ಡಬಲ್ಯು‌ಸಿ‌ಡಿ ಚಿತ್ರದುರ್ಗ ನೇಮಕಾತಿ 2024: 215 ಅಂಗನವಾಡಿ ಕಾರ್ಮಿಕ ಮತ್ತು ಸಹಾಯಕ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ

ಡಬಲ್ಯು‌ಸಿ‌ಡಿ ಚಿತ್ರದುರ್ಗ ನೇಮಕಾತಿ 2024: 215 ಅಂಗನವಾಡಿ ಕಾರ್ಮಿಕ ಮತ್ತು ಸಹಾಯಕ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ

ಸ್ನೇಹಿತರೇ ಮಹಿಳಾ ಮತ್ತು ಮಕ್ಕಳ ಅಭಿವ್ರಡ್ಡಿ ಇಲಾಖೆ ಚಿತ್ರದುರ್ಗ ಉದ್ಯೋಕಾಂಕ್ಷಿಗಳಿಗೆ 2024 ರ ಅಂಗನವಾಡಿ ಕಾರ್ಮಿಕ ಮತ್ತು ಸಹಾಯಕ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆಯನ್ನು ಪ್ರಕಟಗೊಳಿಸಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಚಿತ್ರದುರ್ಗ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಲು ಬಯಸುವರು ಈ ಅವಕಾಶವನ್ನು ತಮ್ಮ ವ್ರತ್ತಿ ಜೀವನಕ್ಕಾಗಿ ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಆಗಸ್ಟ್ 31, 2024 ರ ಒಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಯನ್ನು ಪೂರ್ಣಗೊಳಿಸಬೇಕು.

ಈ ನೇಮಕಾತಿಯು ಒಟ್ಟು 215 ಹುದ್ದೆಗಳ ಭರ್ತಿಗೆ ನಡೆಯಲಿದ್ದು ಅದರಲ್ಲಿ ಅಂಗನವಾಡಿ ಕಾರ್ಮಿಕ ಹುದ್ದೆಗಳು 62 ಮತ್ತು ಅಂಗನವಾಡಿ ಸಹಾಯಕರಿಗೆ 149 ಹುದ್ದೆಗಳನ್ನು ಹಂಚಲಾಗಿದೆ. ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿ ನಿಯೋಜಿಸಲಾಗುವುದು ಮತ್ತು ವೇತನವನ್ನು ಡಬಲ್ಯು‌ಸಿ‌ಡಿ ಚಿತ್ರದುರ್ಗ ನಿಯಮಾವಳಿಯಂತೆ ವಿತರಿಸಲಾಗುವುದು.

ವಿದ್ಯಾರ್ಹತೆ: ಡಬಲ್ಯು‌ಸಿ‌ಡಿ ಚಿತ್ರದುರ್ಗ ನೇಮಕಾತಿ 2024 ರ (WCD Chitradurga recruitment 2024) ಅಧಿಸೂಚನೆಯಲ್ಲಿ ನೀಡಿರುವಂತೆ ಅಭ್ಯರ್ಥಿಗಳ ಅಂಗನವಾಡಿ ಕಾರ್ಮಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪಿ‌ಯುಸಿ ಪೂರ್ಣಗೊಳಿಸಿರಬೇಕು ಮತ್ತು ಅಂಗನವಾಡಿ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ: ಅಭ್ಯರ್ಥಿಗಳ ವಯೋಮಿತಿಯು ಕನಿಷ್ಠ 19 ಮತ್ತು ಗರಿಷ್ಠ 35 ವರ್ಷಗಳ ನಡುವಿರಬೇಕು ಮತ್ತು ವಯೋಸಡಲಿಕೆಯನ್ನು ಡಬಲ್ಯು‌ಸಿ‌ಡಿ ಚಿತ್ರದುರ್ಗ ನಿಯಮಾವಳಿಗಳ ಪ್ರಕಾರ ನಡೆಸಲಾಗುವುದು.

ಆಯ್ಕೆ ಪ್ರಕ್ರಿಯೆ: ಡಬಲ್ಯು‌ಸಿ‌ಡಿ ಚಿತ್ರದುರ್ಗ ನೇಮಕಾತಿಯ ಆಯ್ಕೆಯನ್ನು ಮೆರಿಟ್ ಪಟ್ಟಿಯ ಮೇರೆಗೆ ನಡೆಸಲಾಗುವುದು ಹಾಗೂ ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕವಿರುವುದಿಲ್ಲ. ಹೀಗಾಗಿ ಕೂಡಲೇ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ದಿನಾಂಕ 30-07-2024 ರಂದು ಪ್ರಾರಂಭವಾಗಿ ದಿನಾಂಕ 31-08-2024 ರಂದು ಕೊನೆಗೊಳ್ಳುವುದು.

ಅರ್ಜಿ ಸಲ್ಲಿಕೆ: ಈ ಕೆಳಗೆ ಕೊಟ್ಟಿರುವ ಅರ್ಜಿ ಸಲ್ಲಿಕೆ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ನಮೂನೆಯಲ್ಲಿ ಕೇಳುವ ಪ್ರತಿಯೊಂದು ಮಾಹಿತಿಯನ್ನು ನಮೂದಿಸಿ ನಂತರ ಅಗತ್ಯ ದಾಖಲೆಗಳನ್ನು ಮತ್ತು ಭಾವಚಿತ್ರ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಕೆಯನ್ನು ಪೂರ್ಣಗೊಳಿಸಿ.

ಪ್ರಮುಖ ಲಿಂಕುಗಳು

ಸ್ನೇಹಿತರೇ ಮಹಿಳಾ ಮತ್ತು ಮಕ್ಕಳ ಅಭಿವ್ರಡ್ಡಿ ಇಲಾಖೆಯಲ್ಲಿ ಉದ್ಯೋಗಾವಕಾಶ ಪಡೆದುಕೊಳ್ಳಲು ಇದು ಉತ್ತಮ ಅವಕಾಶವಾಗಿದ್ದು ಈ ಮೇಲೆ ತಿಳಿಸಿದ ಹಂತಗಳನ್ನು ಅನುಸರಿಸಿ ಅರ್ಜಿ ಸಲ್ಲಿಕೆಯನ್ನು ಪೂರ್ಣಗೊಳಿಸಿ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಡಬಲ್ಯು‌ಸಿ‌ಡಿ ಚಿತ್ರದುರ್ಗ (WCD Chitradurga) ಅಧಿಕ್ರತ ಪೋರ್ಟಲ್ ಗೆ ಭೇಟಿ ನೀಡಬಹುದು.

Leave a Comment