭವ ಇರಬೇಕು
- ಕಂಪ್ಯೂಟರ್ ಜ್ಞಾನ
ವೇತನ:
- ತಿಂಗಳ ವೇತನ: ರೂ 28,000
- ಟಿಏ/ಡಿಏ: ರೂ 2,000
ಅರ್ಜಿ ಶುಲ್ಕ:
ಅರ್ಜಿ ಸಲ್ಲಿಸುವ ಎಲ್ಲ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಆಯ್ಕೆ ವಿಧಾನ:
ಅಹಿಕ್ರತ ಅಧಿಸೂಚನೆಯಲ್ಲಿ ಪ್ರಕಟಿಸಿರುವಂತೆ ಮೊದಲು ಲಿಖಿತ ಪರೀಕ್ಷೆ ನಡೆಸಿ, ಎರಡನೇ ಹಂತದಲ್ಲಿ ಸಂದರ್ಶನ ಮಾಡುವುದರ ಮೂಲಕ ಆಯ್ಕೆ ಮಾಡಲಾಗುವುದು
ಅರ್ಜಿ ಸಲ್ಲಿಸುವ ವಿಧಾನ:
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಉತ್ತರಕನ್ನಡ ಜಿಲ್ಲಾ ಪಂಚಾಯತಿ, ಕಾರವಾರ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.